ಶಿವಮೊಗ್ಗ- ತೀರ್ಥಹಳ್ಳಿ ರಸ್ತೆಯಲ್ಲಿ ಜೀವಕ್ಕಿಲ್ಲ ಗ್ಯಾರಂಟಿ | ಇಲ್ಲಿ ವಾರಕ್ಕೆ ನಾಲ್ಕು ಆಕ್ಸಿಡೆಂಟ್‌ ಪಕ್ಕಾ | ಕಾರಣವೇನು? ಜೆಪಿ ಬರೆಯುತ್ತಾರೆ

There is no guarantee for life on the Shimoga-Tirthahalli road Four incidents per week are guaranteed here What is the reason? JP writes

ಶಿವಮೊಗ್ಗ- ತೀರ್ಥಹಳ್ಳಿ ರಸ್ತೆಯಲ್ಲಿ ಜೀವಕ್ಕಿಲ್ಲ ಗ್ಯಾರಂಟಿ | ಇಲ್ಲಿ  ವಾರಕ್ಕೆ ನಾಲ್ಕು ಆಕ್ಸಿಡೆಂಟ್‌ ಪಕ್ಕಾ |  ಕಾರಣವೇನು? ಜೆಪಿ ಬರೆಯುತ್ತಾರೆ
Shimoga- Theerthahalli Road,JP writes

SHIVAMOGGA | MALENADUTODAY NEWS | May 21, 2024  ಮಲೆನಾಡು ಟುಡೆ 

ತೀರ್ಥಹಳ್ಳಿ ಶಿವಮೊಗ್ಗ ರಸ್ತೆಯಲ್ಲಿ ಹೆಚ್ಚುತ್ತಿರುವ ಅಪಘಾತಗಳಿಗೆ ಕಾರಣವೇನು..ಟುಡೇ ಗ್ರೌಂಡ್ ರಿಪೋರ್ಟ್ ನ ಸರ್ವೆ ಏನ್ ಹೇಳುತ್ತೆ..ಜೆಪಿ ಬರೆಯುತ್ತಾರೆ.

 

ತೀರ್ಥಹಳ್ಳಿ ರೋಡ್​ನಲ್ಲಿ ಮಂಡಗದ್ದೆ ಫಿಶ್ ಹೋಟೆಲ್ ಸಮೀಪ ಖಾಸಗಿ ಬಸ್-ಬೈಕ್ ಡಿಕ್ಕಿ! ಸ್ಥಳದಲ್ಲಿಯೇ ಇಬ್ಬರ ದುರ್ಮರಣ

 

ಶಿವಮೊಗ್ಗ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ , ಮಂಗಳೂರಿಗೆ ಹೋಗುತ್ತಿದ್ದ ಗ್ಯಾಸ್ ಲಾರಿ ಪಲ್ಟಿ!

 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಮುಡುಬ ಬಳಿ ಟ್ರ್ಯಾಕ್ಸ್ -ಕಾರು ನಡುವೆ ಭೀಕರ ಅಪಘಾತ

 

ಭದ್ರಾವತಿಯಿಂದ ಮಂಗಳೂರು ವೆನ್​ಲಾಕ್​ ಆಸ್ಪತ್ರೆಗೆ ಹೋಗುತ್ತಿದ್ದವರಿಗೆ ಕಾರು ಡಿಕ್ಕಿ ! ತೀರ್ಥಹಳ್ಳಿಯಲ್ಲಿ ಭೀಕರ ಅಪಘಾತ

 

ಇದು ಸ್ಯಾಂಪಲ್‌ ಹೆಡ್‌ಲೈನ್‌ಗಳು ವಿವರಗಳನ್ನ ಕ್ಲಿಕ್‌ ಮಾಡಿ ಓದಬಹುದು. ವಿಷಯ ಅಂದರೆ, ತೀರ್ಥಹಳ್ಳಿ ರಸ್ತೆಯಲ್ಲಿ ಬೈಕ್ ಕಾರು ವಾಹನಗಳ ಅಪಘಾತ ಸಂಖ್ಯೆ ದಿನದಿನಕ್ಕೂ ಹೆಚ್ಚುತ್ತಿದೆ. ಅದರಲ್ಲೂ ಮಾಳೂರು ಲಿಮಿಟ್ಸ್ ನಲ್ಲಿ ಸಂಭವಿಸುವ ಅಪಘಾತದಲ್ಲಿ ವಾಹನಗಳು ಸಂಪೂರ್ಣ ಜಖಂಗೊಂಡಿರುತ್ತದೆ ಮಾತ್ರವಲ್ಲದೆ ಸಾವುನೋವುಗಳಾಗಿರುತ್ತದೆ. ಅಪಘಾತದಲ್ಲಿ ಕೈಕಾಲು ಕಳೆದು ಕೊಂಡವರು ಕೋಮಾಗೆ ಜಾರಿದವರು, ಈಗಲೂ ಬುದಕು ಕಟ್ಟಿಕೊಳ್ಳಲಾಗದೆ ಪರಿತರಿಸುತ್ತಿದ್ದಾರೆ. 

