ರಾಜಕಾಲುವೆಗೆ ಬಿದ್ದ ಎಮ್ಮೆ! ಜೆಸಿಬಿ ಬಳಸಿ ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ!

A buffalo that fell into a canal was rescued by firefighters using JCB!

ರಾಜಕಾಲುವೆಗೆ ಬಿದ್ದ ಎಮ್ಮೆ! ಜೆಸಿಬಿ ಬಳಸಿ ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ!

KARNATAKA NEWS/ ONLINE / Malenadu today/ May 30, 2023 SHIVAMOGGA NEWS

ಶಿವಮೊಗ್ಗ/ ನಿನ್ನೆ ಬೀಸಿದ ಬಿರುಗಾಳಿ ಹಾಗೂ ಸುರಿದ ಮಳೆಯ ನಡುವೆ ಎಮ್ಮೆಯೊಂದು ರಾಜಕಾಲುವೆಯಲ್ಲಿ ಸಿಲುಕಿ ಒದ್ದಾಡುತ್ತಿತ್ತು. ರಾಜಕಾಲುವೆಗೆ ಬಿದ್ದ ಎಮ್ಮೆ ಮೇಲಕ್ಕೆ ಬರಲಾಗದೇ, ಸಹಾಯಕ್ಕಾಗಿ ಕೂಗುತ್ತಿತ್ತು. ಎಮ್ಮೆಯ ಕೂಗಾಟವನ್ನು ನೋಡಿದ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. 

ವಿನೋಬನಗರದ ಸಮೀಪ ಬರುವ ರಾಜಕಾಲುವೆಯಲ್ಲಿ ಮಳೆ ನೀರು ಸೇರಿ ತುಸು ಜಾಸ್ತಿಯೇ ನೀರು ಹರಿಯುತ್ತಿತ್ತು. ಇನ್ನೂ ರಾಜಕಾಲುವೆಗೆ ಬಿದ್ದ ಎಮ್ಮೆಯು ಸಹ ನಿತ್ರಾಣಗೊಂಡಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಎಮ್ಮೆಯನ್ನು ರಾಜಕಾಲುವೆಯಿಂದ ಮೇಲಕ್ಕೆತ್ತಿ ರಕ್ಷಣೆ ಮಾಡಿದರು.  

shimoga rain report/ ಸಂಜೆ ಹೊತ್ತಿಗೆ ಸುರಿದ ಮಳೆ, ಗಾಳಿ, ಸಿಡಿಲಿಗೆ ಶಿವಮೊಗ್ಗದಲ್ಲಿ ಏನೇನೆಲ್ಲಾ ಹಾನಿಯಾಗಿದೆ ನೋಡಿ!

ಶಿವಮೊಗ್ಗದಲ್ಲಿ ನಿನ್ನೆ ಸಂಜೆ ಹೊತ್ತಿಗೆ ಬೀಸಿದ ಬಿರುಗಾಳಿ ಹಾಗೂ ಸಿಡಿಲು, ಗುಡುಗು ಮಳೆಗೆ ಭಾರೀ ಹಾನಿಯಾಗಿದೆ. ಬಿರುಗಾಳಿಗೆ ಹಲವೆಡೆ ಮರಗಳು ಉರುಳಿಬಿದ್ದಿದ್ದು ವಾಹನಗಳು ಜಖಂಗೊಂಡಿದೆ. ಸಿಡಿಲಿಗೆ ಓರ್ವ ಮಹಿಳೆ ಬಲಿಯಾಗಿದ್ದಾಳೆ. ಮನೆಗಳ ಹಂಚುಗಳು, ಆರ್​ಸಿಸಿ ನೆರಳಿಗೆ ಹಾಕಿದ್ದ ಶೀಟ್​ ಸ್ಲ್ಯಾಬ್​ಗಳು ಗಾಳಿಗೆ ಹಾರಿ ಹೋಗಿವೆ. ಇನ್ನೂ ಮಳೆ ಹಿನ್ನೆಲೆಯಲ್ಲಿ ರಾತ್ರಿಯೇ ನಗರದ ಶಾಸಕ ಎಸ್​ಎನ್​ ಚನ್ನಬಸಪ್ಪ ಸಿಟಿ ರೌಂಡ್ಸ್ ಹಾಕಿ, ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ಪ್ರಯತ್ನ ಮಾಡಿದ್ಧಾರೆ. 

ಸಿಡಿಲಿಗೆ ಓರ್ವ ಮಹಿಳೆ ಬಲಿ

ನಿನ್ನೆ ಸುರಿದ ಮಳೆಯ ವೇಳೆ ಸಿಡಿಲಿಗೆ ಓರ್ವ ಮಹಿಳೆ ಬಲಿಯಾಗಿದ್ಧಾಳೆ. ವಿನೊಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆಶ್ರಯ ಬಿ ಬಡಾವಣೆಯಲ್ಲಿ ಈ ಘಟನೆ ಸಂಭವಿಸಿದೆ.  ಲಕ್ಷ್ಮೀಬಾಯಿ W/o ಕುಮಾರ ನಾಯಕ, ಮೃತ ಮಹಿಳೆ.  ಇವರು ಇವತ್ತು ಕುರಿಗಳಿಗೆ ಮೇವು ತರಲು ಹೋದಾಗ ಸಿಡಿಲು ಬಡಿದಿದೆ. ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ಧಾರೆ. 

