ನಿನ್ನೆ ರಾತ್ರಿ ಶಿವಮೊಗ್ಗದ ಅಮೀರ್ ಅಹಮದ್​ ಸರ್ಕಲ್​ ಬಳಿ ಆಗಿದ್ದೇನು? ಎಸ್​ಪಿ ಹೇಳಿದ್ದೇನು? ಗೊಂದಲಗಳಿಗೆ ಇಲ್ಲಿದೆ ವಿವರ

Ameer Ahmed Circle, Shivappa Nayaka Circle of Shimoga city, the situation changed for some time yesterday.ಶಿವಮೊಗ್ಗ ನಗರದ ಅಮೀರ್ ಅಹಮದ್ ಸರ್ಕಲ್ , ಶಿವಪ್ಪ ನಾಯಕ ಸರ್ಕಲ್​ನಲ್ಲಿ ನಿನ್ನೆ ಕೆಲವು ಹೊತ್ತು ಸನ್ನಿವೇಶ ಬದಲಾಗಿತ್ತು

ನಿನ್ನೆ ರಾತ್ರಿ ಶಿವಮೊಗ್ಗದ ಅಮೀರ್ ಅಹಮದ್​ ಸರ್ಕಲ್​ ಬಳಿ ಆಗಿದ್ದೇನು? ಎಸ್​ಪಿ ಹೇಳಿದ್ದೇನು? ಗೊಂದಲಗಳಿಗೆ ಇಲ್ಲಿದೆ ವಿವರ

KARNATAKA NEWS/ ONLINE / Malenadu today/ Sep 30, 2023 SHIVAMOGGA NEWS’ 



ಶಿವಮೊಗ್ಗ ನಗರದಲ್ಲಿ ಇದೇ ಸೆಪ್ಟೆಂಬರ್ 28 ರಂದು ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆಯನ್ನು ಊರ ಹಬ್ಬದ ರೀತಿಯಲ್ಲಿ ಆಚರಿಸಲಾಗಿತ್ತು .ಚಿಕ್ಕದ್ದೊಂದು ಗೊಂದಲವೂ ಇಲ್ಲದೆ ಕುಣಿದು ಕುಪ್ಪಳಿಸಿದ ಮೆರವಣಿಗೆಯಲ್ಲಿ, ವಿಘ್ನ ನಿವಾರಕ ಯಶಸ್ವಿಯಾಗಿ ತುಂಗೆಯ ಮಡಿಲು ಸೇರಿದ್ದ. 

ಈ ಸಂಭ್ರಮದ ಬೆನ್ನಲ್ಲೆ ಸಣ್ಣದೊಂದು ಘಟನೆಯು ನಗರದ ಅಮೀರ್ ಅಹಮದ್ ಸರ್ಕಲ್​ ಕೆಲವು ಹೊತ್ತು ಸನ್ನಿವೇಶವನ್ನು ಬದಲಾಗುವಂತೆ ಮಾಡಿತ್ತು. ಅಲ್ಲಿ ನಡೆದಿದ್ದು ಸಣ್ಣ ಘಟನೆ.


ಈ ಹಿಂದೆಯೇ ಶಾಂತಿ ಸಭೆಯಲ್ಲಿ, ಮುಖಂಡರು ಕೊಟ್ಟ ಮಾತಿನಂತೆ ಎಲ್ಲವೂ ನಡೆದಿತ್ತು. ಅಲಂಕಾರಕ್ಕೆ ಬಳಸಿದ್ದ ಸಾಮಗ್ರಿಗಳನ್ನು ತೆರವುಗೊಳಿಸುವುದರಲ್ಲಿಯು ಸಾಕಷ್ಟು ಚರ್ಚೆಯಾಗಿತ್ತು.

ಅದರಂತೆ ಹಿಂದೂ ಮಹಾಸಭಾ ಗಣಪತಿಯ ಅಲಂಕಾರಗಳನ್ನು ತೆರವುಗೊಳಿಸಲಾಗಿತ್ತು. ಇನ್ನೊಂದೆಡೆ ಈದ್ ಮಿಲಾದ್​ಗೆ ಸಂಬಂಧಿಸಿದ ಅಲಂಕಾರವನ್ನು ಮಾಡಲಾಗುತ್ತಿತ್ತು. 