 

ಆಸ್ಪತ್ರೆಯಲ್ಲಿ ತಿಂಗಳುಗಟ್ಟಲೆ ದಾಖಲಾಗಿ, ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ. ಗಾಜನೂರಿನಿಂದ ತೀರ್ಥಹಳ್ಳಿಯ ಕುಡುಮಲ್ಲಿಗೆಯವರೆಗಿನ ರಾಷ್ಟ್ರೀಯ ಹೆದ್ದಾರಿ ಹೆಚ್ಚಿನ ತಿರುವುಗಳನ್ನು ಹೊಂದಿದೆ. ಕಡಿದಾದ ತಿರುವುಗಳಲ್ಲಿ ಅಪಘಾತ ವಲಯ ಎಂದು ನಾಮಫಲಕ ಹಾಕಿದ್ದರೂ, ಅದನ್ನು ನಿರ್ಲಕ್ಷ್ಯವಾಗಿ ನೋಡುವ ವಾಹನ ಸಹಾವವರ ಬೇಜವಾಬ್ದಾರಿಯೇ ಅಪಘಾತಕ್ಕೆ ಮೊದಲ ಕಾರಣವಾಗುತ್ತಿದೆ. 

ಅತೀಯಾದ ವೇಗ ಮತ್ತು ಬೇರೆ ಊರುಗಳಿಂದ ಬಂದ ವಾಹನ ಸವಾರರಿಂದ ಅಪಘಾತ ಹೆಚ್ಚು

 

ತೀರ್ಥಹಳ್ಳಿ ರಸ್ತೆಯನ್ನು ಬಲ್ಲ ಹಾಗು ಪ್ರತಿದಿನ ಈ ರಸ್ತೆಯಲ್ಲಿ ಸಾಗುವ ವಾಹನ ಸವಾರರಿಂದ ಅಪಘಾತ ತೀರಾ ಕಡಿಮೆ. ರಸ್ತೆಯ ಪರಿಚಯ ಇರುವುದರಿಂದ ಹಾಗು ಎಲ್ಲಿಲ್ಲಿ ತಿರುವುಗಳು ಸೂಕ್ಷ್ಮವಾಗಿದೆ ಎಂದು ಅರಿತ ಕಾರಣಕ್ಕೆ ಸ್ಥಳೀಯ ವಾಹನ ಸವಾವರು ಸಾವಕಾಶವಾಗಿಯೇ ಹೋಗುತ್ತಾರೆ. ಆದರೆ ಬೇರೆ ಊರುಗಳಿಂದ ಬರುವ ವಾಹನ ಸವಾರರು ಈ ರಸ್ತೆಯ ಮೂಲಕ ಘಾಟಿ ಇಳಿದು ಕರಾವಳಿಗೆ ಹೋಗುವ ದಾವಂತದಲ್ಲಿ ಅತೀ ವೇಗದಲ್ಲಿ ವಾಹನ ಚಲಾಯಿಸುತ್ತಾರೆ.  

 

ಕಡಿದಾದ ತಿರುವುಗಳಲ್ಲಿ ದಿಡೀರ್ ಎದುರಾಗುವ ವಾಹನಗಳಿಂದ ಕಂಗಾಲಾಗುವ ವಾಹನ ಸವಾರರು ಸೀದಾ ಇಲ್ಲವೇ ನಿಯಂತ್ರಣ ತಪ್ಪಿಸಲು ಹೋಗಿ  ವಾಹನ ಅಪಘಾತವಾಗುವಂತೆ ಮಾಡುತ್ತಾರೆ. ಇದರಿಂದ ವಾಹನಗಳು ನಜ್ಜುಗುಜ್ಜಾಗಿ ಸಾವಿನ ಸಂಖ್ಯೆ ಕೂಡ ಹೆಚ್ಚುತ್ತಿದೆ.

