ನಡ್ಕೊಂಡು ಹೋದ್ರೆ ಓಕೆ, ಬೈಕ್​ಗಳಿಗೂ ಇಲ್ಲ ಬೆದರಿಕೆ, ಕಾರಲ್ಲಿ ಹೋದ್ರೆ ಮಾತ್ರ ಜೋಕೆ! ಏನಿದು ಮುಸಿಯಾದ ರೌಡಿಸಂ!

KARNATAKA NEWS/ ONLINE / Malenadu today/ Nov 10, 2023 SHIVAMOGGA NEWS

Shivamogga |  ಶಿವಮೊಗ್ಗದಲ್ಲಿ ವನ್ಯಜೀವಿಗಳ ಹಾವಳಿ ತಪ್ಪಿದ್ದಲ್ಲ. ಕೆಲವೊಮ್ಮೆ ಇವುಗಳ ಕಾಟ ವಿಪರೀತ ಎನಿಸಿಬಿಡುತ್ತದೆ. ಸದ್ಯ ತಾಲ್ಲೂಕಿನ ವಿಠಲಗೊಂಡನಕೊಪ್ಪ ಗ್ರಾಮದಲ್ಲಿ  ಮುಸಿಯಾದ ಕಾಟ ಅತಿಯಾಗಿ ಬಿಟ್ಟ ಇದೆ. ಕಳೆದ ಆರು ತಿಂಗಳಿನಿಂದ ಇಲ್ಲಿ ಕಾಣಿಸಿಕೊಳ್ತಿರುವ ಮುಸಿಯಾ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿದೆಯಂತೆ. 

ಹಳ್ಳಿಯ ದಾರಿಗಳಲ್ಲಿ ವಾಹನಗಳು ಓಡಾಡುತ್ತಿದ್ದರೇ ಅದರ ಮೇಲೆ ದಾಳಿ ಮಾಡುತ್ತಿರುವ ಮುಸಿಯಾ ವಾಹನಗಳಲ್ಲಿ ಹೋಗುತ್ತಿರುವವರನ್ನು ಗಾಯಗೊಳಿಸ್ತಿದೆ. ರಸ್ತೆಗಳಲ್ಲಿ ಕಾರು ಹೋದರೆ, ಅದರೊಳಗೆ ಕುಳಿತಿರುವವರನ್ನ ಗಾಯಗೊಳಿಸ್ತಿದೆ. ವಿಶೇಷ ಅಂದರೆ, ಈ ಮುಸಿಯಾ ಬೈಕ್​ನಲ್ಲಿ ಹೋಗುವವರಿಗೆ ಏನೂ ಮಾಡುತ್ತಿಲ್ಲವಂತೆ. ಅಲ್ಲದೆ ನಡೆದುಕೊಂಡು ಹೋಗುತ್ತಿರುವವರಿಗೂ ತೊಂದರೆ ಕೊಡುವುದಿಲ್ಲವಂತೆ . 

READ : ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧ ಇಲಾಖೆಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ! ಯಾರಿಗೆಲ್ಲಾ ಇದೆ ಅವಕಾಶ! ಇಲ್ಲಿದೆ ವಿವರ!

ಆದರೆ ನಾಲ್ಕು ಚಕ್ರದ ವಾಹನಗಳನ್ನ ಕಂಡರೆ ಸಾಕು ದಾಳಿಗೆ ಮುಂದಾಗುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮೇಲಾಗಿ ಈ ಗುರುವಾರ ಮುಸಿಯಾ ನಡೆಸಿದ ದಾಳಿಯಿಂದಾಗಿ ಕಾರಿನಲ್ಲಿ ಹೋಗುತ್ತಿದ್ದ ಒಬ್ಬರಿಗೆ ಗಾಯವಾಗಿದೆ. 

ರಾಮನಗರ ಗ್ರಾಮ ಪಂಚಾಯ್ತಿಗೆ ಸೇರಿದ ಗ್ರಾಮದಲ್ಲಿ ಕಳೆದ ಆರು ತಿಂಗಳಿನಿಂದ ಮುಸಿಯಾವೊಂದು ಈ ರೀತಿ ಕಾಡುತ್ತಿದೆಯಂತೆ. ಇನ್ನೂ ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದರೂ ಏನೂ ಸುಖವಿಲ್ಲ ಎಂದು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸುತ್ತಾ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ


Leave a Comment