ಇದರ ನಡುವೆ ಭಾವುಟಗಳನ್ನು ತೆಗೆದ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಕಸ್ತೂರಭಾ ರಸ್ತೆಯ ಪಕ್ಕದ ಕಟ್ಟಡದ ಮೇಲಿದ್ದ ಭಾವುಟವನ್ನು ತೆಗೆದಿದ್ದನ್ನು ಹಿಂದೂ ಸಂಘಟನೆಗಳು ಪ್ರಶ್ನೆ ಮಾಡಿದವು. ಶಾಂತಿಸಭೆಯ ಮಾತಿನ ಪ್ರಕಾರವೇ ನಡೆಯಲಾಗುತ್ತಿದೆ. ಹಿಂದೂಗಳಿಗೆ ಸೇರಿದ ಕಟ್ಟಡದ ಮೇಲಿನ ಭಾವುಟಗಳನ್ನು ತೆಗೆಯುವ ಅಗತ್ಯವಿತ್ತೆ ಎಂಬುದು ಸಂಟನೆಗಳ ಮುಖಂಡರ ವಾದವಾಗಿತ್ತು. ಈ ಹಿನ್ನೆಲೆಯಲ್ಲಿ ಹಲವರು ಶಿವಪ್ಪ ನಾಯಕ ಸರ್ಕಲ್ ಬಳಿಯಲ್ಲಿ ಜಮಾಯಿಸಿದ್ದರು. 


ಇನ್ನೊಂದೆಡೆ ಈದ್ ಮಿಲಾದ್ ಹಬ್ಬಕ್ಕೆ ತಯಾರಿ ನಡೆಯುತ್ತಿದ್ದ ಅಮೀರ್ ಅಹಮದ್ ಸರ್ಕಲ್​ನಲ್ಲಿ, ಮುಸ್ಲಿಮ್ ಮುಖಂಡರು, ಹಿಂದೂಮಹಾಸಭಾದ  ಅಲಂಕಾರ ಸಾಮಗ್ರಿಗಳನ್ನು ನಾವು ತೆಗೆದಿಲ್ಲ. ಪಾಲಿಕೆಯಿಂದ ತೆಗೆದುಕೊಂಡು ತೆರವುಗೊಳಿಸಲಾಗಿದೆ. ಅದರ ಬಗ್ಗೆ ನಮಗೆ ಮಾಹಿತಿಯಿಲ್ಲ ಎನ್ನುತ್ತಿದ್ದರು. ಅಲ್ಲಿಯು ಕೂಡ ಯುವಕರು ಜಮಾಯಿಸಿದ್ದರು. 

ಹೀಗೆ ಎರಡು ಸರ್ಕಲ್​ಗಳಲ್ಲಿ ಜನರು ಜಮಾಯಿಸಿದ್ದರಿಂದ ಕೆಲಕಾಲ ಸನ್ನಿವೇಶ ಬಿಗಿಯಾಗಿತ್ತು. ವಿಷಯ ತಿಳಿಯುತ್ತಲೇ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರು ಬಂದೋಬಸ್ತ್​ಗೆ ನಿಂತಿದ್ದರು. ಅಧಿಕಾರಿಗಳು ಅಧಿಕಾರ ಬಳಸದೇ ಸೌಮ್ಯವಾಗಿ ಎರಡುಕಡೆಯವರನ್ನು ಸಮಾಧಾನ ಮಾಡುತ್ತಿದ್ದರು. ಆದ ವಿಚಾರ ತಿಳಿದು ಎಸ್​ಪಿ ಮಿಥುನ್ ಕುಮಾರ್​ರವರಿಗೆ ಮಾಹಿತಿ ನೀಡಿದರು. 

ಸ್ಥಳಕ್ಕೆ ಬಂದ ಎಸ್​ಪಿ ಮಿಥುನ್ ಕುಮಾರ್ ಯಾವುದೇ ವದಂತಿಗೆ ಕಿವಿಕೊಡಬೇಡಿ, ಯಶಸ್ವಿಯಾಗಿ ಹಬ್ಬ ಮಾಡಿದ್ದದೇವೆ, ಇದೀಗ ಸಣ್ಣ ಗೊಂದಲವಾಗಿದೆ ಪರಿಹರಿಸುತ್ತೇವೆ ಎಂದು ಎರಡು ಕಡೆಯ ಮುಖಂಡರನ್ನು ಮಾತನಾಡಿ ವಿಶ್ವಾಸಕ್ಕೆ ತೆಗೆದುಕೊಂಡರು. ಮಾಧ್ಯಮಗಳಿಗೆ ವಿಷಯ ಸ್ಪಷ್ಟಪಡಿಸಿ, ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ, ಸಣ್ಣದೊಂದು ಗೊಂದಲವಿದೆ ಅದನ್ನು ಮುಖಂಡರ ಬಳಿ ಮಾತನಾಡಿ ಪರಿಹರಿಸಲಾಗಿದೆ ಎಂದರು. 

ಈ ಮೊದಲು ತೆಗೆಯಲಾಗಿದೆ ಎನ್ನಲಾಗಿದ್ದ ಕೇಸರಿ ಭಾವುಟ ಮತ್ತೆ ಅದೇ ಕಟ್ಟಡದ ಟಾಪ್​ನಲ್ಲಿದ್ದ ಪ್ಲೆಕ್ಸ್​​ ಮೇಲೆ ಕಟ್ಟಲಾಯ್ತು. ಇದರ ಬೆನ್ನಲ್ಲೆ ಘೋಷಣೆಗಳನ್ನು ಕೂಗುತ್ತಾ ಹಿಂದೂ ಸಂಘಟನೆಗಳು ಹಾಗೂ ಕಾರ್ಯಕರ್ತರು ಶಿವಪ್ಪನಾಯಕ ವೃತ್ತದಿಂದ ತೆರಳಿದರು. 

ಇತ್ತ ಮುಸ್ಲಿಮ್ ಮುಖಂಡರು ಸಹ ಕಾರ್ಯಕರ್ತರನ್ನು ವಾಪಸ್ ತೆರಳುವಂತೆ ಸೂಚಿಸಿ ಕಳುಹಿಸಿಕೊಟ್ಟರು. ಈದ್ ಮಿಲಾದ್ ನ ಅಲಂಕಾರಕ್ಕೆ ಸಂಬಂಧಿಸಿದವರು ಅಮೀರ್ ಅಹಮದ್ ಸರ್ಕಲ್​​ನಲ್ಲಿದ್ದು ಹಬ್ಬದ ಮೆರವಣಿಗೆ ಅಲಂಕಾರದ ಕೆಲಸ ನಿರ್ವಹಿಸಿದರು. 

ಈ ಬೆಳವಣಿಗೆಗಳು ನಡೆಯುವ ಹೊತ್ತಿಗೆ ಅದಾಗಲೇ ಮಧ್ಯರಾತ್ರಿಯಾಗಿತ್ತು. ಎಸ್​ಪಿ ಮಿಥುನ್ ಕುಮಾರ್ ಹಾಗೂ ಹಿರಿಯ ಅಧಿಕಾರಿಗಳು , ಆಪರೇಷನ್​ ಟೀಂ ಸೇರಿದಂತೆ ಹಲವು ಪೊಲೀಸ್ ಟೀಂ ಸ್ಥಳದಲ್ಲಿಯೆ ಮೊಕ್ಕಾಂ ಹೂಡಿತ್ತು. 


ಇನ್ನಷ್ಟು ಸುದ್ದಿಗಳು 

  1. BREAKING NEWS / ಜೋಗದ ಸಮೀಪ ನೀರಿಗಿಳಿದಿದ್ದ ಓರ್ವ ಅಧಿಕಾರಿ ಮತ್ತು ಬ್ಯಾಂಕ್ ಉದ್ಯೋಗಿ ಸಾವು! ಕಾರ್ಗಲ್​ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದೇನು?

  2. ಲೋಡ್ ಗಾಡಿಯಿಂದ ಬಿದ್ದ ಮರದ ತುಂಡು ಬಡಿದು ಬೈಕ್​ ಸವಾರನ ಸ್ಥಿತಿ ಗಂಭೀರ! ಹೀಗೂ ಆಗುತ್ತೆ ಹುಷಾರು ತಪ್ಪದಿರಿ ವಾಹನ ಸವಾರರೇ?

  3. ದೌರ್ಜನ್ಯ ಪ್ರಕರಣ ! ಶಿವಮೊಗ್ಗ ಡಿಸಿಯಿಂದ 15 ಸೂಚನೆ! ಯುವಕನ ಸಾವು, ಮರಳು, ಅಧಿಕಾರಿಗಳಿಂದ ಕಿರುಕುಳ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?