ತೆಂಗಿನ ಮರ ಉರುಳಿ ಕಾರುಗಳು ಜಖಂ

 ಇನ್ನೂ ನಗರದಲ್ಲಿ ಬೀಸಿದ ಬಾರೀ ಗಾಳಿಗೆ ಹಲವೆಡೆ ಮರ ಬಿದ್ದು ಹಾನಿ ಉಂಟಾಗಿದೆ.  ತೆಂಗಿನ ಮರವೊಂದು ಬಿದ್ದು ಎರಡು ಕಾರುಗಳು ಜಖಂಗೊಂಡ ಘಟನೆ ಸುರಭಿ ಹೋಟೆಲ್ ಬಳಿ ಸಂಭವಿಸಿದೆ. 

ಇಲ್ಲಿರುವ ಕೆನರಾ ಬ್ಯಾಂಕ್ ಬಳಿಯಲ್ಲಿದ್ದ ತೆಂಗಿನ ಮರವೊಂದು ಬಿದ್ದು ಎರಡು ಕಾರುಗಳು ಬಹುತೇಕ ಜಖಂಗೊಂಡಿದೆ. ಅದೃಷ್ಟಕ್ಕೆ ಯಾವುದೇ ಪ್ರಾಣಪಾಯ ಉಂಟಾಗಿಲ್ಲ. 

ಮರಬಿದ್ದು ಕಾಂಪೌಂಡ್​ ಧ್ವಂಸ

ಇನ್ನೂ ದೈವಜ್ಞ ಕಲ್ಯಾಣ ಮಂದಿರದ ಹತ್ತಿರ ತೆಂಗಿನಮರವೊಂದು ಉರುಳಿಬಿದ್ದಿದ್ದು ಮನೆಯೊಂದರ ಕಾಂಪೌಂಡ್ ಹಾಳಾಗಿದೆ. ದೈವಜ್ಞ ಕಲ್ಯಾಣ ಮಂದಿರದ ಹಿಂಭಾಗ ರಾಯಲ್ ಮೆಡಿಕಲ್ ಅವರ ಮನೆಯಲ್ಲಿದ್ದ ತೆಂಗಿನ ಮರ  ಉರುಳಿ ಬಿದ್ದು ಈ ಘಟನೆ ಸಂಭವಿಸಿದ್ದು ಅದೃಷ್ಟಕ್ಕೆ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. 

ಸೋಮಿನಕೊಪ್ಪದಲ್ಲಿ ಹಾರಿ ಹೋದ ಮೇಲ್ಚಾವಣಿ

ಅತ್ತ ಸೋಮಿನಕೊಪ್ಪದಲ್ಲಿ ಮಳೆಗಾಳಿ ಮನೆಯೊಂದರ ಶೀಟುಗಳು ಹಾರಿಹೋಗಿವೆ. ಭಾರೀ ಗಾಳಿಗೆ ಈ ಅವಾಂತರ ಸಂಭವಿಸಿದ್ದು, ಯಾರಿಗೂ ಅಪಾಯ ಉಂಟಾಗಿಲ್ಲ.ಗೋಪಿನಾಥ್ ಎಂಬುವವರ ಮನೆ ಇದಾಗಿದ್ದು,  ಮನೆಯ ಮೇಲಿನ ಸೀಟುಗಳು ಹಾರಿಹೋಗಿವೆ. 

ಒಂದೇ ರೋಡ್​ನಲ್ಲಿ ಉರುಳಿದ ಮೂರು ಮರ

ಆ ಕಡೆ ವಿನೋಬನಗರ ಒಂದನೇ ಹಂತದಲ್ಲಿ ಬರುವ ರಸ್ತೆಯೊಂದರಲ್ಲಿ ನಿನ್ನೆ ಮಳೆ ಗಾಳಿ ಮೂರು ಮರಗಳು ಧರೆಗೆ ಉರುಳಿದೆ. ಪರಿಣಾಮ ರಸ್ತೆ ಸಂಚಾರ ಬಂದ್​ ಆಗಿದ್ಸಷ್ಟೆ ಅಲ್ಲದೆ,  ಒಂದೇ ರಸ್ತೆಯಲ್ಲಿ ಮೂರು ಮರಗಳು ಉರುಳಿವೆ

ಬೊಮ್ಮನಕಟ್ಟೆಯಲ್ಲಿ ಹಾರಿ ಹೋದ ಶೀಟ್ 

ಇನ್ನೂ ಬೊಮ್ಮನಕಟ್ಟೆ ನಿವಾಸಿ ಪ್ರಕಾಶ್ ಎಂಬವರಿಗೆ ಸೇರಿದ ಆರ್​ಸಿಸಿ ಮನೆಯ ಮೇಲೆ ಹಾಕಿದ್ದ ಶೀಟ್​ ಸ್ಲ್ಯಾಬ್​ ಬೀಸಿದ ಗಾಳಿಗೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದೆ. ಅಲ್ಲದೆ ಅದರ ಮೇಲೆ ಅಳವಡಿಸಲಾಗಿದ್ದ ಸೋಲಾರ್​ ಕೂಡ ಧ್ವಂಸಗೊಂಡಿದ್ದು, ಅಪಾರ ನಷ್ಟವಾಗಿದೆ. 

ಶಾಸಕರ ಸಿಟಿ ರೌಂಡ್ಸ್​

ಇನ್ನೂ ಮಳೆಹಾನಿಗಳ ಬಗ್ಗೆ ವಿಷಯ ತಿಳಿದ ಬೆನ್ನಲ್ಲೆ ಶಿವಮೊಗ್ಗ ನಗರದ ನೂತನ ಶಾಸಕ ಎಸ್​ಎನ್ ಚನ್ನಬಸಪ್ಪರವರು ತೆರವು ಕಾರ್ಯಾಚರಣೆಯ ಸಂಬಂಧಿಸಿದಂತೆ ಮರ ಉರುಳಿ ಬಿದ್ದ ಸ್ಥಳಗಳಿಗೆ  ಭೇಟಿ ನೀಡಿ ಪರಿಶೀಲನೆ ನಡೆಸಿದರು