ಶಿವಮೊಗ್ಗ ಕ್ರೈಂ ನ್ಯೂಸ್​ : ಗಂಡ ಹೆಂಡ್ತಿ ಜಗಳ ಬಿಡಿಸಿದ್ದಕ್ಕೆ ಚಾಕು ಇರಿದರು/ ಮಗನ ವಿರುದ್ಧವೇ ತಾಯಿ ಕೊಟ್ಟಳು ಕಂಪ್ಲೇಂಟ್

ಕ್ಕದ ಮನೆಯವರೊಂದಿಗೆ ಮಾತನಾಡ್ತಾ ನಿಂತಿದ್ಧಾಗ, ದಾಳಿ ನಡೆಸಿದ್ದ ಶಿವಕುಮಾರ್​ ಸತೀಶ್​ರ ಬಲಬುಜಕ್ಕೆ ಚಾಕುವಿನಿಂದ ಇರಿದಿದ್ಧಾನೆ. ಈ ಸಂಬಂಧ ಚಿಕಿತ್ಸೆ ಪಡೆದುಕೊಂಡು ಸತೀಶ್​ ಗ್ರಾಮಾಂತರ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ಶಿವಮೊಗ್ಗ ಕ್ರೈಂ ನ್ಯೂಸ್​ :  ಗಂಡ ಹೆಂಡ್ತಿ ಜಗಳ ಬಿಡಿಸಿದ್ದಕ್ಕೆ ಚಾಕು ಇರಿದರು/ ಮಗನ ವಿರುದ್ಧವೇ ತಾಯಿ ಕೊಟ್ಟಳು ಕಂಪ್ಲೇಂಟ್

ಗಂಡ ಹೆಂಡ್ತಿ ಜಗಳ ಬಿಡಿಸಿದ್ದಕ್ಕೆ ಚಾಕು ಇರಿದರು

ಶಿವಮೊಗ್ಗ ಗ್ರಾಮಾಂತರ ಪೊಲೀಸ್​ ಸ್ಟೇಷನ್​ ವ್ಯಾಪ್ತಿಯಲ್ಲಿ ಪ್ರಕರಣವೊಂದು ದಾಖಲಾಗಿದೆ. ದಾಖಲಾದ ಕೇಸ್​ನ ಪ್ರಕಾರ,  ಪಿಳ್ಖಂಗೆರೆಯಲ್ಲಿ ಗಂಡ ಹೆಂಡತಿ ನಡುವಿನ ಜಗಳ ಬಿಡಿಸಿ ಬುದ್ದಿವಾದ ಹೇಳಿದ್ದಕ್ಕೆ , ಚಾಕು ಇರಿದಿರುವ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ಶಿವಕುಮಾರ್ ಎಂಬವರು, ತಮ್ಮ ಪತ್ನಿಯ ಜೊತೆಗೆ ಇದೇ ಡಿಸೆಂಬರ್​ 9 ರಂದು ಜಗಳವಾಡುತ್ತಿದ್ದರಂತೆ. ಈ ವೇಳೇ ಅದನ್ನು ನೀಡಿದ್ದ ಸತೀಶ್ ಎಂಬವರು, ಇಬ್ಬರ ಜಗಳ ಬಿಡಿಸಿ ಮನೆಗೆ ಹೋಗುವಂತೆ ಸಲಹೆ ಕೊಟ್ಟು ಬುದ್ದಿ ಮಾತು ಹೇಳಿದ್ದರಂತೆ. ಈ ವೇಳೆ ಶಿವಕುಮಾರ್ ಸತೀಶ್​ಗೆ ನಿಂದಿಸಿದ್ಧಾರೆ. ಇನ್ನೂ ಇದರ ಬಳಿಕ ಸತೀಶ್​ರವರು ತಮ್ಮ ಪಕ್ಕದ ಮನೆಯವರೊಂದಿಗೆ ಮಾತನಾಡ್ತಾ ನಿಂತಿದ್ಧಾಗ, ದಾಳಿ ನಡೆಸಿದ್ದ ಶಿವಕುಮಾರ್​ ಸತೀಶ್​ರ ಬಲಬುಜಕ್ಕೆ ಚಾಕುವಿನಿಂದ ಇರಿದಿದ್ಧಾನೆ. ಈ ಸಂಬಂಧ ಚಿಕಿತ್ಸೆ ಪಡೆದುಕೊಂಡು ಸತೀಶ್​ ಗ್ರಾಮಾಂತರ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. 

