ಕಾಡುಗಳ್ಳ ವೀರಪ್ಪನ್ ಹಾಟ್ ಸ್ಪಾಟ್ ಆಗಿದ್ದ ಕಾಡು ಪ್ರದೇಶ ಈಗ ನಕ್ಸಲರಿಗೆ ರೆಡ್ ಕಾರ್ಪೇಟ್ ಹಾಸಿದೆಯಾ..? ಜೆಪಿ ಬರೆಯುತ್ತಾರೆ

malenadu naxal Area, karnataka naxal story,

ಕಾಡುಗಳ್ಳ ವೀರಪ್ಪನ್ ಹಾಟ್ ಸ್ಪಾಟ್ ಆಗಿದ್ದ ಕಾಡು ಪ್ರದೇಶ ಈಗ ನಕ್ಸಲರಿಗೆ ರೆಡ್ ಕಾರ್ಪೇಟ್ ಹಾಸಿದೆಯಾ..?  ಜೆಪಿ ಬರೆಯುತ್ತಾರೆ
ಕಾಡುಗಳ್ಳ ವೀರಪ್ಪನ್ ಹಾಟ್ ಸ್ಪಾಟ್ ಆಗಿದ್ದ ಕಾಡು ಪ್ರದೇಶ ಈಗ ನಕ್ಸಲರಿಗೆ ರೆಡ್ ಕಾರ್ಪೇಟ್ ಹಾಸಿದೆಯಾ..?  ಜೆಪಿ ಬರೆಯುತ್ತಾರೆ

ಕಾಡುಗಳ್ಳ ವೀರಪ್ಪನ್ ಹಾಟ್ ಸ್ಪಾಟ್ ಆಗಿದ್ದ ಕಾಡು ಪ್ರದೇಶ ಈಗ ನಕ್ಸಲರಿಗೆ ರೆಡ್ ಕಾರ್ಪೇಟ್ ಹಾಸಿದೆಯಾ..? ಮಲೆನಾಡಿನಲ್ಲಿ ಕಮರಿದ ನಕ್ಸಲ್ ಹೆಜ್ಜೆ ಗುರುತುಗಳು ಈಗ ಟ್ರೈ ಜಂಕ್ಷನ್ ಏರಿಯಾದಲ್ಲಿ ಆಕ್ಟಿವ್ ಆಗಿದೆಯಾ..? ಜೆಪಿ ಬರೆಯುತ್ತಾರೆ

 ನಕ್ಸಲ್ ಸಂಘಟನೆಯ ನಾಯಕತ್ವ ವಹಿಸಿದ್ದ ಬಿ.ಜಿ ಕೃಷ್ಣಮೂರ್ತಿ ಮತ್ತು ಹೊಸಗದ್ದೆ ಪ್ರಭಾ ಶರಣಾಗತಿ ನಂತರ, ಮಲೆನಾಡಿನಲ್ಲಿ ನಕ್ಸಲ್ ಸಂಘಟನೆ ಸಂಪೂರ್ಣ ನಿಷ್ಕ್ರೀಯಗೊಂಡಿದೆ. ಹಲವು ಮಂದಿ ನಕ್ಸಲರು ಸರ್ಕಾರದ ಮುಂದೆ ಶರಣಾದರೆ, ಮತ್ತೆ ಕೆಲವರು ಕೇಸುಗಳನ್ನು ಗೆಲ್ಲುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಳಿದುಳಿದ ನಕ್ಸಲರು ಕೇರಳಕ್ಕೆ ಶಿಫ್ಟ್ ಆಗಿದ್ದು, ಅಲ್ಲಿ ಕೂಡ ಸಂಘಟನೆಗೆ ದೊಡ್ಡ ಪೆಟ್ಟು ಬಿದ್ದಿದೆ.

