ಪೊಲೀಸರ ಹೊಟ್ಟೆ ಮೇಲೆ ಸರ್ಕಾರದ ಕಣ್ಣು | ತರಬೇತಿ ವಿಭಾಗಕ್ಕಷ್ಟೆ ಏಕೆ ಈ ಶಿಕ್ಷೆ | JP ಬರೆಯುತ್ತಾರೆ ಖಾಕಿ ಸ್ಟೋರಿ!

The government's eye on pot bellies and higher body mass index (BMI) of the police Why this punishment to the training department | JP writes Khaki Story!

ಪೊಲೀಸರ ಹೊಟ್ಟೆ ಮೇಲೆ ಸರ್ಕಾರದ ಕಣ್ಣು  | ತರಬೇತಿ ವಿಭಾಗಕ್ಕಷ್ಟೆ  ಏಕೆ ಈ ಶಿಕ್ಷೆ  |  JP ಬರೆಯುತ್ತಾರೆ ಖಾಕಿ ಸ್ಟೋರಿ!
body mass index, police department

SHIVAMOGGA | MALENADUTODAY NEWS | May 21, 2024  ಮಲೆನಾಡು ಟುಡೆ 

ತೂಕ ಹೆಚ್ಚಳ ಮಾನದಂಡ ಕೇವಲ ಪೊಲೀಸ್ ತರಬೇತಿ ವಿಭಾಗದ ಅಧಿಕಾರಿ ಸಿಬ್ಬಂದಿಗಳಿಗೆ ಮಾತ್ರ  ಸೀಮಿತವೇ? ನಾನ್ ಎಕ್ಸಿಕ್ಯೂಟಿವ್ ಅಧಿಕಾರಿಗಳು ಹಾಗು ಐಪಿಎಸ್ ಅಧಿಕಾರಿಗಳಿಗೆ ಇದು ಅಪ್ಲೆ ಆಗುವುದಿಲ್ಲವೇ ? ಜೆಪಿ ಬರೆಯುತ್ತಾರೆ.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಳೆದ ಇಪ್ಪತ್ತು ದಿನಗಳಿಂದ BMI (ಬಾಡಿ ಮಾಸ್‌ ಇಂಡೆಕ್ಸ್‌) ಎಂಬ ಮಾನದಂಡದ ಬಗ್ಗೆಯೇ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಬಿ.ಎಂ.ಐ  ಅಂದರೆ ಬಾಡಿ ಮಾಸ್ ಇಂಡೆಕ್ಸ್ ಕನ್ನಡದಲ್ಲಿ ಭೌತಿಕ ದೃವ್ಯರಾಶಿ ಸೂಚಿ ಎಂದು ಕರೆಯುತ್ತಾರೆ. ಇದು ಅಂತರಾಷ್ಟ್ರೀಯ ಮಾನದಂಡವಾಗಿದ್ದು, ಮನುಷ್ಯನ ತೂಕಕ್ಕೆ ಸಂಬಂಧಿಸಿದ್ದೇ ಹೊರತು ಬೊಜ್ಜಿಗೆ ಅಲ್ಲ. ಭೌತಿಕ ದ್ರವ್ಯರಾಶಿ ಸೂಚಿ (BMI ) ಅಥವಾ ಕ್ವೆಟೆಲೆಟ್‌ ಸೂಚಿಯು ಒಬ್ಬ ವ್ಯಕ್ತಿಯ ತೂಕ ಮತ್ತು ಎತ್ತರವನ್ನು ಹೋಲಿಕೆ ಮಾಡುವ ಒಂದು ಸಂಖ್ಯಾಶಾಸ್ತ್ರೀಯ ಅಳತೆ. ಇದು ನಿಜವಾಗಿ ಶರೀರದ ಕೊಬ್ಬಿನ ಶೇಕಡಾವಾರು ಪ್ರಮಾಣವನ್ನು ಅಳೆಯದಿದ್ದರೂ, ವ್ಯಕ್ತಿಯ ಎತ್ತರದ ಆಧಾರದಲ್ಲಿ ಆರೋಗ್ಯಪೂರ್ಣ ದೇಹದ ತೂಕವನ್ನು ಅಂದಾಜು ಮಾಡಲು ನೆರವಾಗುತ್ತದೆ.ಈಗ ಈ ಮಾನದಂಡ ಪೊಲೀಸ್ ಇಲಾಖೆಯ ಕೇವಲ ಒಂದು ವಿಬಾಗದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಮಾತ್ರ ಅನ್ವಯಿಸಿ, ಅವರನ್ನು ಬೇರೆಡೆ ವರ್ಗಾವಣೆ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ

ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ತೂಕ ಎಷ್ಟಿರಬೇಕು ಎಂಬ ಮಾನದಂಡದ ಬಗ್ಗೆ ಸ್ಪಷ್ಟ ಆದೇಶವಿದೆಯಾ ?  ..ಇದೆ ಎಂಬುದಾದರೆ ಅದು ಎಲ್ ಅಂಡ್ ಓ ಸೇರಿದಂತೆ ಎಲ್ಲಾ ವಿಭಾಗದ ಅಧಿಕಾರಿಗಳು ಮತ್ತು ಐಪಿಎಸ್ ಅಧಿಕಾರಿಗಳಿಗೆ ಅನ್ವಯವಾಗಬೇಕಲ್ಲವೆ ಎಂಬ ಪ್ರಶ್ನೆ ಮೂಡುತ್ತದೆ.

ಈಗ  ಬಿ.ಎಂ.ಐ 29 ಕ್ಕಿಂತ ಹೆಚ್ಚಿರುವ ಪೊಲೀಸ್ ತರಬೇತಿ ವಿಭಾಗದ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಸರ್ಕಾರ ವಿಶೇಷ ಕರ್ತವ್ಯದ ನಿಯೋಜನೆ ಹೆಸರಿನಲ್ಲಿ ಬೇರೆ ತರಬೇತಿ ವಿಭಾಗಕ್ಕೆ ವರ್ಗಾವಣೆ ಮಾಡಿದೆ. ತೂಕ ಹೆಚ್ಚಿರುವ ಕಾರಣಕ್ಕೆ ಯಲಹಂಕ ಎಸ್ಪಿ ಮಂಜುನಾಥ್ ರನ್ನು ಐಮಂಗಲದ ಪೊಲೀಸ್ ತರಬೇತಿ ಶಾಲೆಗೆ ವರ್ಗಾವಣೆ ಮಾಡಲಾಗಿದೆ. ಅದೇ ರೀತಿಯಲ್ಲಿ ಐಮಂಗಲದ ಎಸ್ಪಿ ಪಾಪಣ್ಣರನ್ನು ಯಲಹಂಕಕ್ಕೆ ವರ್ಗಾವಣೆ ಮಾಡಲಾಗಿದೆ. 

ಪೊಲೀಸ್ ತರಬೇತಿ ಶಾಲೆಯ ಅನೇಕ ಇನ್‌ಸ್ಪೆಕ್ಟರ್ ಗಳನ್ನು ಖಾನಾಪುರದಿಂದ ಧಾರವಾಡಕ್ಕೆ, ಧಾರವಾಡದಿಂದ ಖಾನಾಪುರಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಅದೇ ರೀತಿ ಚನ್ನಪಟ್ಟಣದಲ್ಲಿದ್ದ ಅಧಿಕಾರಿ ಸಿಬ್ಬಂದಿಗಳನ್ನು ಮೈಸೂರಿಗೆ,  ಮೈಸೂರಿನಲ್ಲಿದ್ದ ಅಧಿಕಾರಿ ಸಿಬ್ಬಂದಿಗಳನ್ನು ಕಡೂರಿಗೆ ವರ್ಗಾವಣೆ ಮಾಡಲಾಗಿದೆ. ತಣಿಸಂದ್ರದ ಸಿಬ್ಬಂದಿಗಳನ್ನು ಐಮಂಗಲಕ್ಕೆ ವರ್ಗಾವಣೆ ಮಾಡಲಾಗಿದೆ.

ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿ ಸಿಬ್ಬಂದಿಗಳ ಸೂಕ ಇಂತಿಷ್ಟೆ ಪ್ರಮಾಣದಲ್ಲಿ ಇರಬೇಕು ಎಂಬ ಮಾನದಂಡ ಎಲ್ಲರಿಗೂ ಅಪ್ಲೆ ಆಗೋದಾದ್ರೆ..ಇದೊಂದು ಅವೈಜ್ಞಾನಿಕ ಕ್ರಮವೇ ಆಗಿರುತ್ತದೆ. ಕರ್ತವ್ಯಕ್ಕೆ ಸೇರುವ ಸಂದರ್ಭದಲ್ಲಿ ಕಡಿಮೆ ಇರುವ ತೂಕ ನಂತರದಲ್ಲಿ  ಅನುವಂಶೀಯ ಗುಣದಿಂದ  ಹೆಚ್ಚಳವಾದ್ರೆ ಅದಕ್ಕೆ ಹೊಣೆಯಾರು ಎಂಬ ಪ್ರಶ್ನೆ ಮೂಡುತ್ತದೆ. ಈಗ ತೂಕ ಹೆಚ್ಚಳವಾಗಿರುವ ಅಧಿಕಾರಿ ಸಿಬ್ಬಂದಿಗಳು ಕೇವಲ ಪೊಲೀಸ್ ತರಬೇತಿ ಕೇಂದ್ರದಲ್ಲಿ ಮಾತ್ರ ಇದ್ದಾರಾ ? ಎಲ್ಲಾ ವಿಭಾಗಗಳಲ್ಲೂ ಇದ್ದಾರೆ ಎನ್ನುವುದು ನಿಜವಲ್ಲವೆ!

ಕಾನೂನು ಸುವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಂದ ಹಿಡಿದು ನಾನ್ ಎಕ್ಸಿಕ್ಯೂಟಿವ್ ಗುಪ್ತಚರ ಸಂಸ್ಧೆ, ಸಿಐಡಿ, ಮೆಸ್ಕಾಂ ವೆಜೆಲೆನ್ಸ್, ಫಾರೆಸ್ಟ್ ವಿಂಗ್ ಇತರೆ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿ ಸಿಬ್ಬಂದಿಗಳಿಗೂ ಬಿ.ಎಂ.ಐ ಅನ್ವಯವಾಗಬೇಕು. ಹಾಗಾದಲ್ಲಿ ಮಾತ್ರ ಜಾರಿಗೆ ತಂದ ನಿಯಮಾವಳಿಗೆ ಅರ್ಥ ಸಿಗುತ್ತದೆ ಮತ್ತದು ನಿಜವಾದ ಮಾನದಂಡವೆನಿಸುತ್ತದೆ. 

ಐಪಿಎಸ್ ಅಧಿಕಾರಿಗಳ ತೂಕ ಹೆಚ್ಚಳ ಇಲ್ಲವೇ?

ಹಾಗೆ ನೋಡಿದರೆ ಅದೆಷ್ಟು ಮಂದಿ ಐಪಿಎಸ್ ಅಧಿಕಾರಿಗಳ ತೂಕ ಬಿಎಂಐ ಮಾನದಂಡಕ್ಕಿಂತ ಹೆಚ್ಚಳವಾಗಿಲ್ಲ. ವೈಜ್ಞಾನಿಕವಾಗಿ ಪರೀಕ್ಷೆಗೊಳಪಟ್ಟರೆ ಹಲವು ಐಪಿಎಸ್ ಅಧಿಕಾರಿಗಳ ತೂಕ BMI 29 ಕ್ಕಿಂತ ಹೆಚ್ಚಿರುವುದು ಸಾಭೀತಾಗುತ್ತದೆ..   ಹಾಗಂತ ಈ ಐಪಿಎಸ್ ಅಧಿಕಾರಿಗಳನ್ನು ಬೇರೆ ರಾಜ್ಯಗಳಿಗೆ ಸರಕಾರ ವರ್ಗಾವಣೆ ಮಾಡಲು ಸಾಧ್ಯವೇ? ಇದೊಂದು ವ್ಯವಸ್ಥಿತ ಲಾಭಿ ಅಷ್ಟೆ.

