ಮರೆಯಾದ ಮಳೆ | ಭತ್ತಕ್ಕೆ ಬರ | ಬೇಸಿಗೆಯಾಗಲಿದೆ ಬಲು ಬೀಕರ | ಅಂಕಿ ಅಂಶಗಳಲ್ಲಿ ಶಿವಮೊಗ್ಗದ ಪರಿಸ್ಥಿತಿ ಹೇಗಿದೆ ನೋಡಿ

Report on the condition of crops in Shimoga due to rainಮಳೆಯಾದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಬೆಳೆಗಳ ಪರಿಸ್ಥಿತಿಯ ಬಗ್ಗೆ ವರದಿ

ಮರೆಯಾದ ಮಳೆ |  ಭತ್ತಕ್ಕೆ ಬರ | ಬೇಸಿಗೆಯಾಗಲಿದೆ ಬಲು ಬೀಕರ |  ಅಂಕಿ ಅಂಶಗಳಲ್ಲಿ ಶಿವಮೊಗ್ಗದ ಪರಿಸ್ಥಿತಿ ಹೇಗಿದೆ ನೋಡಿ



KARNATAKA NEWS/ ONLINE / Malenadu today/ Oct 14, 2023 SHIVAMOGGA NEWS

ಶಿವಮೊಗ್ಗದಲ್ಲಿಯೇ ಈ ಸಲ ಮಳೆ ಕೈಕೊಟ್ಟಿದೆ. ಬರ ಎದುರಾಗುತ್ತಿದೆ. ಒಂದು ಅಂಕಿಅಂಶದ ಪ್ರಕಾರ,  79770 ಹೆಕ್ಟೇರ್ ಬೆಳೆ ಬರಕ್ಕೆ ತುತ್ತಾಗಿದ್ದು ಪ್ರಮುಖ ಜಲಾಶಯಗಳು ಪೂರ್ಣ ಭರ್ತಿಯಾಗಿಲ್ಲ. ಹಿಂಗಾರು ಕೈಕೊಟ್ಟರೆ ಬೇಸಿಗೆ ಭಾರೀ ಭೀಕರವಾಗಿರಲಿದೆ.

ಮಲೆನಾಡು ತಾಲ್ಲೂಕುಗಳಲ್ಲಿ ಈ ಬಾರಿ ವಾಡಿಕೆಯಷ್ಟು ಮಳೆಯಾಗಿಲ್ಲ. ಕೆರೆಕಟ್ಟೆಗಳು, ಜಲಾಶಯಗಳು ಸಹ ಈ ಬಾರಿ ಭರ್ತಿಯಾಗಿಲ್ಲ. ಆಗಸ್ಟ್ ತಿಂಗಳಲ್ಲಿ ಅಬ್ಬರಿಸಬೇಕಾದ ಮಳೆಗಳು ಸಂಪೂರ್ಣ ಕೈಕೊಟ್ಟವು, ಸೆಪ್ಟೆಂಬರ್‌ನಲ್ಲೂ ನಿರೀಕ್ಷಿತ ಮಳೆಯಾಗಿಲ್ಲ. ಕಳೆದ ಬಾರಿ ತುಂಬಿ ತುಳುಕುತ್ತಿದ್ದ ಜಲಾಶಯಗಳು ಈ ಬಾರಿ ಬಿಕೋ ಎನ್ನುತ್ತಿವೆ. ಅಂಬ್ಲಿಗೋಳ, ಅಂಜನಾಪುರ ಕಿರು ಜಲಾಶಯಗಳು ಕೋಡಿ ಬಿದ್ದಿದ್ದು ಬಿಟ್ಟರೆ ಭದ್ರಾ, ಲಿಂಗನಮಕ್ಕಿ, ಸಾವೇಹಕ್ಲು ಜಲಾಶಯಗಳು ಭರ್ತಿಯಾಗಿಲ್ಲ. ಭದ್ರಾ ಜಲಾಶಯ ಭರ್ತಿಯಾಗದ ಕಾರಣ ಮಧ್ಯ ಕರ್ನಾಟಕ ಹಲವು ಜಿಲ್ಲೆಗಳ ರೈತರಿಗೆ ತೊಂದರೆಯಾಗಿದ್ದು ಬೇಸಿಗೆ ಕುಡಿವ ನೀರು ಸಿಗುವುದು ಕಷ್ಟವಿದೆ. ಲಿಂಗನಮಕ್ಕಿ ಜಲಾಶಯ ಅರ್ಧ ಸಹ ತುಂಬಿಲ್ಲ. ಈಗಾಗಲೇ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಒತ್ತಡ ಬಿದ್ದಿದ್ದು ಬೇಸಿಗೆ ಮೊದಲೇ ಜಲಾಶಯ ಡೆಡ್ ಸ್ಟೋರೇಜ್ ತಲುಪುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ಮಳೆ ಹಾಗೂ ನೀರಾವರಿ ಆಶ್ರಯದಲ್ಲಿ ಮೆಕ್ಕೆಜೋಳ, ಭತ್ತ ಬೆಳೆಯಲಾಗುತ್ತಿದೆ. ಈ ಬಾರಿ ಮಳೆ ನಂಬಿ ಬಿತ್ತನೆ ಮಾಡಿದವರು ಸಂಪೂರ್ಣ ನಷ್ಟ ಒಳಗಾಗಿದ್ದಾರೆ. ಮಳೆಯಾಶ್ರಿತ ಶೇ.50ಕ್ಕೂ ಅಕ ಮೆಕ್ಕೆಜೋಳ ಬೆಳೆ ರೈತರ ಕೈಗೆ ಸಿಕ್ಕಿಲ್ಲ. ಅರೆ ಮಲೆನಾಡು ತಾಲ್ಲೂಕುಗಳಿಗೆ ಕೆರೆ, ಕಿರು ಜಲಾಶಯಗಳ ನಂಬಿ ಬಿತ್ತನೆ ಮಾಡಿದ ಭತ್ತದ ಬೆಳೆ ಸಹ ಕೈಕೊಟ್ಟಿದೆ.