 

ಎರಡು ದಶಕದ ಹಿಂದೆ ನಕ್ಸಲರ ಕಾರ್ಖಾನೆ ಎಂಬ ಅಪಖ್ಯಾತಿ ಪಡೆದಿದ್ದ ಶಿವಮೊಗ್ಗ ಜಿಲ್ಲೆ ಈಗ ಆ ಕಪ್ಪುಪಟ್ಟಿಯಿಂದ ಹೊರಬಂದಿದೆ. ಶೋಷಿತರು ದಮನಿತರ ಪರವಾಗಿ ಶಿವಮೊಗ್ಗ ನಗರದಲ್ಲಿ ಹೋರಾಟ ಮಾಡುತ್ತಿದ್ದ ಯುವಕ ಯುವತಿಯರು..ಇದ್ದಕ್ಕಿದ್ದಂತೆ ನಕ್ಸಲ್ ಸಂಘಟನೆಯತ್ತ ಆಕರ್ಷಿತರಾಗಿ ಭೂಗತರಾದರು, ಪಾರ್ವತಿ ಹಾಜೀಮಾರ ಎನ್ಕೌಂಟರ್ ನಿಂದ ಹಿಡಿದು  ಬಿಜಿ ಕೃಷ್ಣಮೂರ್ತಿ ಮತ್ತು ಹೊಸಗದ್ದೆ ಪ್ರಭಾ ಶರಣಾಗತಿಯವರೆಗೆ ನಕ್ಸಲ್ ಸಂಘಟನೆ ಏಳುಬೀಳುಗಳನ್ನು ಅವಲೋಕಿಸಿದ್ರೆ..ಫಲಿತಾಂಶ ಮಾತ್ರ ಶೂನ್ಯ ಎನಿಸುತ್ತದೆ.

ಮಲೆನಾಡಿನ ಮುಗ್ದ ಬಡ ಯುವಕ ಯುವತಿಯರೇ.. ಬಂದೂಕು ಹಿಡಿದು ಕೆಂಪು ಹಾಸಿನ ಮೇಲೆ ಸಾಗಿದಾಗ..ಪೊಲೀಸರು ಅವರನ್ನು ಸುಮ್ಮನೆ ಬಿಡಲು ಸಾಧ್ಯವೇ..ಹತ್ತಕ್ಕು ಹೆಚ್ಚು ಮಂದಿ ನಕ್ಸಲರು ಪೊಲೀಸ್ ಎನ್ಕೌಂಟರ್ ಗೆ ಬಲಿಯಾಗಿದ್ದಾರೆ. ಪೊಲೀಸ್ ಮಾಹಿತಿದಾರರೆಂಬ ಕಾರಣಕ್ಕೆ ನಕ್ಸಲರು.ಶೇಷಪ್ಪಗೌಡ ಹಾಗು ಕೆಸಮುಡಿ ವೆಂಕಟೇಶ್ ರನ್ನು ಹತ್ಯೆ ಮಾಡಿದರು. ಯಾವಾಗ ಮಲೆನಾಡಿನ ನಾಗರೀಕರ ರಕ್ತ, ಹಸಿರು ನೆಲದಲ್ಲಿ ಬಿತ್ತೋ..ಅಂದೇ ನಕ್ಸಲರು ಜನರ ವಿಶ್ವಾಸ ಕಳೆದುಕೊಂಡರು. ಯಾವ ಬಡ ಜನರ ಆಶೋತ್ತರಗಳ ಈಡೇರಿಕೆಗಾಗಿ  ನಕ್ಸಲರು ಕಾಡು ಸೇರಿದರೋ..ಅದೇ ಪರಿಸರ ನಕ್ಸಲರಿಗೆ ಮುಳುವಾಯಿತು.

ಆದರೆ ಇತ್ತಿಚ್ಚೆಗೆ ಕೇರಳದಲ್ಲಿ ಬಂಧಿತರಾದ ನಕ್ಸಲ್ ಶ್ರೀಮತಿ ಮತ್ತು ಚಂದ್ರು ರ ಬಂಧನದ ನಂತರ ನಕ್ಸಲರು ಮತ್ತೆ ಆಕ್ಟಿವ್ ಆಗಿರುವುದನ್ನು ಪುಷ್ಟಿಕರಿಸುತ್ತದೆ.