ರಸ್ತೆಗೆ ಅಡ್ಡಲಾಗಿ ಬರುವ ಹಾವು, ನಾಯಿ ದನ ಬೆಕ್ಕು 

 

ಮಲೆನಾಡಿನ ರಸ್ತೆಯಲ್ಲಿ ಇಲ್ಲವೇ ಕಾಡಿನ ಮದ್ಯೆ ಹಾದು ಹೋಗುವ ರಸ್ತೆಗಳಲ್ಲಿ ವಾಹನ ಚಲಾಯಿಸುವ ಚಾಲಕರು ಮೊದಲು ಅರ್ಥ ಮಾಡಿಕೊಳ್ಳಬೇಕಾಗಿದ್ದು ಇದೇ ವಿಚಾರವನ್ನು. ವೇಗವನ್ನು ಕಡಿಮೆ ಮಾಡಿಕೊಂಡು ರಸ್ತೆಯ ಇಕ್ಕೆಲಗಳ ಮೇಲೆ ಕಣ್ಣಾಡಿಸಿಕೊಂಡು ಎದುರಿನ ದಾರಿಯಲ್ಲಿ ಸಾಗಬೇಕಾದ ಜಾಣ್ಮೆ ಇಲ್ಲಿ ಚಾಲಕನಿಗೆ ಇರಬೇಕಾಗುತ್ತದೆ. ನಾನು ಡ್ರೈವಿಂಗ್ ನಲ್ಲಿ ಪಕ್ಕಾ ಅಂತಾ ಈ ರಸ್ತೆಗಳಲ್ಲಿ ಹೋದ್ರೆ, ಯಾಮಾರೋದು ಗ್ಯಾರಂಟಿ. 

 

ಅತೀ ವೇಗವಾಗಿ ರಸ್ತೆಯಲ್ಲಿ ಸಾಗುತ್ತಿರುವ ಸಂದರ್ಭದಲ್ಲಿ ದಿಢೀರ್ ಹಾವು ಎದುರಾದ್ರೆ, ಬೆಕ್ಕು ನಾಯಿ ಅಡ್ಡ ಬಂದ್ರೆ, ವಾಹನ ನಿಯಂತ್ರಿಸುವುದು ಸಾಧ್ಯವಿಲ್ಲ. ಇನ್ನು ರಸ್ತೆ ತಿರುವಿನಲ್ಲಿ ಪ್ರಾಣಿ ಗಳು ಎದುರಾದ್ರೆ, ಅಪಘಾತ ಕಟ್ಟಿಟ್ಟ ಬುತ್ತಿ . ಪ್ರಾಣಿಗಳ ಪ್ರಾಣ ಉಳಿಸಲು ಹೋಗಿ ತಮ್ಮ ಪ್ರಾಣವನ್ನು ಕಳೆದುಕೊಂಡ ವ್ಯಕ್ತಿಗಳು ಸಾಕಷ್ಟಿದ್ದಾರೆ. 

ಮೋಜು ಮಸ್ತಿಯ ಅಮಲು ತೆಗೆಯುತ್ತೆ ಜೀವ

 

ತೀರ್ಥಹಳ್ಳಿ ರಸ್ತೆಯಲ್ಲಿ ಹೆಚ್ಚಾಗಿರುವ ಮೀನು ಹೊಟೆಲ್ ಗಳಲ್ಲಿ ಮೀನು ಊಟ ಮಾಡಲು ಬರುವ ಯುವಕರಲ್ಲಿ ಸಾಕಷ್ಟು ಮಂದಿ ಪಾನಮತ್ತರಾಗಿಯೇ ಇರುತ್ತಾರೆ ಬೈಕು ಕಾರುಗಳಲ್ಲಿ ಅತೀ ವೆಗವಾಗಿ ಬರುವ ಯುವಕರು ಮೋಜಿನ ಮಸ್ತಿಯಲ್ಲಿಯೇ ಇರುತ್ತಾರೆಯೇ ಹೊರತು..ಎದುರಿನ ವಾಹನಗಳ ವೇಗ ತಿರುವುಗಳ ಬಗ್ಗೆ ತಕ್ಷಣಕ್ಕೆ ಗೇಜ್ ಮಾಡುವುದು ಮಾಡುವುದಿಲ್ಲ. ಮೋಜಿನ ಅಮಲಿನಲ್ಲಿ ರಸ್ತೆಯ ಬದಿಯ ಮರಕ್ಕೆ ಡಿಕ್ಕಿ ಹೊಡೆಯುವುದು ಇಲ್ಲವೇ ಎದುರಿನ ವಾಹನಗಳಿಗೆ ಡಿಕ್ಕಿ ಹೊಡೆಯುವುದು ಸಾಮಾನ್ಯ ಎಂಬಂತಾಗಿದೆ. ವಿಶೇಷವಾಗಿ ಭಾನುವಾರದಂದು ಪ್ರಕೃತಿಯ ಮಡಿಲಿನಲ್ಲಿ ಮೀನು ತಿಂದು ಮೋಜು ಮಸ್ತಿ ಮಾಡಲು ಬರುವ ಯುವಕರೇ ಸಾವಿನ ಮನೆ ಕದ ತಟ್ಟುತ್ತಿರುವುದು ವಿಪರ್ಯಾಸವಾಗಿದೆ

