shimoga rain report/ ಸಂಜೆ ಹೊತ್ತಿಗೆ ಸುರಿದ ಮಳೆ, ಗಾಳಿ, ಸಿಡಿಲಿಗೆ ಶಿವಮೊಗ್ಗದಲ್ಲಿ ಏನೇನೆಲ್ಲಾ ಹಾನಿಯಾಗಿದೆ ನೋಡಿ!

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ May 30, 2023 SHIVAMOGGA NEWS

ಶಿವಮೊಗ್ಗದಲ್ಲಿ (shimoga rain report) ನಿನ್ನೆ ಸಂಜೆ ಹೊತ್ತಿಗೆ ಬೀಸಿದ ಬಿರುಗಾಳಿ ಹಾಗೂ ಸಿಡಿಲು, ಗುಡುಗು ಮಳೆಗೆ ಭಾರೀ ಹಾನಿಯಾಗಿದೆ. ಬಿರುಗಾಳಿಗೆ ಹಲವೆಡೆ ಮರಗಳು ಉರುಳಿಬಿದ್ದಿದ್ದು ವಾಹನಗಳು ಜಖಂಗೊಂಡಿದೆ. ಸಿಡಿಲಿಗೆ ಓರ್ವ ಮಹಿಳೆ ಬಲಿಯಾಗಿದ್ದಾಳೆ. ಮನೆಗಳ ಹಂಚುಗಳು, ಆರ್​ಸಿಸಿ ನೆರಳಿಗೆ ಹಾಕಿದ್ದ ಶೀಟ್​ ಸ್ಲ್ಯಾಬ್​ಗಳು ಗಾಳಿಗೆ ಹಾರಿ ಹೋಗಿವೆ. ಇನ್ನೂ ಮಳೆ ಹಿನ್ನೆಲೆಯಲ್ಲಿ ರಾತ್ರಿಯೇ ನಗರದ ಶಾಸಕ ಎಸ್​ಎನ್​ ಚನ್ನಬಸಪ್ಪ ಸಿಟಿ ರೌಂಡ್ಸ್ ಹಾಕಿ, ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ಪ್ರಯತ್ನ ಮಾಡಿದ್ಧಾರೆ. 

Malenadu Today Shivamogga

ಸಿಡಿಲಿಗೆ ಓರ್ವ ಮಹಿಳೆ ಬಲಿ

ನಿನ್ನೆ ಸುರಿದ ಮಳೆಯ ವೇಳೆ ಸಿಡಿಲಿಗೆ ಓರ್ವ ಮಹಿಳೆ ಬಲಿಯಾಗಿದ್ಧಾಳೆ. ವಿನೊಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆಶ್ರಯ ಬಿ ಬಡಾವಣೆಯಲ್ಲಿ ಈ ಘಟನೆ ಸಂಭವಿಸಿದೆ.  ಲಕ್ಷ್ಮೀಬಾಯಿ W/o ಕುಮಾರ ನಾಯಕ, ಮೃತ ಮಹಿಳೆ.  ಇವರು ಇವತ್ತು ಕುರಿಗಳಿಗೆ ಮೇವು ತರಲು ಹೋದಾಗ ಸಿಡಿಲು ಬಡಿದಿದೆ. ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ಧಾರೆ. 

Malenadu Today Shivamogga

ತೆಂಗಿನ ಮರ ಉರುಳಿ ಕಾರುಗಳು ಜಖಂ (shivamogga rain today)

 ಇನ್ನೂ ನಗರದಲ್ಲಿ ಬೀಸಿದ ಬಾರೀ ಗಾಳಿಗೆ ಹಲವೆಡೆ ಮರ ಬಿದ್ದು ಹಾನಿ ಉಂಟಾಗಿದೆ.  ತೆಂಗಿನ ಮರವೊಂದು ಬಿದ್ದು ಎರಡು ಕಾರುಗಳು ಜಖಂಗೊಂಡ ಘಟನೆ ಸುರಭಿ ಹೋಟೆಲ್ ಬಳಿ ಸಂಭವಿಸಿದೆ. ಇಲ್ಲಿರುವ ಕೆನರಾ ಬ್ಯಾಂಕ್ ಬಳಿಯಲ್ಲಿದ್ದ ತೆಂಗಿನ ಮರವೊಂದು ಬಿದ್ದು ಎರಡು ಕಾರುಗಳು ಬಹುತೇಕ ಜಖಂಗೊಂಡಿದೆ. ಅದೃಷ್ಟಕ್ಕೆ ಯಾವುದೇ ಪ್ರಾಣಪಾಯ ಉಂಟಾಗಿಲ್ಲ. 