ಹೌದು ಇತ್ತಿಚ್ಚಿನ ವರ್ಷಗಳಲ್ಲಿ ನಕ್ಸಲರು ಟ್ರೈ ಜಂಕ್ಷನ್ ಏರಿಯಾ ಎನಿಸಿಕೊಳ್ಳುವ ಕರ್ನಾಟಕ ಕೇರಳ ತಮಿಳುನಾಡು ಕಾಡಿನ ಪ್ರದೇಶವನ್ನು ತಮ್ಮ ಕಾರ್ಯಚಟುವಟಿಕೆಗೆ ಅಡಗು ತಾಣವನ್ನಾಗಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಲೆಮಹದೇಶ್ವರ ಬೆಟ್ಟ ಸತ್ಯಮಂಗಲ ಕಾಡಿನ ಪ್ರದೇಶ ನಕ್ಸಲರಿಗೆ ರೆಡ್ ಕಾರ್ಪೇಟ್ ಹಾಸಿದಂತಿದೆ. ಒಂದು ಕಾಲದಲ್ಲಿ ಕಾಡುಗಳ್ಳ ವೀರಪ್ಪನ್ ರಾಜಾಶ್ರಯಚ ಪಡೆದಿದ್ದ ಈ ಕಾಡಿನ ಪ್ರದೇಶವನ್ನೇ ನಕ್ಸಲರು ಹಾಟ್ ಸ್ಪಾಟ್ ಆಗಿ ಗುರುತಿಸಿಕೊಂಡಿದ್ದಾರೆ.

ಸತ್ತಿದ್ದಾಳೆ ಅಂದು ಕೊಂಡಿದ್ದ ಶ್ರೀಮತಿ ಬಂಧನ

ಕಳೆದ ಮೂರು  ವರ್ಷದ ಹಿಂದೆ ಕೇರಳದಲ್ಲಿ ನಕ್ಸಲರು ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಶ್ರೀಮತಿ ಸಾವನ್ನಪ್ಪಿದ್ದಾಳೆ ಎಂದು ಎಲ್ಲರೂ ಭಾವಿಸಿದ್ರು. ಆದರೆ ಇತ್ತಿಚ್ಚೆಗೆ ಕೇರಳ ಗಡಿ ಭಾಗದಲ್ಲಿ ಆಕೆಯ ಬಂಧನವಾದಾಗ್ಲೇ...ಶ್ರೀಮತಿ ಇನ್ನು ಬದುಕಿದ್ದಾಳೆ ಎನ್ನುವುದು ಗೊತ್ತಾಯಿತು. ಕರ್ನಾಟಕ ಕೇರಳ ಗಡಿಭಾಗದಲ್ಲಿ ಇತ್ತಿಚ್ಚಿನ ದಿನಗಳಲ್ಲಿ ನಕ್ಸವರು ಮತ್ತು ಪೊಲೀಸರ ನಡುವೆ ಫೈರಿಂಗ್ ನಡೆಯುತ್ತಿದೆ. ಕಳೆದ ತಿಂಗಳು ಕೂಡ ಪೈರಿಂಗ್ ನಡೆದಿತ್ತು.

ಕೇರಳ ತಮಿಳುನಾಡು ಕರ್ನಾಟಕ ಗಡಿಭಾಗದಲ್ಲಿ ನಕ್ಸಲ್ ಸಂಘಟನೆಗೆ ಹೊಸ ರಿಕ್ರೂಟ್ ಮೆಂಟ್ ಗಳು ನಡೆದಿದೆ ಎನ್ನಲಾಗಿದ್ದು. ಸಂಘಟನೆಗೆ ಸೇರಿದ ಯುವಕ ಯುವತಿಯರ ಫೋಟೊಗಳು ಕೂಡ ಪೊಲೀಸರಿಗೆ ಸಿಕ್ಕಿಲ್ಲ. ಸಿಪಿಎಂ ಮತ್ತು ಎಲ್ ಎಲ್ ಟಿ ಇ ಸಿದ್ದಾಂತಗಳ ಸಿಂಪಥೈಸರ್ ಗಳೇ ನಕ್ಸಲ್ ಸಂಘಟನೆಯತ್ತ ಆಕರ್ಷಿತರಾಗುತ್ತಿದ್ದಾರೆ. ಅದರಲ್ಲೂ ಬಡ ಪ್ರತಿಭಾವಂತ ಯುವಕ ಯುವತಿಯರು ಸಂಘಟನೆಯತ್ತ ಒಲವು ತೋರುತ್ತಿದ್ದಾರೆ. ಎಲ್ ಟಿ ಟಿ ಇ ಸಂಘಟನೆ ತೊರೆದವರು ಮಾಲೋ ಬೆಂಬಲಿಸುತ್ತಿದ್ದಾರೆ ಎನ್ನಲಾಗಿದೆ.ನಕ್ಸಲರಿಗೆ ಕಾಡಿಗೆ ಊಟ  ಬಟ್ಟೆ ಪೂರೈಸುವ ಜನರಿದ್ದಾರೆ.

