ಕಾರಿಗೆ ಕಾಸಿದೆ? ದಸರಾಕ್ಕೆ ದುಡ್ಡಿಲ್ಲ | ಜಸ್ಟ್ 20 ಲಕ್ಷ ಕೊಟ್ಟ ಸರ್ಕಾರ | ಯಾರ್ಯಾರು ಏನೇನು ಹೇಳಿದ್ರು ?

KS Eshwarappa, KB Prasannakumar, SN Chennabasappa, Shivamogga spoke about Dasara grants. ಕೆ.ಎಸ್​.ಈಶ್ವರಪ್ಪ, ಕೆ.ಬಿ.ಪ್ರಸನ್ನಕುಮಾರ್, ಎಸ್​ಎನ್​ ಚೆನ್ನಬಸಪ್ಪ, ಶಿವಮೊಗ್ಗ ದಸರಾ ಅನುದಾನದ ಬಗ್ಗೆ ಮಾತನಾಡಿದ್ದಾರೆ

ಕಾರಿಗೆ ಕಾಸಿದೆ? ದಸರಾಕ್ಕೆ ದುಡ್ಡಿಲ್ಲ | ಜಸ್ಟ್ 20 ಲಕ್ಷ ಕೊಟ್ಟ ಸರ್ಕಾರ | ಯಾರ್ಯಾರು ಏನೇನು ಹೇಳಿದ್ರು ?

KARNATAKA NEWS/ ONLINE / Malenadu today/ Oct 21, 2023 SHIVAMOGGA NEWS

ಅದ್ದೂರಿ ದಸರಾ ಎಂದು ಎಂದು ಶಿವಮೊಗ್ಗ ದಸರಾಕ್ಕೆ ರಾಜ್ಯ ಸರ್ಕಾರ ಕೇವಲ 20 ಲಕ್ಷ ರೂಪಾಯಿಗಳ ಅನುದಾನ ನೀಡಿದೆ. ಇದು ತೀವ್ರ ಟೀಕೆಗೆ ಗುರಿಯಾಗಿದೆ. ಒಂದುವರೆ ಕೋಟಿ ರೂಪಾಯಿ ಅನುದಾನಕ್ಕಾಗಿ ಶಿವಮೊಗ್ಗ ನಗರ ಪಾಲಿಕೆಯಿಂದ ಬೇಡಿಕೆ ಇಡಲಾಗಿತ್ತು. ಆದರೆ ಕೇವಲ 20 ಲಕ್ಷ ರೂಪಾಯಿ ಹಣವನ್ನು ಕಾಂಗ್ರೆಸ್ ಸರ್ಕಾರ ನೀಡಿದೆ. 

ಇದು ಶಿವಮೊಗ್ಗದ ವಿವಿಧ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ . ಕಾಂಗ್ರೆಸ್ ಮುಖಂಡರು ತಮ್ಮದೆ ಸರ್ಕಾರವಾದ ಕಾರಣಕ್ಕೆ ಮೌನಕ್ಕೆ ಶರಣಾದರೆ, ಬಿಜೆಪಿ ಮುಖಂಡರ ಈಶ್ವರಪ್ಪ  ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ. ಇನ್ನೊಂದೆಡೆ ಜೆಡಿಎಸ್​ ಕೆಬಿ ಪ್ರಸನ್ನ ಕುಮಾರ್ ಕೂಡ ವಾಗ್ದಾಳಿ ನಡೆಸಿದ್ದಾರೆ.  

ಶಿವಮೊಗ್ಗದ ಟಿಪ್ಪುನಗರದ ರಾಜೀಕ್​​, ಭದ್ರಾವತಿ ಗ್ರೌಡಳ್ಳಿ ತೋಟದಲ್ಲಿ ಕೊಲೆಯಾಗೋದಕ್ಕೆ ಕಾರಣವೇನು? EXCLUSIVE

ಸರ್ಕಾರಕ್ಕೆ ಬಡತನವಿದ್ದರೆ 20 ಲಕ್ಷ ರೂ ವಾಪಸ್ ಪಡೆಯಲಿ ಎಂದು ತಮ್ಮ ಸುದ್ದಿಗೋಷ್ಟಿಯಲ್ಲಿ ಕೆ.ಎಸ್​.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.  ಶಿವಮೊಗ್ಗಕ್ಕೆ ರಾಜ್ಯ ಸರ್ಕಾರ ಕನಿಷ್ಠ 1 ಕೋಟಿ ರೂ. ನೀಡಬೇಕಿತ್ತು, ಆದರೆ ಕೇವಲ 20 ಲಕ್ಷ ನೀಡಿರುವುದು ಏನಕ್ಕೂ ಸಾಲುವುದಿಲ್ಲ, ಸರ್ಕಾರಕ್ಕೆ ಬಡತನ ಇದ್ದರೆ ಇದನ್ನು ಸಹ ವಾಪಾಸ್ಸು ಪಡೆಯಲಿ, ನಾವು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ದಸರಾ ಮಾಡುತ್ತೇವೆ ಎಂದಿದ್ದಾರೆ. ಹಿಂದಿನ ಎಲ್ಲಾ ಸರ್ಕಾರಗಳು ಶಿವಮೊಗ್ಗ

ದಸರಾಕ್ಕೆ ಅಗತ್ಯ ಹಣ ನೀಡಿವೆ. ಆದರೆ ಈಗಿನ ಸರ್ಕಾರ ಇದಕ್ಕೆ ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ. 

BREAKING NEWS | ಭದ್ರಾವತಿ ಗ್ರಾಮಾಂತರದಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ | ಓರ್ವನ ಕೊಲೆ!

ಇನ್ನೊಂದೆಡೆ ಇದೇ ವಿಚಾರಕ್ಕೆ ಸಂಬಂದಿಸಿದಂತೆ  ಜೆಡಿಎಸ್‌ ಮುಖಂಡ ಕೆ.ಬಿ. ಪ್ರಸನ್ನಕುಮಾರ್‌,ಈ ಹಿಂದೆ ಸಿದ್ದರಾಮಯ್ಯರವರ ಸರ್ಕಾರದ ಅವಧಿಯಲ್ಲಿ ಒಂದು ಕೋಟಿ ರೂಪಾಯಿ ನೀಡಲಾಗಿತ್ತು. ಆದರೆ ಈ ಸಲ 20 ಲಕ್ಷ ನೀಡಲಾಗಿದೆ. ಹಣವಿಲ್ಲ ಎಂದು ಅನಿಸುತ್ತಿಲ್ಲ,  ಏಕೆಂದರೆ ಹೊಸ ಕಾರುಗಳನ್ನ ತೆಗೆದುಕೊಳ್ಳುತ್ತಿದ್ದಾರೆ ಎಂದು ಪರೋಕ್ಷವಾಗಿ ವ್ಯಂಗ್ಯವಾಡಿದ್ರು. 

 

ಇದೇ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಚನ್ನಬಸಪ್ಪರವರು, ಶಾಸಕರ ಅನುದಾನ ಅಥವಾ ಇತರೇ ಅನುದಾನ ಬಳಸಿ ಅದ್ದೂರಿ ದಸರಾ ಮಾಡಿಯೇ ತೀರುತ್ತೇವೆ ಎಂದಿದ್ದಾರೆ.  


ಇನ್ನಷ್ಟು ಸುದ್ದಿಗಳು 

ಶೇ...ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