ಶಿವಮೊಗ್ಗ | ಏಳು ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ | ಹವಾಮಾನ ಇಲಾಖೆ ಸೂಚನೆ

Shimoga | Heavy rains in seven districts in next three hours | Met department issues notice

ಶಿವಮೊಗ್ಗ | ಏಳು ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ | ಹವಾಮಾನ ಇಲಾಖೆ ಸೂಚನೆ
Heavy rain

SHIVAMOGGA | MALENADUTODAY NEWS | May 21, 2024  ಮಲೆನಾಡು ಟುಡೆ

ಬೆಳಗ್ಗೆಯಿಂದ ತುಸು ಬಿಸಿಲು, ತುಸು ಮೋಡದಂತಿದ್ದ ಶಿವಮೊಗ್ಗದಲ್ಲಿ ಮಧ್ಯಾಹ್ನದ ನಂತರ ಅಂದರೆ ನಾಲ್ಕು ಗಂಟೆ ಸುಮಾರಿಗೆ ಮಳೆಯಾಗುತ್ತಿದೆ. ಅಲ್ಲದೆ ಹವಾಮಾನ ಇಲಾಖೆ ಬೆಂಗಳೂರು ಮುಂದಿನ ನಾಲ್ಕುಗಂಟೆಗಳ ಕಾಲ ಶಿವಮೊಗ್ಗ ಜಿಲ್ಲೆಯು ಸೇರಿದಂತೆ ಹಲವೆಡೆ ಮಳೆಯ ಮುನ್ಸೂಚನೆ ನೀಡಿದೆ. 

ವಾತಾವರಣದ ನಕ್ಷೆಯಲ್ಲಿ ಶಿವಮೊಗ್ಗದ ಮೇಲೆ ಮಳೆಯ ಸೂಚನೆ ನೀಡುವ ಕೆಂಪು ಬಣ್ಣದ ಆಧ್ರತೆಯನ್ನು ಗುರುತಿಸಿರುವ ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯ ಪ್ರಕಾರ, ಮುಂದಿನ 3 ಗಂಟೆಗಳಲ್ಲಿ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಮಂಡ್ಯ, ಮೈಸೂರು, ರಾಮನಗರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಕಡೆ ಸಿಡಿಲು ಸಹಿತ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಎಚ್ಚರಿಕೆಯ ವಿಧಗಳ ಬಣ್ಣಗಳಲ್ಲಿ ಯಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. 

ಇನ್ನೂ ಹವಾಮಾನ ಇಲಾಖೆಯ ಆಪ್‌ನಲ್ಲಿ ತೋರಿಸಿರುವಂತೆ ಐದು ಗಂಟೆಯಿಂದ ರಾತ್ರಿ ಎಂಟು ಗಂಟೆಯವರೆಗೂ ಮಳೆಯಾಗುವ ಸೂಚನೆಯಿದೆ. ವಾತಾವರಣವೂ 26 ಡಿಗ್ರಿಯಿಂದ 30 ಡಿಗ್ರಿಯವರೆಗೂ ಇರಲಿದೆ ಎಂದು ಹೇಳಲಾಗಿದೆ.