ಶಿವಮೊಗ್ಗದಲ್ಲಿಯು ರಿಷಬ್​ಶೆಟ್ಟಿ ಕಾಂತಾರ ಅಬ್ಬರ ದಾಖಲೆ

ರಾಜಕುಮಾರ ಸಿನಿಮಾ ಇದೇ ಮಲ್ಲಿಕಾರ್ಜುನ ಥಿಯೇಟರ್​ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ಕೆಜಿಎಫ್​ 2 ಸಿನಿಮಾದ ಅಬ್ಬರಕ್ಕೆ ಓಟಿಟಿಯಲ್ಲಿ ಆದ ಸಿನಿಮಾ ರಿಲೀಸ್ ಕೊಂಚ ಬ್ರೇಕ್ ಹಾಕಿತ್ತು. ಈ ನಡುವೆ ಕಾಂತಾರ ಓಟಿಟಿ ಪ್ರಿಂಟ್​ನ ನಡುವೆಯು ಉತ್ತಮ ಪ್ರದರ್ಶನ ಕಾಣುತ್ತಿದೆ.

ರಿಷಬ್​ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ಪ್ಯಾನ್​ ಇಂಡಿಯಾ ತುಂಬಾ ದಾಖಲೆಗಳನ್ನೆ ಬರೆದು ಬೀಗುತ್ತಿದೆ. ಓಟಿಟಿ ಪ್ಲಾಟ್​ ಫಾರಮ್​ನಲ್ಲಿ ಸಿನಿಮಾ ರಿಲೀಸ್ ಆದರೂ ಸಹ ಸಿನಿಮಾವನ್ನು ಥಿಯೇಟರ್​ನಲ್ಲಿಯೇ ನೋಡುವವರ ಸಂಖ್ಯೆ ಇನ್ನೂ ಸಹ ಗಣನೀಯವಾಗಿ ಕಡಿಮೆಯಾಗಿಲ್ಲ. ಈ ಕಾರಣಕ್ಕೆ ಥಿಯೇಟರ್​ಗಳಲ್ಲಿ ಸಿನಿಮಾ ಅರ್ಧಶತಕ ಆಚರಣೆ ಮಾಡುತ್ತಿದೆ. 

ಇದನ್ನು ಸಹ ಓದಿ : ಸಾಕ್ಷಾತ್ ಶಿವನಿಂದಲೇ ಉದ್ಭವಿಸುವ ಕೊಳದಲ್ಲಿ ಬಿಲ್ವಪತ್ರೆ ಭವಿಷ್ಯ ಹೇಳುತ್ತೆ/ ಕಾಯಿಲೆಯು ವಾಸವಾಗುತ್ತೆ/ ಅಚ್ಚರಿ ಮೂಡಿಸುವ ಈ ಕ್ಷೇತ್ರ ಇರೋದಿಲ್ಲಿ? ಹೋಗೋದೇಗೆ? ವಿವರ ಇಲ್ಲಿದೆ

ಈ ನಡುವೆ ಶಿವಮೊಗ್ಗದಲ್ಲಿಯು ಕಾಂತಾರ ಸಿನಿಮಾ ವಿಶಿಷ್ಟ ದಾಖಲೆಯೊಂದನ್ನು ಬರೆದಿದೆ. ಶಿವಮೊಗ್ಗ ನಗರದಲ್ಲಿ ಇರುವ ಕೆಲವೇ ಕೆಲವು ಥಿಯೇಟರ್​ಗಳಲ್ಲಿ ಸಿನಿಮಾಗಳು ಎರಡು ವಾರಕ್ಕೂ ಹೆಚ್ಚು ಪ್ರದರ್ಶನ ಕಾಣುವುದು ಕಡಿಮೆ ಎಂದೇ ಹೇಳಲಾಗುತ್ತಿತ್ತು. ಇದರ ನಡುವೆ ಕಾಂತಾರ ಸಿನಿಮಾ ನಗರದ ಮಲ್ಲಿಕಾರ್ಜುನ  ಥಿಯೇಟರ್ ನಲ್ಲಿ ಸಿನಿಮಾ ಆರವತ್ತು ದಿನವನ್ನು ದಾಟಿ ಪ್ರದರ್ಶನ ಕಾಣುತ್ತಿದೆ. 

ಇದನ್ನು ಸಹ ಓದಿ : ಎಸ್.ಬಂಗಾರಪ್ಪ ನೆನಪು | ಜೀವದ ಗೆಳೆಯರಂತಿದ್ದ ಬೇಳೂರು ಗೋಪಾಲಕೃಷ್ಣ ಮತ್ತು ಹರತಾಳು ಹಾಲಪ್ಪ

ಶಿವಮೊಗ್ಗ ನಗರದಲ್ಲಿ ಈ ಮಟ್ಟಿಗೆ ಪ್ರದರ್ಶನ ಕಾಣುತ್ತಿರುವ ಕಾಂತಾರ  ದಾಖಲೆಯೊಂದನ್ನ ಬರೆದಿದೆ. ಇದೇ ಥಿಯೇಟರ್​ನಲ್ಲಿ ಪುನೀತ್​ ರಾಜಕುಮಾರ್​ರವರ ರಾಜಕುಮಾರ ಸಿನಿಮಾದ ನಂತರ, ಕೆಜಿಎಫ್​ 2 ಸಿನಿಮಾ ಐವತ್ತು ದಿನಗಳ ಕಾಲ ಪ್ರದರ್ಶನ ಕಂಡಿತ್ತು. ಇದೀಗ ಕಾಂತಾರ ಸಿನಿಮಾ ಮಲ್ಲಿ ಕಾರ್ಜುನ ಥಿಯೇಟರ್​ನಲ್ಲಿಯೇ 60 ದಿನ ದಾಟಿದೆ. ಅಲ್ಲದೆ ಉತ್ತಮ ಪ್ರದರ್ಶನ ಕಾಣುತ್ತಿದೆ. 

ಇದನ್ನು ಸಹ ಓದಿ : ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಇನ್ನೊಂದು ದೊಡ್ಡ ಅವಕಾಶ

ರಾಜಕುಮಾರ ಸಿನಿಮಾ ಇದೇ ಮಲ್ಲಿಕಾರ್ಜುನ ಥಿಯೇಟರ್​ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ಕೆಜಿಎಫ್​ 2 ಸಿನಿಮಾದ ಅಬ್ಬರಕ್ಕೆ ಓಟಿಟಿಯಲ್ಲಿ ಆದ ಸಿನಿಮಾ ರಿಲೀಸ್ ಕೊಂಚ ಬ್ರೇಕ್ ಹಾಕಿತ್ತು. ಈ ನಡುವೆ ಕಾಂತಾರ ಓಟಿಟಿ ಪ್ರಿಂಟ್​ನ ನಡುವೆಯು ಉತ್ತಮ ಪ್ರದರ್ಶನ ಕಾಣುತ್ತಿದೆ. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

ಕೆಜಿಎಫಗ