ಬೈಕ್​ ಮೇಲೆ ಹೋಗುತ್ತಿದ್ದಾಗ ಮೈಮೇಲೆ ಬಿದ್ದ ಮರ! ಸಿಸಿ ಕ್ಯಾಮರಾದಲ್ಲಿ ದಾಖಲಾದ ದೃಶ್ಯ

While riding the bike, the tree fell on the biker! Scene recorded in CC camera Gondi Chatnalli

ಬೈಕ್​ ಮೇಲೆ ಹೋಗುತ್ತಿದ್ದಾಗ ಮೈಮೇಲೆ ಬಿದ್ದ ಮರ! ಸಿಸಿ ಕ್ಯಾಮರಾದಲ್ಲಿ ದಾಖಲಾದ ದೃಶ್ಯ

Shivamogga Feb 13, 2024 |  ಶಿವಮೊಗ್ಗದ  ಗೊಂದಿ ಚಟ್ನಹಳ್ಳಿ ಸಮೀಪ ಮರವೊಂದು ಬಿದ್ದು ಮೂವರು ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ರಸ್ತೆ ಮೇಲೆ ಹೋಗುತ್ತಿದ್ದ ಬೈಕ್​ ಮೇಲೆ ಮರ ಬಿದ್ದ  ಪರಿಣಾಮ ಒಂದು  ಮಗು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. 

ಗೊಂದಿ ಚಟ್ನಹಳ್ಳಿ ಸಮೀಪ ಘಟನೆ 

ಗೋಂದಿ ಚಟ್ನಳ್ಳಿ ಸಮೀಪ ಮೇನ್​ ರೋಡ್​ನಲ್ಲಿ  ವಾಹನಗಳು ಸಾಗುತ್ತಿದ್ದವು, ಇದೇ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಮರವೊಂದು ನೆಲಕ್ಕೆ ಉರುಳಿದೆ. ನೆಲಕ್ಕೆ ಉರುಳಿದ ಮರದ ಕೊಂಬೆಯೊಂದು ನೇರವಾಗಿ ಅದೇ ದಾರಿಯಲ್ಲಿ ಬರುತ್ತಿದ್ದ ಬೈಕ್​ವೊಂದರ ಮೇಲೆ ಬಿದ್ದಿದೆ. ಪರಿಣಾಮ ಬೈಕ್​ನಲ್ಲಿದ್ದ ದಂಪತಿ ಹಾಗು ಮಗು ನೆಲಕ್ಕುರುಳಿದ್ದಾರೆ. ತೀವ್ರವಾಗಿ ಗಾಯಗೊಂಡ ಅವರನ್ನ ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಇನ್ನೂ ಘಟನೆ ಸಂದರ್ಭದಲ್ಲಿ ಬೈಕ್​ನ ಸಮೀಪದಲ್ಲಿಯೇ ಲಾರಿಯೊಂದು ಸಹ ಬಂದಿದೆ. ಮರ ಬಿದ್ದ ತಕ್ಷಣವೇ ಲಾರಿಯು ಸಹ ಅಲ್ಲಿಯೇ ನಿಂತಿದೆ. ಈ ಎಲ್ಲಾ ದೃಶ್ಯಗಳು ಸ್ಥಳೀಯವಾಗಿ ಹಾಕಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.