Malenadu Today Shivamogga

ಮರಬಿದ್ದು ಕಾಂಪೌಂಡ್​ ಧ್ವಂಸ

ಇನ್ನೂ ದೈವಜ್ಞ ಕಲ್ಯಾಣ ಮಂದಿರದ ಹತ್ತಿರ ತೆಂಗಿನಮರವೊಂದು ಉರುಳಿಬಿದ್ದಿದ್ದು ಮನೆಯೊಂದರ ಕಾಂಪೌಂಡ್ ಹಾಳಾಗಿದೆ. ದೈವಜ್ಞ ಕಲ್ಯಾಣ ಮಂದಿರದ ಹಿಂಭಾಗ ರಾಯಲ್ ಮೆಡಿಕಲ್ ಅವರ ಮನೆಯಲ್ಲಿದ್ದ ತೆಂಗಿನ ಮರ  ಉರುಳಿ ಬಿದ್ದು ಈ ಘಟನೆ ಸಂಭವಿಸಿದ್ದು ಅದೃಷ್ಟಕ್ಕೆ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. 

Malenadu Today Shivamogga

ಸೋಮಿನಕೊಪ್ಪದಲ್ಲಿ ಹಾರಿ ಹೋದ ಮೇಲ್ಚಾವಣಿ

ಅತ್ತ ಸೋಮಿನಕೊಪ್ಪದಲ್ಲಿ ಮಳೆಗಾಳಿ ಮನೆಯೊಂದರ ಶೀಟುಗಳು ಹಾರಿಹೋಗಿವೆ. ಭಾರೀ ಗಾಳಿಗೆ ಈ ಅವಾಂತರ ಸಂಭವಿಸಿದ್ದು, ಯಾರಿಗೂ ಅಪಾಯ ಉಂಟಾಗಿಲ್ಲ.ಗೋಪಿನಾಥ್ ಎಂಬುವವರ ಮನೆ ಇದಾಗಿದ್ದು,  ಮನೆಯ ಮೇಲಿನ ಸೀಟುಗಳು ಹಾರಿಹೋಗಿವೆ. 

Malenadu Today Shivamogga

ಒಂದೇ ರೋಡ್​ನಲ್ಲಿ ಉರುಳಿದ ಮೂರು ಮರ

ಆ ಕಡೆ ವಿನೋಬನಗರ ಒಂದನೇ ಹಂತದಲ್ಲಿ ಬರುವ ರಸ್ತೆಯೊಂದರಲ್ಲಿ ನಿನ್ನೆ ಮಳೆ ಗಾಳಿ ಮೂರು ಮರಗಳು ಧರೆಗೆ ಉರುಳಿದೆ. ಪರಿಣಾಮ ರಸ್ತೆ ಸಂಚಾರ ಬಂದ್​ ಆಗಿದ್ಸಷ್ಟೆ ಅಲ್ಲದೆ,  ಒಂದೇ ರಸ್ತೆಯಲ್ಲಿ ಮೂರು ಮರಗಳು ಉರುಳಿವೆ

Malenadu Today Shivamogga

ಬೊಮ್ಮನಕಟ್ಟೆಯಲ್ಲಿ ಹಾರಿ ಹೋದ ಶೀಟ್ 

ಇನ್ನೂ ಬೊಮ್ಮನಕಟ್ಟೆ ನಿವಾಸಿ ಪ್ರಕಾಶ್ ಎಂಬವರಿಗೆ ಸೇರಿದ ಆರ್​ಸಿಸಿ ಮನೆಯ ಮೇಲೆ ಹಾಕಿದ್ದ ಶೀಟ್​ ಸ್ಲ್ಯಾಬ್​ ಬೀಸಿದ ಗಾಳಿಗೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದೆ. ಅಲ್ಲದೆ ಅದರ ಮೇಲೆ ಅಳವಡಿಸಲಾಗಿದ್ದ ಸೋಲಾರ್​ ಕೂಡ ಧ್ವಂಸಗೊಂಡಿದ್ದು, ಅಪಾರ ನಷ್ಟವಾಗಿದೆ. 

Malenadu Today Shivamogga

ಶಾಸಕರ ಸಿಟಿ ರೌಂಡ್ಸ್​

ಇನ್ನೂ ಮಳೆಹಾನಿಗಳ ಬಗ್ಗೆ ವಿಷಯ ತಿಳಿದ ಬೆನ್ನಲ್ಲೆ ಶಿವಮೊಗ್ಗ ನಗರದ ನೂತನ ಶಾಸಕ ಎಸ್​ಎನ್ ಚನ್ನಬಸಪ್ಪರವರು ತೆರವು ಕಾರ್ಯಾಚರಣೆಯ ಸಂಬಂಧಿಸಿದಂತೆ ಮರ ಉರುಳಿ ಬಿದ್ದ ಸ್ಥಳಗಳಿಗೆ  ಭೇಟಿ ನೀಡಿ ಪರಿಶೀಲನೆ ನಡೆಸಿದರು 

Malenadu Today Shivamogga

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor