ಕನ್ನಡ ಅಭಿಯಾನಕ್ಕೆ ಶರಣು..ಶರಣು! ಶಿವಮೊಗ್ಗ ವಿಮಾನ ನಿಲ್ಧಾಣದ ಬೋರ್ಡ್​ಗಳಲ್ಲಿ ಅಚ್ಚಾಯ್ತು ಕನ್ನಡ! ಕೇಂದ್ರ ಸಚಿವರೇ ಬರೆದರು ಕನ್ನಡ ಟ್ವೀಟ್

Shimoga airport officials have been alerted after a campaign was launched on social media alleging that information boards were not visible in Kannada at the airport.

ಕನ್ನಡ ಅಭಿಯಾನಕ್ಕೆ ಶರಣು..ಶರಣು! ಶಿವಮೊಗ್ಗ ವಿಮಾನ ನಿಲ್ಧಾಣದ ಬೋರ್ಡ್​ಗಳಲ್ಲಿ ಅಚ್ಚಾಯ್ತು ಕನ್ನಡ!  ಕೇಂದ್ರ ಸಚಿವರೇ ಬರೆದರು ಕನ್ನಡ ಟ್ವೀಟ್

 MALENADUTODAY.COM | SHIVAMOGGA  | #KANNADANEWSWEB

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪುರವರ ಹೆಸರನ್ನು ಇಡಬೇಕು ಎಂಬುದು ನಿಕ್ಕಿಯಾಗಿದೆ. ಕನ್ನಡದ ಅಸ್ಮಿತೆಯನ್ನು ಜಗತ್ತಿಗೆ ಸಾರಿದ ರಾಷ್ಟ್ರಕವಿ ಹೆಸರನ್ನು ಇಡುವ ನಿಲ್ದಾಣದಲ್ಲಿ ಕನ್ನಡ ಭಾಷೆಯನ್ನ ಬಳಸದಿದ್ದರೇ ಹೇಗೆ? ಎಲ್ಲಿ ನೋಡಿದರೂ ಹಿಂದಿ ಮತ್ತು ಇಂಗ್ಲೀಷ್​ನ ಬೋರ್ಡ್​ಗಳನ್ನು ಹಾಕಿರುವುದು ನ್ಯಾಯಸಮ್ಮತವೇ ಎಂಬಿತ್ಯಾದಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಪರವಾದ ಅಭಿಯಾನ ಆರಂಭವಾಗಿತ್ತು. ಮತ್ತು ಈ ಕ್ಯಾಂಪೇನ್​ ಸಾಕಷ್ಟು ಗಂಭೀರ ಸ್ವರೂಪ ಪಡೆದುಕೊಂಡು ಹಲವರು ಅಭಿಯಾನಕ್ಕೆ ಸಾಥ್ ನೀಡಲು ಆರಂಭಿಸಿದ್ದರು. 

READ | ವಿಮಾನದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪನವರ ಮಕ್ಕಳು ಓಡಾಡುತ್ತಾರೆ! ಹೆಚ್​ಡಿಕೆ ವಾಗ್ದಾಳಿ! ಕಟೌಟ್ ಹರಿದಿದ್ದಕ್ಕೆ ಶಾರದಾ ಅಪ್ಪಾಜಿ ಕಣ್ಣೀರು

ಇದರ ಬೆನ್ನಲ್ಲೆ ಅಧಿಕಾರಿಗಳು ಎಚ್ಚೆತ್ತುಕೊಂಡಂತಿದೆ. ವಿಮಾನ ನಿಲ್ದಾಣದಲ್ಲಿ ಕನ್ನಡ ಬೋರ್ಡ್​ಗಳು ಪ್ರತ್ಯಕ್ಷವಾಗಿದ್ದು, ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ.  ಆಗಮನ, ನಿರ್ಗಮನ , ಲಗೇಜ್, ಟಿಕೇಟ್ ಇತ್ಯಾದಿ ಹೆಸರುಗಳನ್ನು ಹಳದಿ ಬಣ್ಣದಲ್ಲಿ ಬರೆಯಲಾಗಿತ್ತು. ಇದರ ಪಕ್ಕದಲ್ಲಿಯೇ ಇದೀಗ ಪಿಂಕ್ ಬಣ್ಣದಲ್ಲಿ ಕನ್ನಡದ ಬೋರ್ಡ್​ಗಳನ್ನು ಹಾಕಲಾಗಿದೆ. ಮತ್ತೆ ಕೆಲವೆಡೆ ಹಳದಿ ಬಣ್ಣದಲ್ಲಿಯೇ ಕನ್ನಡದಲ್ಲಿ ಬರೆಯಲಾಗಿದೆ. 

ಇದಿಷ್ಟೆ ಅಲ್ಲದೆ,  ಕೇಂದ್ರ ಸಚಿವ ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಎಂ ಸಿಂಧ್ಯಾ ಕನ್ನಡದಲ್ಲಿಯೇ ಟ್ವೀಟ್ ಮಾಡಿ , ಕರ್ನಾಟಕದ ಜನರೇ, ನಿಮ್ಮ‌ಭೂಮಿಗೆ 148 ನೇ ವಿಮಾನ ನಿಲ್ದಾಣ ದೊರೆಯುತ್ತಿದ್ದು, ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ ಎಂದಿದ್ಧಾರೆ. ಸಂಸದ ರಾಘವೇಂದ್ರವರ ಟ್ವೀಟ್​ನ್ನ ಕೋಟ್ ಮಾಡಿ ರಿಟ್ವೀಟ್ ಮಾಡಿರುವ ಅವರು ಕನ್ನಡದಲ್ಲಿಯೇ ಟೈಪಿಸಿರುವುದಕ್ಕೆ ಅಭಿನಂದನೆ ವ್ಯಕ್ತವಾಗುತ್ತಿದೆ. 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com