Foot Patrolling | ಮೂರು ದಿನಗಳಲ್ಲಿ 150 ಕ್ಕೂ ಹೆಚ್ಚು ಪಿಟ್ಟಿ ಕೇಸ್‌ | ರಾತ್ರಿ ಹೊತ್ತಲ್ಲಿ ಹುಷಾರ್‌

Foot Patrolling | More than 150 Pitti cases in three days. Shimoga Police, Poot Patrolling Case, Pitti Case, Police Case, Area Domination,

Foot Patrolling | ಮೂರು ದಿನಗಳಲ್ಲಿ 150 ಕ್ಕೂ ಹೆಚ್ಚು ಪಿಟ್ಟಿ ಕೇಸ್‌  | ರಾತ್ರಿ ಹೊತ್ತಲ್ಲಿ ಹುಷಾರ್‌
Shimoga Police, Poot Patrolling Case, Pitti Case, Police Case, Area Domination,

SHIVAMOGGA | MALENADUTODAY NEWS | May 21, 2024  ಮಲೆನಾಡು ಟುಡೆ 

ಶಿವಮೊಗ್ಗದಲ್ಲಿ ಮೂರನೇ ದಿನವೂ ಏರಿಯಾ ಡಾಮಿನೇಷನ್‌ ಗಸ್ತು ಮುಂದುವರಿದಿದೆ. ಮೊದಲ ದಿನ 71 ಪ್ರಕರಣ , ಎರಡನೇ ದಿನ 62 ದಾಖಲಿಸಿದ್ದ ಪೊಲೀಸರು ನಿನ್ನೆ ಅಂದರೆ ಸೋಮವಾರದಂದು ಒಟ್ಟು 44 ಪಿಟ್ಟಿಕೇಸ್‌ಗಳನ್ನ ದಾಖಲಿಸಿದ್ದಾರೆ. ಈ ಮೂಲಕ ಮೂರು ದಿನಗಳಲ್ಲಿ ನೂರ ಐವತ್ತಕ್ಕೂ ಹೆಚ್ಚು ಪಿಟ್ಟಿಕೇಸ್‌ ದಾಖಲಿಸಿದ್ದಾರೆ.  

ನಿನ್ನೆ ದಿನ ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಕೆ ಆರ್ ಪುರಂ, ಸೀಗೆಹಟ್ಟಿ, ಗಾಂಧಿ ಬಜಾರ್, ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ರವೀಂದ್ರ ನಗರ, ರಾಜೇಂದ್ರ ನಗರ, ಗಾಂಧಿ ನಗರ, ಕುಂಸಿ

ಶಿಕಾರಿಪುರ  ಉಪ ವಿಭಾಗ ವ್ಯಾಪ್ತಿಯ ಶಿಕಾರಿಪುರ ಟೌನ್ ವಿನಾಯಕ ನಗರ, ಬೆಳವಂತ್ ಕೊಪ್ಪ, ಹಿರೇಕೆರೂರು ರಸ್ತೆ ಶಿರಾಳಕೊಪ್ಪ ಟೌನ್

ಸಾಗರ ಉಪ ವಿಭಾಗ ವ್ಯಾಪ್ತಿಯ   ಸಾಗರ ಟೌನ್ ಗಾಂಧಿ ನಗರ, ಕೆಳದಿ ರಸ್ತೆ, ಆನಂದಪುರ ಅಶೋಕ್ ನಗರ

ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಮೇಲಿನ ಹುತ್ತ, ಸಂತೆ ಮೈದಾನ, ಅಶ್ವತ್ ನಗರ, ಅರೇಬಿಳಚಿ, ಹೊಳೆಹೊನ್ನುರಿನ ಎನ್ ಟಿ ವೃತ್ತದಲ್ಲಿ ಏರಿಯಾ ಡಾಮಿನೇಷನ್‌ ಗಸ್ತು ನಡೆಸಲಾಗಿದೆ. 

ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು ಕಾಲ್ನಡಿಗೆ ವಿಶೇಷ ಗಸ್ತು  Foot Patrolling  ಮತ್ತು ಠಾಣಾ ವ್ಯಾಪ್ತಿಗಳ ಹೊರ ವಲಯಗಳಲ್ಲಿ Area Domination ವಿಶೇಷ ಗಸ್ತು ಮಾಡಿ Public Nuisance ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟು 44 ಲಘು ಪ್ರಕರಣಗಳನ್ನು  ದಾಖಲಿಸಲಾಗಿದೆ ಎಂದು ಪೊಲೀಸ್‌ ಪ್ರಕಟಣೆ ತಿಳಿಸಿದೆ.  




  Shimoga Police, Poot Patrolling Case, Pitti Case, Police Case, Area Domination,