ಮಳೆಗಾಲದಲ್ಲಿ ಇರಲಿ ಎಚ್ಚರ

ಈಗ ಮಳೆಗಾಲ ಆರಂಭವಾಗಿದೆ. ಮಳೆಗಾಲದಲ್ಲಿ ತೀರ್ಥಹಳ್ಳಿ ರಸ್ತೆಯಲ್ಲಿ ಅಪಘಾತ ಸಂಖ್ಯೆ ಹೆಚ್ಚಿರುತ್ತೆ. ಬಹುಮುಖ್ಯವಾಗಿ ಮಂಡಗದ್ದೆಯ ಕಾಡಿನ ರಸ್ತೆಯ ಇಕ್ಕೆಲಗಳಲ್ಲಿ ಹಾಕಿರುವ ಮಣ್ಣು ಮಳೆಯಿಂದಾಗಿ ಮೆದುವಾಗಿರುತ್ತೆದ. ವೇಗವಾಗಿ ಬರುವಾಗ ತಕ್ಷಣ ರಸ್ತೆಯ ಪಕ್ಕ ಇಳಿಸಿದ್ರೂ ವಾಹನ್ ರೋಲ್ ಆಗಿ ಅಪಘಾತವಾಗುತ್ತದೆ. ಈ ರಸ್ತೆಯಲ್ಲಿ ಸಾಗುವಾಗ ವಾಹನ ರಸ್ತೆಯ ಬದಿಗೆ ಹೋಗುವುದಕ್ಕಿಂತ ವಾಹನದ ವೇಗವನ್ನೇ ನಿಯಂತ್ರಿಸುವುದು ಸೂಕ್ತ. 

 

ಎಲ್ಲದಕ್ಕಿಂತ ಮುಖ್ಯವಾಗಿ ವಾಹನದ ವೇಗ ಕಡಿಮೆ ಮಾಡಿಕೊಂಡು ವಾಹನ ಚಲಾಯಿಸಿದ್ರೆ ಪರ್ವಾಗಿಲ್ಲ ಅನ್ಕೊಂಡ್ರೆ. ಇಲ್ಲಿ ಕೂಡ ಯಾಮಾರಿ ಬಿಡ್ತಿವಿ. ನಾವೇನೋ ಸರಿಯಾಗಿ ವಾಹನ ಚಲಾಯಿಸ್ತಿವಿ. ಎದುರಿಗೆ ಬರುವ ವಾಹನ ಚಾಲಕ ಎಷ್ಟರ ಮಟ್ಟಿಗೆ ವಾಹನವನ್ನು ಸುರಕ್ಷಿತವಾಗಿ ಚಲಾಯಿಸುತ್ತಿದ್ದಾನೆ ಎಂಬುದನ್ನು ತಿಳಿದುಕೊಳ್ಳುವ ಜಾಣ್ಮೆ ನಮಗಿರಬೇಕು. ಎಲ್ಲದಕ್ಕಿಂತಲೂ ಮುಖ್ಯವಾಗಿ ಚಾಲನೆಯಲ್ಲಿ ಸಮಾದಾನ ತಾಳ್ಮೆ ಇರಬೇಕು. ಆಗ ವಾಹನ ನಮ್ಮ ನಿಯಂತ್ರಣದಲ್ಲಿರುತ್ತದೆ.