ಇದನ್ನು ಸಹ ಓದಿ : ಸಾಕ್ಷಾತ್ ಶಿವನಿಂದಲೇ ಉದ್ಭವಿಸುವ ಕೊಳದಲ್ಲಿ ಬಿಲ್ವಪತ್ರೆ ಭವಿಷ್ಯ ಹೇಳುತ್ತೆ/ ಕಾಯಿಲೆಯು ವಾಸವಾಗುತ್ತೆ/ ಅಚ್ಚರಿ ಮೂಡಿಸುವ ಈ ಕ್ಷೇತ್ರ ಇರೋದಿಲ್ಲಿ? ಹೋಗೋದೇಗೆ? ವಿವರ ಇಲ್ಲಿದೆ

ಮಗನ ವಿರುದ್ಧವೇ ದೂರ ಕೊಟ್ಟ ತಾಯಿ

ಇನ್ನೊಂದು ಪ್ರಕರಣದಲ್ಲಿ ಮನೆಯಲ್ಲಿದ್ದ ಚಿನ್ನಾಭರಣವನ್ನು ಕದ್ದ ಆರೋಪವೊಂದರ ಅಡಿಯಲ್ಲಿ ತಾಯಿಯೇ ಮಗನ ವಿರುದ್ಧ ದೂರು ನೀಡಿದ್ದಾರೆ. ಶ್ರೀರಾಮ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ರತ್ನಮ್ಮ ಎಂಬವರು, ಮಗ ಗಿರೀಶ್​ ವಿರುದ್ಧ ದೂರು ನೀಡಿದ್ದಾರೆ. ಆಸ್ಪತ್ರೆಯ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ  ಮನೆಯಲ್ಲಿ ಆಭರಣಗಳನ್ನು ಕದ್ದೊಯ್ದ ಆರೋಪವನ್ನು ತಾಯಿ ಮಾಡಿದ್ಧಾರೆ.

ಇದನ್ನು ಸಹ ಓದಿ : ಎಸ್.ಬಂಗಾರಪ್ಪ ನೆನಪು | ಜೀವದ ಗೆಳೆಯರಂತಿದ್ದ ಬೇಳೂರು ಗೋಪಾಲಕೃಷ್ಣ ಮತ್ತು ಹರತಾಳು ಹಾಲಪ್ಪ

ಮನೆ ಹಂಚು ತೆಗೆದು 1200 ಉಂಗುರ ಕದ್ದರು

ಈ ಮಧ್ಯೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಪ್ರಕರಣವೊಂದು ದಾಖಲಾಗಿದೆ. ಶಿವಮೊಗ್ಗ ನಗರದ ಉಪ್ಪಾರ ಕೇರಿಯಲ್ಲಿ ಕರಿಬಸಪ್ಪ ರವರಿಗೆ ಸೇರಿದ ಮನೆಯಲ್ಲಿ  ಮೇಲ್ಚಾವಣಿಯೆ ಹಂಚನ್ನು ತೆಗೆದು ಟೇಬಲ್ ಡ್ರಾದಲ್ಲಿ ಇಟ್ಟಿದ್ದ 1200 ಉಂಗುರಗಳನ್ನ ಕಳ್ಳರು ಕದ್ದಿದ್ದಾರೆ.  ಸುಮಾರು 500 ಗ್ರಾಂ ತೂಕದ 30,000/-ರೂ ಬೆಲೆಬಾಳುವ  ವಿವಿಧ ರೀತಿಯ ಉಂಗುರಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಸಂಬಂಧ  ಕಂಪ್ಲೇಂಟ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸ್ತಿದ್ದಾರೆ.

ಇದನ್ನು ಸಹ ಓದಿ : ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಇನ್ನೊಂದು ದೊಡ್ಡ ಅವಕಾಶ

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link