ತರಕಾರಿ ನಡುವೆ ಬೆಳದ ಗೆಣಸು ಮೂಡಿಸಿತು ಅಚ್ಚರಿ! ಏನು ವಿಷಯ ಗೊತ್ತಾ?

It has been reported in Soraba that genasu gadde weighing 8 kg has grown among vegetables

ತರಕಾರಿ ನಡುವೆ ಬೆಳದ ಗೆಣಸು ಮೂಡಿಸಿತು ಅಚ್ಚರಿ! ಏನು ವಿಷಯ ಗೊತ್ತಾ?
It has been reported in Soraba that genasu gadde weighing 8 kg has grown among vegetables

SHIVAMOGGA  |  Jan 27, 2024  |   ವಾಡಿಕೆಗಿಂತ ಅಥವಾ ಎಣಿಕೆಗಿಂತ ವಿಶೇಷವಾಗಿ ಕಂಡು ಬಂದರೇ ಪ್ರತಿಯೊಂದು ಸುದ್ದಿಯಾಗುತ್ತದೆ. ಸದ್ಯ ಈ ರೀತಿಯಲ್ಲಿ ಗೆಣಸಿನ ಗಡ್ಡೆ ಸುದ್ದಿಯಾಗಿದೆ. ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಕೊಡಕಣಿ ಗ್ರಾಮದಲ್ಲಿ ಬರೋಬ್ಬರಿ 8 ಕೆಜಿ ತೂಕದ ಗೆಣಸು ಹೊಲದಲ್ಲಿ ಸಿಕ್ಕಿದೆ. 

ಮಲೆನಾಡು ಟುಡೆ ವರದಿ

ಸಾಮಾನ್ಯವಾಗಿ ಇಷ್ಟು ದೊಡ್ಡ ಸೈಜಿನಲ್ಲಿ ಗೆಣಸು ಸಿಗುವುದಿಲ್ಲ. ಆದರೆ,  ಕೊಡಕಣಿ ಗ್ರಾಮದ ಕರಿಯಪ್ಪ ಹೊಸಮನೆ ಎಂಬವರ ಜಮೀನಿನಲ್ಲಿ  8 ಕೆ.ಜಿ. ತೂಕದ ಗೆಣಸಿನ ಗಡ್ಡೆ ಸಿಕ್ಕಿದೆ. ಅದನ್ನು ಹಿಡಿದು ಗ್ರಾಮಸ್ಥರಿಗೆ ಕರಿಯಪ್ಪ ತೋರಿಸುತ್ತಿದ್ದಾರೆ. ವಿಶೇಷವಾಗಿದ್ದನ್ನ ನೋಡಿದ ಗ್ರಾಮಸ್ಥರು ಫೋಟೋ ಕ್ಲಿಕ್ಕಿಸಿಕೊಂಡು ವಾಟ್ಸಾಪ್​ ನಲ್ಲಿ ಷೇರ್ ಮಾಡಿದ್ದಾರೆ. 

ಕರಿಯಪ್ಪರವರು ತರಕಾರಿ ನಡುವೆ ಗೆಣಸಿನ ಬಳ್ಳಿ ನಾಟಿ‌ ಮಾಡಿದ್ದಾರೆ. ಈ ವರ್ಷ ಮೊದಲ ಬಾರಿಗೆ 8 ಕೆ.ಜಿ. ತೂಕದ ಗೆಣಸು ಬೆಳೆದಿರುವುದು ಅವರಿಗೆ ಅಚ್ಚರಿ ಮೂಡಿಸಿದೆ.