ಇವರ ಸುಳಿವು ಸಿಕ್ಕರೇ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ!

Inform the police immediately if you get a clue about them!

ಹಂಚಿಕೊಳ್ಳಿ
WhatsApp Facebook X Telegram
ಸುದ್ದಿ ಸಾರಾಂಶ

Inform the police immediately if you get a clue about them!

KARNATAKA NEWS/ ONLINE / Malenadu today/ May 24, 2023 SHIVAMOGGA NEWS

ಹಾವೇರಿ ಜಿಲ್ಲೆ, ಹಾನಗಲ್ ತಾಲೂಕು, ಹನುಮಪುರ ವಾಸಿ ಶ್ರೀಕಾಂತ್ ಎಂಬುವವರ ಪತ್ನಿ 20 ವರ್ಷದ ತೇಜಸ್ವಿನಿ ಅಲಿಯಾಸ್ ರೂಪ ಎಂಬ ಮಹಿಳೆ ಏ.24 ರಂದು ಶಿವಮೊಗ್ಗದ ಬಸ್ ನಿಲ್ದಾಣದ ಎದುರು ಅಶೋಕ ಲಾಡ್ಜ್‍ನಿಂದ ಕಾಣೆಯಾಗಿದ್ದಾರೆ. 

ಈ ಹಿನ್ನೆಲೆಯಲ್ಲಿ ಅವರ ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.  ಈಕೆಯ ಚಹರೆ 5.3 ಅಡಿ ಎತ್ತರ, ಬಿಳಿ ಮೈಬಣ್ಣ, ಕೋಲುಮುಖ, ಸಾಧಾರಣ ಮೈಕಟ್ಟು, ಕಪ್ಪು ಕೂದಲು ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ.  ಹಳದಿ ಬಣ್ಣದ ಚೂಡಿದಾರ್ ಧರಿಸಿರುತ್ತಾಳೆ.

ಇನ್ನೊಂದು ಪ್ರಕರಣದಲ್ಲಿ ದಾವಣಗೆರೆ ಜಿಲ್ಲೆ ವಿನೋಬನಗರ 8ನೇ ಮುಖ್ಯ ರಸ್ತೆ, ದೇವರಾಜ ಅರಸ್ ಲೇಔಟ್ ವಾಸಿ ಜೆ. ಕಾರ್ತಿಕ್ ಶ್ರೀನಿವಾಸ್ ಎಂಬುವವರ ತಂದೆ 65 ವರ್ಷದ ಟಿ.ಜಯಣ್ಣ ಬಿನ್ ತಿಪ್ಪೇಸ್ವಾಮಿ ಎಂಬುವವರು ಮೇ-21 ರಂದು ಶಿವಮೊಗ್ಗ ಸರ್ಕಾರಿ ಬಸ್ ನಿಲ್ದಾಣದಿಂದ ಕಾಣೆಯಾಗಿದ್ದಾರೆ. 

ಈ ವ್ಯಕ್ತಿಯು 5 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ತುಟಿಯ ಹತ್ತಿರ ಕಪ್ಪು ಮಚ್ಚೆ ಇರುತ್ತದೆ.  ಕನ್ನಡ ಮತ್ತು ತೆಲುಗು ಭಾಷೆ  ಮಾತನಾಡುತ್ತಾರೆ.  ಬಿಳಿ ಚೆಕ್ಸ್ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

ಈ ವ್ಯಕ್ತಿಗಳ ಮಾಹಿತಿ ಸಿಕ್ಕಿದಲ್ಲಿ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414 / 9611761255 ಗಳನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.  

ಇನ್ನೂ  ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕಾಮತ್ ಲೇಔಟ್ 1ನೇ ಕ್ರಾಸ್, ಇಟ್ಟಿಗೆ ಕಾರ್ಖಾನೆ ಹತ್ತಿರ ವಾಸಿ ಹರ್ಷದ್ ಖಾನ್ ಬಿನ್ ಸರದಾರ್ ಪಾಷ ಎಂಬ 28 ವರ್ಷದ ವ್ಯಕ್ತಿ ಕಾಣೆಯಾಗಿದ್ದಾನೆ. 

ಈತನ ಚಹರೆ 5.6 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಗುಂಡುಮುಖ, ತೆಳುವಾದ ಮೈಕಟ್ಟು, ಕಪ್ಪು ಕೂದಲು ಹೊಂದಿದ್ದು, ಎಡಗಣ್ಣು ಸಣ್ಣ ಹಾಗೂ ಎಡ ಕಾಲು ಕುಂಟುತ್ತಾರೆ. ಉರ್ದು ಮತ್ತು ಕನ್ನಡ ಭಾಷೆ ಮಾತನಾಡುತ್ತಾರೆ. ಈತ ಕಪ್ಪು ಕಲತ್ ಶರ್ಟ್ ಮತ್ತು ನೀಲಿ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. 

ಈ ವ್ಯಕ್ತಿಯ ಮಾಹಿತಿ ಸಿಕ್ಕಿದಲ್ಲಿ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414 / 9611761255 ಗಳನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.  

ಗಜಪ್ರಸವ ಹೇಗಿರುತ್ತೆ ಗೊತ್ತ! ತನ್ನ ಹೆರಿಗೆ, ಬಾಣಂತನಕ್ಕಾಗಿ ಹೆಣ್ಣಾನೆಯೊಂದು ಹಿರಿಯಾನೆಯ ಸಹವಾಸ ಮಾಡುತ್ತೆ ಅನ್ನೋದು ಗೊತ್ತಾ!? ವನ್ಯಜೀವಿ ವಿಶೇಷತೆ! By JP

 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor