ಊರಿನೊಳಗೆ ಮಣ್ಣಿನ ಲಾರಿಗಳ ಅಬ್ಬರ | ಸಿಟ್ಟಾದ ಸಿದ್ಲಿಪುರ ಜನರಿಗೆ ಪೊಲೀಸರ ಭಯ | ಜಿಲ್ಲಾಡಳಿತದ ಬಳಿ ಅಳಲು ಹೇಳಿಕೊಂಡ ಗ್ರಾಮಸ್ಥರು

People have complained that mud trucks are causing problems in Sidlipur villageಸಿದ್ಲಿಪುರ ಗ್ರಾಮದಲ್ಲಿ ಮಣ್ಣಿನ ಲಾರಿಗಳಿಂದ ಸಮಸ್ಯೆಯಾಗುತ್ತಿದೆ ಎಂದು ಜನರು ದೂರು ಹೇಳಿಕೊಂಡಿದ್ದಾರೆ

ಊರಿನೊಳಗೆ ಮಣ್ಣಿನ ಲಾರಿಗಳ ಅಬ್ಬರ | ಸಿಟ್ಟಾದ ಸಿದ್ಲಿಪುರ ಜನರಿಗೆ ಪೊಲೀಸರ ಭಯ | ಜಿಲ್ಲಾಡಳಿತದ ಬಳಿ ಅಳಲು ಹೇಳಿಕೊಂಡ ಗ್ರಾಮಸ್ಥರು



KARNATAKA NEWS/ ONLINE / Malenadu today/ Oct 14, 2023 SHIVAMOGGA NEWS

ದಿನನಿತ್ಯ ಓಡಾಡುವ ಮಣ್ಣಿನ ಲಾರಿಗಳಿಂದ ತೊಂದರೆ ಆಗುತ್ತಿದೆ ಎಂದು ಸಿದ್ಲಿಪುರ ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಆಗುತ್ತಿರುವ ಸಮಸ್ಯೆಗಳನ್ನು ತಪ್ಪಿಸಿ ತಮ್ಮ ಊರಿನ ಜನರು ಅನಾರೋಗ್ಯದಿಂದ ಬಳಲುತ್ತಿರುವುದನ್ನ ತಪ್ಪಿಸಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. 

ಸಿದ್ಲಿಪುರದ ಗ್ರಾಮದ ಮುಖ್ಯರಸ್ತೆ ಮುಖಾಂತರ ಮಣ್ಣಿನ ಲಾರಿಗಳು ನಿತ್ಯ ಓಡಾಡುತ್ತಿದೆ.ಕಿರಿದಾದ ರಸ್ತೆಯಲ್ಲಿ ಅಂಗನವಾಡಿ ಕೇಂದ್ರ ಬಸ್ಸು, ತಂಗುದಾಣಗಳಿವೆ. ಮೇಲಾಗಿ ನಿತ್ಯ ಊರಿನ ಮಂದಿ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಸುಮಾರು  50 ಮನೆಗಳು ಇದೇ ದಾರಿಯಲ್ಲಿದೆ.  

ಬೆಳ್ಳಿಗ್ಗೆ 7 ರಿಂದ ಸಂಜೆ 8 ಗಂಟೆಯವರೆಗೆ  ಅಕ್ಟೋಬರ್ ತಿಂಗಳಿಂದ ಮೇ ತಿಂಗಳುಗಳ ವರೆಗೆ ಮಣ್ಣು ತುಂಬಿರುವ ಲಾರಿಗಳು ಇಲ್ಲಿ ಓಡಾಡುತ್ತವೆ. ಇದರಿಂದ ನಿತ್ಯ ಗ್ರಾಮದ ಮಕ್ಕಳ ವಿದ್ಯಾಭ್ಯಾಸ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 

ಇನ್ನೂ ಲಾರಿಗಳ ಓಡಾಟದಿಂದಾಗಿ ಗ್ರಾಮದಲ್ಲಿ ಅಸ್ತಮ ರೋಗಗಳು ಹೆಚ್ಚಾಗಿದ್ದು, ಈಗ ಆಸ್ಪತ್ರೆ ಸೇರುತ್ತಿದ್ದಾರೆ. ಇದನ್ನ ಪ್ರಶ್ನಿಸಿದರೆ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ ಎಂದು ಹೇಳಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್​ನೊಂದಿಗೆ ಲಾರಿಗಳನ್ನು ಓಡಾಟ ನಡೆಸಲಾಗ್ತಿದೆ. ಗ್ರಾಮಸ್ಥರಿಗೆ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದು,  ದಯಾಮಾಡಿ ಸ್ಥಳ ಪರೀಶಿಲನೆ ಮಾಡಿ ಸೂಕ್ತವಾದ ಪರಿಹಾರ ಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. 




ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?