ಸೀಗೆಹಟ್ಟಿಗೆ ಬಂದು ವಾಪಸ್​ ಸಾಗರ ತೆರಳಲು ಕೆಎಸ್​ಆರ್​ಟಿಸಿ ನಿಲ್ದಾಣದಲ್ಲಿ ಬಸ್ ಹತ್ತಿದ್ದ ಮಹಿಳೆಗೆ ಶಾಕ್! ಮತ್ತೊಂದು ಘಟನೆ!

ಹಂಚಿಕೊಳ್ಳಿ
WhatsApp Facebook X Telegram

SHIVAMOGGA NEWS / ONLINE / Malenadu today/ Nov 23, 2023 NEWS KANNADA

Shivamogga  |  Malnenadutoday.com |  ಶಿವಮೊಗ್ಗದ ಕೆಎಸ್​​ಆರ್​ಟಿಸಿ ಬಸ್ ನಿಲ್ದಾಣ (KSRTC Bus Stand) ದಲ್ಲಿ ಮತ್ತೊಂದು ಕಳ್ಳತನ ಪ್ರಕರಣ ದಾಖಲಾಗಿದೆ. ಕಳೆದ  20-11-2023 ರಂದು  ಸಂಜೆ ಈ ಘಟನೆ ನಡೆದಿದೆ.  

ಶಿವಮೊಗ್ಗದ ಸೀಗೆಹಟ್ಟಿಯಲ್ಲಿ   ಸಂಬಂಧಿಯೊಬ್ಬರ ಮನೆಯ ಗೃಹಪ್ರವೇಶ ಸಾಗರ ಕ್ಕೆ ವಾಪಾಸ್ ಹೋಗಲು ಮಹಿಳೆಯೊಬ್ಬರು  ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ಗೆ ಬಂದಿದ್ದಾರೆ.  ಸಾಗರಕ್ಕೆ ಹೋಗುವ ಬಸ್ ರಶ್ ಆಗಿತ್ತು. ಈ ಸಂದರ್ಭದಲ್ಲಿ ಕಳ್ಳರು ಮಹಿಳೆಯ ಬ್ಯಾಗ್​ನಲ್ಲಿದ್ದ ಪರ್ಸ್​ ಕದ್ದಿದ್ದಾರೆ. 

READ: ಮಹಿಳೆ ಮತ್ತು ಐವರು ಮಕ್ಕಳ ನಾಪತ್ತೆ ಪ್ರಕರಣ ಸುಖಾಂತ್ಯ! ಕಾಣೆಯಾದವರು ಮೈಸೂರಲ್ಲಿ ಪತ್ತೆ!

ಟಿಕೆಟ್ ಮಾಡಿಸಲು  ತಮ್ಮ ಬ್ಯಾಗ್  ತೆಗೆದಾಗ  ಬ್ಯಾಗ್ ನಲ್ಲಿಟ್ಟಿದ್ದ  ಪರ್ಸ್  ಕಾಣದೆ ಮಹಿಳೆ ಕಂಗಾಲಾಗಿದ್ದಾರೆ ಅಲ್ಲದೆ ಅದರಲ್ಲಿ ಒಂದುವರೆ ಲಕ್ಷ ಮೌಲ್ಯದ ಚಿನ್ನಾಭರಣ ಇದ್ದು ಅದು ಸಹ ಕಳ್ಳತನವಾಗಿದೆ. 

ಈ ಸಂಬಂಧ ದೊಡ್ಡಪೇಟೆ ಪೊಲೀಸರಿಗೆ ಮಹಿಳೆ ದೂರು ನೀಡಿದ್ದು, ಪೊಲೀಸರು ಪ್ರಕರಣವನ್ನು ಎಷ್ಟು ಬೇಗ ಪತ್ತೆ ಮಾಡುತ್ತಾರೆ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ 


ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor