ಸರ್ಕಲ್​ಗಳಲ್ಲಿ ಇರಲಿ ಜಾಗ್ರತೆ! ಸಿಟಿ ಬಸ್​ ಆಕ್ಸಿಡೆಂಟ್​ಗೆ ಸಾಕ್ಷಿಯಾಯ್ತು ಸಿಸಿ ಟಿವಿ ದೃಶ್ಯ! ಮಹಾವೀರ್ ವೃತ್ತದಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು!

Be careful in circles! The man, who was injured after being hit by a city bus, succumbed to his injuries and a CCTV footage of the incident has been available.

ಸರ್ಕಲ್​ಗಳಲ್ಲಿ ಇರಲಿ ಜಾಗ್ರತೆ! ಸಿಟಿ ಬಸ್​ ಆಕ್ಸಿಡೆಂಟ್​ಗೆ ಸಾಕ್ಷಿಯಾಯ್ತು ಸಿಸಿ ಟಿವಿ ದೃಶ್ಯ! ಮಹಾವೀರ್ ವೃತ್ತದಲ್ಲಿ ಸಂಭವಿಸಿದ  ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು!

KARNATAKA NEWS/ ONLINE / Malenadu today/ Jun 6, 2023 SHIVAMOGGA NEWS

ಶಿವಮೊಗ್ಗ ನಗರದ ಮಹಾವೀರ ಸರ್ಕಲ್​ನಲ್ಲಿ ಸಂಭವಿಸಿದ್ದ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.  C. S. ಇಕ್ಬಾಲ್ ಅಹ್ಮದ್  ಮೃತರು . 18 ದಿನಗಳಿಂದ ಮೆಟ್ರೋ ಹಾಸ್ಪಿಟಲ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು, ಕಳೆದ ಶುಕ್ರವಾರ ಮೃತಪಟ್ಟಿದ್ಧಾರೆ. ಇನ್ನೂ ಘಟನೆಯ ಸಿಸಿ ಟಿವಿ ಪೂಟೇಜ್​ ಕೂಡ ದೊರೆತಿದ್ದು, ಸಿಟಿಬಸ್​ ಬೈಕ್​ಗೆ ಡಿಕ್ಕಿ ಹೊಡೆಯುತ್ತಿರುವ ದೃಶ್ಯ ಪೂಟೇಜ್​ನಲ್ಲಿದೆ. 


ಅಂದಿನ ಸುದ್ದಿ : Accident / ಶಿವಮೊಗ್ಗ ನಗರದಲ್ಲಿ ಬೈಕ್​ಗೆ ಸಿಟಿ ಬಸ್​ ಡಿಕ್ಕಿ! ಬಸ್​ಗೆ ಕಲ್ಲು

ಏನಾಗಿತ್ತು ಅಂದು

ಘಟನೆ ನಡೆದ ದಿನ ಹೆಚ್​ಪಿಸಿ ಥಿಯೇಟರ್​ ಕಡೆಯಿಂದ ಬರುತ್ತಿದ್ದ ಖಾಸಗಿ ಸಿಟಿ ಬಸ್​ವೊಂದು ಮಹಾವೀರ ವೃತ್ತದಲ್ಲಿ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಸಿಗ್ನಲ್​ ಸ್ಟಾಪ್ ಆದ ಬಳಿಕ ಮುಂದಕ್ಕೆ ಬಂದ ಬಸ್​, ಸರ್ಕಲ್​ ದಾಟುವ ಅವಸರದಲ್ಲಿ, ಬಸ್​ಗಿಂತ ಮುಂದೆ ಹೋಗುತ್ತಿದ್ದ  ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿತ್ತು.

ಘಟನೆ ಬೆನ್ನಲ್ಲೆ ಇನ್ನೊಂದು ಬದಿಯಿಂದ ಬರುತ್ತಿದ್ದ ವಾಹನ ಸವಾರರು,ವೆಹಿಕಲ್​ಗಳನ್ನ ನಿಲ್ಲಿಸಿ ಘಟನೆಯಲ್ಲಿ ಗಾಯಗೊಂಡಿದ್ದ ಇಕ್ಬಾಲ್​ರವರಿಗೆ ಆರೈಕೆ ಮಾಡಿದ್ದರು. ಬಳಿಕ ಅವರನ್ನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. 

ಇತ್ತ ಆಕ್ರೋಶಗೊಂಡಿದ್ದ ಸ್ಥಳೀಯರು ಬಸ್ ಮೇಲೆ ಕಲ್ಲೂ ತೂರಾಟ ನಡೆಸಿ ಅದರ ಗಾಜುಗಳನ್ನ ಒಡೆದಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಟ್ರಾಫಿಕ್ ಕಂಟ್ರೋಲ್ ಮಾಡಿದ್ದರು. ಆ ಸಂದರ್ಭದಲ್ಲಿ ಟ್ರಾಫಿಕ್​ ಪೊಲೀಸರು ಸರ್ಕಲ್​​ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಜನರು ಆಕ್ರೋಶ ಹೊರಹಾಕಿದ್ದರು. 

ಕುಸ್ಕೂರು ತಾಂಡಾದಲ್ಲಿ ಸ್ವಾಮಿ ವಿವೇಕಾನಂದ ಯುವಕ ಸಂಘದಿಂದ ಪರಿಸರ ದಿನಾಚರಣೆ

ಶಿವಮೊಗ್ಗ/ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಶಿಕಾರಿಪುರ ತಾಲ್ಲೂಕಿನ ಕುಸ್ಕೂರು ತಾಂಡಾದಲ್ಲಿ ಸ್ವಾಮಿ ವಿವೇಕಾನಂದ ಯುವಕ ಸಂಘದ ಯುವಕರು ಪರಿಸರ ದಿನಾಚರಣೆಯನ್ನು ಹಮ್ಮಿಕೊಂಡಿದ್ದರು. 

ಸ್ಥಳೀಯರ ಶಾಲಾ ಮಕ್ಕಳ ಸಹಕಾರದೊಂದಿಗೆ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಹಿರೇಜಂಬೂರು ಗ್ರಾಮಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು, ಶಾಲೆಯ ಶಿಕ್ಷಕರು, ಮಕ್ಕಳು, ಕುಸ್ಕೂರಿನ  ಗ್ರಾಮಪಂಚಾಯತ್ ಸದಸ್ಯರು, ಯುವಕರು ಮತ್ತು ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.