ತೂಕ ಇಳಿಸಲು ಮಾನದಂಡ ರೂಪಿಸಿ, ಅರಿವು ಜಾಗೃತಿ ಮೂಡಿಸಿ

ತರಭೇತಿ ವಿಭಾಗದಲ್ಲಿ ತೂಕ ಹೆಚ್ಚಿರುವ ಅಧಿಕಾರಿ ಸಿಬ್ಬಂದಿಗಳನ್ನು ಈಗಾಗಲೇ ವಿಶೇಷ ಕರ್ತವ್ಯದ ಅಡಿಯಲ್ಲಿ ಬೇರೆಡೆ ವರ್ಗಾವಣೆ ಆಗಿದ್ದಾರೆ. ಅವರೀಗ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ. ಕುಟುಂಬದೊಂದಿಗೆ ದೂರ ಉಳಿದಿರುವ ಇವರುಗಳು ಮತ್ತೆ ಹೊಟೆಲ್ ಆಹಾರಕ್ಕೆ ಅವಲಂಬಿತವಾದರೆ, ಇನ್ನು ತೂಕ  ಇಳಿಸಿಕೊಳ್ಳಲು ಸಾಧ್ಯವೇ. ಅತಿಯಾದ ಕಾರ್ಯದೊತ್ತಡದಲ್ಲಿ ಕೆಲಸ ಮಾಡುವವರಿಗೆ ನೆಮ್ಮದಿಯ ಬದುಕಿಗೆ ಅವಕಾಶ ಮಾಡಿಕೊಡೇಕಾದ ಕರ್ತವ್ಯ ಸರ್ಕಾರದ್ದಾಗಿದೆ. 

ವಾಸ್ತವದಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿ ಮತ್ತು ಸಿಬ್ಬಂದಿಗಳ ತೂಕ ಕಡಿಮೆ ಇರಬೇಕು. ಹಾಗಂತ ಏಕಾಏಕಿ ಯಾವುದೇ ರಾಜಕೀಯ ಕೃಪೆ ಇಲ್ಲದ ವಿಭಾಗವನ್ನು ಪೈಲೆಟ್ ಪ್ರಾಜೆಕ್ಟ್ ರೀತಿಯಲ್ಲಿ ಪ್ರಯೋಗಕ್ಕೊಳಪಡಿಸುವುದು ಸರಿಯಲ್ಲ.  ಎಕ್ಸಿಕ್ಯೂಟಿವ್‌ನಲ್ಲಿ ಕೆಲಸ ಮಾಡುವ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ರಾಜಾಶ್ರಯ ಇರುತ್ತದೆ. ಹೀಗಾಗಿ ವ್ಯವಸ್ಥೆ ಇವರನ್ನು ಟಚ್ ಕೂಡ ಮಾಡುವುದಿಲ್ಲ. 

ಒಟ್ಟಾರೆ ಆಶಯವಿಷ್ಟೆ, ತೂಕ ಇಳಿಕೆ ಮಾನದಂಡ ಎಲ್ಲರಿಗೂ ಅನ್ಯಯವಾಗಲಿ. ಅದಕ್ಕೊಂದು ಮಾನದಂಡ, ಮಾರ್ಗ ಸೂಚಿ ಇರಲಿ. ಡಯಟೀಷಿಯನ್ ನ್ಯೂಟ್ರೀಷಿಯನ್ ತಜ್ಞರಿಂದ ಪೊಲೀಸರಿಗೆ ಅರಿವು ಜಾಗೃತಿ ಮೂಡಿಸುವ ಕೆಲಸವಾಗಲಿ. ಹಾಗೆಯೆ ಅನುವಂಶೀಯವಾಗಿ ತೂಕ ಹೆಚ್ಚಳವಾಗಿದ್ದರೆ.ಅಂತವರಿಗೆ ಮಾನವೀಯತೆಯಲ್ಲಿ ರಿಯಾಯಿತಿ ನೀಡುವ ಮನುಷ್ಯತ್ವದ ನಿಯಮ ತರಲಿ. ಈ ಬಗ್ಗೆ ಖುದ್ದು ಗೃಹಸಚಿವರೇ ಮದ್ಯ ಪ್ರವೇಶಿಸಿ, ತೂಕದ ಮುಳ್ಳಿಗೆ ಲಗಾಮು ಹಾಕಬೇಕಿದೆ.