ಅಮೀರ್ ಅಹಮದ್ ಸರ್ಕಲ್​ನಲ್ಲಿ ನಡೆದಿದ್ದರ ಬಗ್ಗೆ ಕೆಎಸ್​ ಈಶ್ವರಪ್ಪ ಹೇಳಿದ್ದೇನು? ಹಿಂದೂ ಹರ್ಷನ ಘಟನೆ ನೆನಪಿಟ್ಟುಕೊಳ್ಳಬೇಕು ಎಂದಿದ್ದೇಕೆ?

Malenadu Today

KARNATAKA NEWS/ ONLINE / Malenadu today/ Sep 30, 2023 SHIVAMOGGA NEWS’ 

ಈದ್ ಮಿಲಾದ್ ಮೆರವಣಿಗೆಯೂ ಚೆನ್ನಾಗಿ ನಡೆಯಲಿ ಕ್ರಿಶ್ಚಿಯನ್ನರ ಕಾರ್ಯಕ್ರಮಗಳು ಬೇಕಾದರೆ ನಡೆಯಲಿ. ಆದರೆ ಹರ್ಷನ ಕೊಲೆಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸುಮ್ಮಸುಮ್ಮನೆ ಕೊಲೆ ಮಾಡಿ ಈಗ ನಾವು ಶಾಂತಿಧೂತರು ಎಂದುಕೊಂಡು ಕಾಂಗ್ರೆಸ್ ಸರ್ಕಾರ ಸಪೋರ್ಟ್ ಇದೆ ಅಂತಾ ಮುಸಲ್ಮಾನ್ ಗುಂಡಾಗಳು ಆಟ ಆಡಿದ್ರೆ ಅದು ಶಿವಮೊಗ್ಗದಲ್ಲಿ ನಡೆಯೋದಿಲ್ಲ. ಇದು ಎಚ್ಚರಿಕೆಯೂ ಹೌದು ಎಂದು ಈಶ್ವರಪ್ಪ ಹೇಳಿದ್ದಾರೆ.

ಅಮಿರ್ ಅಹಮ್ಮದ್ ವೃತ್ತದ ಖಾಸಗಿ ಕಟ್ಟಡದಲ್ಲಿದ್ದ ಕೆಸರಿ ದ್ವಜ ತೆರವಿಗೆ ಸಂಬಂಧಿಸಿದಂತೆ ಪ್ರತಿಕ್ರೀಯಿಸಿ ಮಾತನಾಡಿದ ಈಶ್ವರಪ್ಪ,  ಸರ್ಕಾರಿ ಅಧಿಕಾರಿಗಳಿಗೆ ಹಿಂದುತ್ವ ಅನ್ನುತ್ತಿದ್ದ ಹಾಗೆ ಅವರ ಕಣ್ಣೆದುರು ಬರುವುದು  ಕಾಂಗ್ರೆಸ್ ಸರ್ಕಾರ ಮುಸ್ಲಿಂರಿಗೆ ರಕ್ಷಣೆ ಕೊಡುತ್ತೆ. ಮತ್ತು ನಮಗೆ ರಕ್ಷಣೆ ಸಿಗುತ್ತೆ ಅಂದುಕೊಂಡಿದ್ದಾರೆ. ಕೆಲ ಸರ್ಕಾರಿ ಅಧಿಕಾರಿಗಳು ಹಿಂದುತ್ವ ಮರೆತುಬಿಡುತ್ತಾರೆ. ರಾಷ್ಟ್ರೀಯತೆಯನ್ನು ಮರೆತು ಬಿಡುತ್ತಾರೆ. ಸರ್ಕಾರದ ಗುಲಾಮರಾಗಿ ಕೆಲಸ ಮಾಡೋದಕ್ಕೆ ಪ್ರಯತ್ನ ನಡೆಸುತ್ತಾರೆ.

ನಿನ್ನೆ ರಾತ್ರಿ ಶಿವಮೊಗ್ಗದ ಅಮೀರ್ ಅಹಮದ್​ ಸರ್ಕಲ್​ ಬಳಿ ಆಗಿದ್ದೇನು? ಎಸ್​ಪಿ ಹೇಳಿದ್ದೇನು? ಗೊಂದಲಗಳಿಗೆ ಇಲ್ಲಿದೆ ವಿವರ

ಇವರಿಗೆ ಬಾವುಟ ತೆಗೆಯಲು ಯಾರು ಹೇಳಿದ್ರು. ಹಿಂದುತ್ವದ ವಿಚಾರ ಬಂದಾಗ ಹಿಂದೆ ಸರಿಯುತ್ತಾರೆ ಇದು ಸರಿಯಲ್ಲ. ಅಧಿಕಾರಿಗಳು ಹಿಂದುತ್ವದ ಬಗ್ಗೆ ಹೆಮ್ಮೆ ಇಟ್ಟುಕೊಳ್ಲಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ಎಂದು ಮುಸ್ಲಿಂ ರನ್ನು ಓಲೈಸಲು ಗುಲಾಮರಾಗಿ ಕೆಲಸ ಮಾಡಬಾರದು ಎಂದು ಈಶ್ವರಪ್ಪ ಹೇಳಿದ್ದಾರೆ.

ನಿನ್ನೆ ರಾತ್ರಿ ಶಿವಮೊಗ್ಗದ ಅಮೀರ್ ಅಹಮದ್​ ಸರ್ಕಲ್​ ಬಳಿ ಆಗಿದ್ದೇನು? ಎಸ್​ಪಿ ಹೇಳಿದ್ದೇನು? ಗೊಂದಲಗಳಿಗೆ ಇಲ್ಲಿದೆ ವಿವರ


ಇನ್ನಷ್ಟು ಸುದ್ದಿಗಳು 

  1. ರಾಷ್ಟ್ರೀಯ ಹೆದ್ದಾರಿ 169 A ನಲ್ಲಿ ಬೆಳಗಿನ ಜಾವ ಧಗಧಗ ಹೊತ್ತಿ ಉರಿದ ಮರ! ಏನಿದು ಘಟನೆ

  2. ವಿಐಎಸ್​ಎಲ್​​ ಆವರಣದಲ್ಲಿ ಕಾಣಿಸಿಕೊಳ್ತು ಮತ್ತೊಂದು ಚಿರತೆ!

  3. ಸಿಗಂದೂರು ಚೌಡೇಶ್ವರಿ ದರ್ಶನ ಪಡೆದು ಬೆಂಗಳೂರಿಗೆ ಹೋಗುತ್ತಿದ್ದಾಗ ಶಾಕ್! ಸೂಡೂರು ಸಮೀಪ ಆಕ್ಸಿಡೆಂಟ್!


 

Share This Article