ಚಾಮರಾಜ ನಗರ ಜಿಲ್ಲೆಯ ಮಲೆಮಹಾದೇಶ್ವರ ಬೆಟ್ಟ ಸತ್ಯ ಮಂಗಲ ಕಾಡಿನ ಪರಿಸರ ಮುಂದಿನ ದಿನಗಳಲ್ಲಿ ನಕ್ಸಲರ ಆಶ್ರಯ ತಾಣಗಳಾದರೂ ಅಚ್ಚರಿ ಪಡಬೇಕಿಲ್ಲ. ಈ ಪ್ರದೇಶದ ಗುಂಡ್ಲುಪೇಟೆ ಬೀಸನಹಳ್ಳಿ ಕುಟ್ಚ ನಲ್ಲಿ ಮೂರು ಎ.ಎನ್ ಎಫ್ ಕ್ಯಾಂಪ್ ಗಳನ್ನು ಮಾಡಲಾಗಿದೆ. 15 ರಿಂದ 20 ಕಿಲೋಮೀಟರ್ ಅಂತರದಲ್ಲಿಯೇ ಕ್ಯಾಂಪ್ ಗಳನ್ನು ಮಾಡಲಾಗಿದೆ. ಮಡಿಕೇರಿಯಲ್ಲಿ ಮೂರು ಕ್ಯಾಂಪ್ ಗಳನ್ನು ಮಾಡಲಾಗಿದೆ. ಒಂದೊಂದು ಕ್ಯಾಂಪ್ ನಲ್ಲಿ 50 ರಿಂದ 60 ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಾರೆ. ಮಲೆನಾಡು ಭಾಗಗಳಲ್ಲಿ ಎನ್.ಎನ್ ಎಫ್ ಕ್ಯಾಂಪ್ ಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವಿ ಸಿಬ್ಬಂದಿಗಳನ್ನೆ ಕೊಡಗು ಚಾಮರಾಜ ನಗರ ಜಿಲ್ಲೆಗಳ ಕ್ಯಾಂಪ್ ಗಳಿಗೆ ಶಿಫ್ಟ್ ಮಾಡಲಾಗಿದೆ. ಚಿಕ್ಕಮಗಳೂರು ಉಡುಪಿ ಮಂಗಳೂರು ಶಿವಮೊಗ್ಗದಲ್ಲಿ ತಲಾ ಒಂದು ಎಎನ್ಎಪ್ ಕ್ಯಾಂಪ್ ಗೆ ಇಳಿಸಲಾಗಿದ್ದು ಸಿಬ್ಬಂದಿಗಳ ಸಂಖ್ಯೆ ಕೂಡ ಕಡಿಮೆ ಮಾಡಲಾಗಿದೆ.

ಚಾಮರಾಜ ನಗರದ ಹುಣಸೂರಿನಲ್ಲಿ ಐದು ಎಕರೆ ಜಾಗ ಗುರುತಿಸಲಾಗಿದೆ. ಅಲ್ಲಿಗೆ ಎಎನ್ಎಫ್ ಎಸ್ಪಿ ಕಛೇರಿಯಾಗಲಿದೆ ಎಂಬ ಸುದ್ದಿ ದಟ್ಟವಾಗಿದೆ. ಕಾರ್ಕಳದಲ್ಲಿರುವ ಎಎನ್ಎಫ್ ಮುಖ್ಯ  ಕಛೇರಿ ಹುಣಸೂರಿನಲ್ಲಿ  ಮುಖ್ಯ ಕಛೇರಿಯಾದರೂ ಅಚ್ಚರಿಯಿಲ್ಲ.