ಶಿವಮೊಗ್ಗ -ತೀರ್ಥಹಳ್ಳಿ ರಸ್ತೆಯಲ್ಲಿ ಮತ್ತೊಂದು ಅಪಘಾತ | ಓವರ್‌ ಟೇಕ್‌ ಮಾಡುವಾಗ ಮರಕ್ಕೆ ಬಸ್‌ ಡಿಕ್ಕಿ |

Another incident on Shimoga-Tirthahalli road The bus hit a tree while overtaking Shivamogga-Thirthahalli Road

ಶಿವಮೊಗ್ಗ -ತೀರ್ಥಹಳ್ಳಿ ರಸ್ತೆಯಲ್ಲಿ ಮತ್ತೊಂದು ಅಪಘಾತ | ಓವರ್‌ ಟೇಕ್‌ ಮಾಡುವಾಗ ಮರಕ್ಕೆ ಬಸ್‌ ಡಿಕ್ಕಿ |
Shivamogga-Thirthahalli Road

SHIVAMOGGA | MALENADUTODAY NEWS | May 21, 2024  ಮಲೆನಾಡು ಟುಡೆ 

ಶಿವಮೊಗ್ಗ ತೀರ್ಥಹಳ್ಳಿ ರಸ್ತೆಯಲ್ಲಿ ಅತಿಯಾಗುತ್ತಿದೆ ಅಪಘಾತ ಎಂದು ಮಲೆನಾಡು ಟುಡೆ ಇವತ್ತಷ್ಟೆ ಸುದ್ದಿ ಮಾಡಿದೆ. ವರದಿಗೆ ಸಾಕ್ಷಿ ಎಂಬಂತೆ ಇವತ್ತು ಮತ್ತೊಂದು ಅಪಘಾತವಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಮಂಡಗದ್ದೆ ಸಮೀಪ ಅಪಘಾತವೊಂದು ಸಂಭವಿಸಿದೆ. ಖಾಸಗಿ ಬಸ್‌ವೊಂದು ಓವರ್‌ ಟೇಕ್‌ ಮಾಡುವ ಸಂದರ್ಭದಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಇವತ್ತು ಬೆಳಗ್ಗೆ 10.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. 

ಕಳಸದಿಂದ ಶಿವಮೊಗ್ಗಕ್ಕೆ ಬರುವ ಖಾಸಗಿ ಬಸ್‌ ಮಂಡಗದ್ದೆಯ 15 ನೇ ಮೈಲಿಕಲ್ಲಿನ ಬಳಿ ಹೋಗುತ್ತಿತ್ತು. ಈ ವೇಳೆ ಬಸ್‌ ಚಾಲಕ ಎದುರಿಗೆ ಸಾಗುತ್ತಿದ್ದ ವಾಹನವನ್ನ ಓವರ್‌ ಟೇಕ್‌ ಮಾಡಲು ಮುಂದಾಗಿದ್ದಾನೆ. ಈ ವೇಳೆ ಆತನ ನಿಯಂತ್ರಣ ತಪ್ಪಿದ ಬಸ್‌ ಇನ್ನೊಂದು ವಾಹನಕ್ಕೆ ಡಿಕ್ಕಿಯಾಗಿ ರಸ್ತೆ ಪಕ್ಕದ ಮರವೊಂದಕ್ಕೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಓರ್ವ ಮಹಿಳೆ ಹಾಗೂ ಓರ್ವ ಮಗುವು ಸೇರಿದಂತೆ ಕೆಲವರಿಗೆ ಗಾಯಗಳಾಗಿವೆ. ಇಬ್ಬರ ಪರಿಸ್ಥಿತಿ ಗಂಭೀರವಾಗಿ ಎನ್ನಲಾಗಿದೆ. ಇನ್ನೂ ಘಟನೆಯಲ್ಲಿ ಬಸ್‌ನ ಒಂದು ಬದಿ ಬಹುತೇಕ ನುಜ್ಜುಗುಜ್ಜಾಗಿದ್ದು , ಪ್ರಯಾಣಿಕರ ಇಳಿಯುವ ಡೋರ್‌ ಬದಿಯಲ್ಲಿ ಬಸ್‌ನ ಬಾಡಿ ನಗ್ಗಾಗಿದೆ.