79770 ಹೆಕ್ಟೇರ್ ಬೆಳೆ ನಷ್ಟ

ಜಿಲ್ಲೆಯಲ್ಲಿ ಮುಂಗಾರು ಅವಯಲ್ಲಿ 79131 ಹೆಕ್ಟೇರ್‌ನಲ್ಲಿ ಭತ್ತ. 46877 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿತ್ತು. ಅದರಲ್ಲಿ 38240 ಹೆಕ್ಟೇರ್ ಮೆಕ್ಕೆಜೋಳ, 41529 ಹೆಕ್ಟೇರ್‌ನಲ್ಲಿನ ಭತ್ತದ ಬೆಳೆ ನಷ್ಟವಾಗಿದೆ. ತೋಟಗಾರಿಕೆ ಬೆಳೆಗೆ ಸದ್ಯಕ್ಕೆ ಯಾವುದೇ ಹಾನಿಯಾಗಿಲ್ಲ. ದಿನೇ ದಿನೇ ಬಿಸಿಲ ಬೇಗೆ ಹೆಚ್ಚಾಗುತ್ತಿದ್ದು ಮುಂದಿನ ದಿನಗಳಲ್ಲಿ ನೀರಿನ ಅಗತ್ಯವಿದೆ. 

ಭತ್ತದ ಬೆಳೆಯ ವಿಚಾರದಲ್ಲಿ  ತೀರ್ಥಹಳ್ಳಿಯಲ್ಲಿ 7200 ಹೆಕ್ಟೇರ್, ಸಾಗರ 10511 ಹೆಕ್ಟೇರ್, ಶಿಕಾರಿಪುರ 3980 ಹೆಕ್ಟೇರ್, ಸೊರಬ 12738 ಹೆಕ್ಟೇರ್, ಹೊಸನಗರ 7020 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಭತ್ತ ನೀರಿಲ್ಲದೆ ಅಸುನೀಗಿವೆ.

ಮೆಕ್ಕೆಜೋಳ: ಶಿವಮೊಗ್ಗ ತಾಲ್ಲೂಕಿನ 11420 ಹೆಕ್ಟೇರ್, ಭದ್ರಾವತಿ 586 ಹೆಕ್ಟೇರ್, ಸಾಗರ 1723 ಹೆಕ್ಟೇರ್, ಶಿಕಾರಿಪುರ 16210 ಹೆಕ್ಟೇರ್, ಸೊರಬ 7912 ಹೆಕ್ಟೇರ್, ಹೊಸನಗರ 388 ಹೆಕ್ಟೇರ್ ಮೆಕ್ಕೆಜೋಳ ಬೆಳೆ ಮಳೆ, ನೀರಿಲ್ಲದೆ ನಷ್ಟಕ್ಕೆ ಒಳಗಾಗಿದೆ.

ಮಳೆ ಕೊರತೆ

ಜಿಲ್ಲೆಯಲ್ಲಿ ಮುಂಗಾರು ಅವದಿಯಲ್ಲಿ ಶೇ.37ರಷ್ಟು ಮಳೆ ಕೊರತೆಯಾಗಿದೆ. ಭದ್ರಾವತಿಯಲ್ಲಿ 578 ಮಿಮೀ  ವಾಡಿಕೆಗೆ 406 ಮಿಮೀ, ಹೊಸನಗರ 2676 ಮಿಮೀ ವಾಡಿಕೆಗೆ 1842 ಮಿಮೀ, ಸಾಗರ 2164 ಮಿಮೀ ವಾಡಿಕೆಗೆ 1975 ಮಿಮೀ, ಶಿಕಾರಿಪುರ 677 ಮಿಮೀ ವಾಡಿಕೆಗೆ 474 ಮಿಮೀ, ಶಿವಮೊಗ್ಗ 542 ಮಿಮೀ ವಾಡಿಕೆಗೆ 442 ಮಿಮೀ, ಸೊರಬ 1252 ಮಿಮೀ ವಾಡಿಕೆಗೆ 758 ಮಿಮೀ, ತೀರ್ಥಹಳ್ಳಿ 2546 ಮಿಮೀ ವಾಡಿಕೆಗೆ 1664 ಮಿಮೀ ಮಳೆಯಾಗಿದೆ. 

ಜಿಲ್ಲೆಯಲ್ಲಿ ವಾಡಿಕೆ ಪ್ರಮಾಣದ ಮಳೆ ಬಾರದಿರುವ ಹಿನ್ನೆಲೆಯಲ್ಲಿ ಸುಮಾರು 80ಕೋಟಿ ರೂ.ಗಳ ಬೆಳೆ ನಷ್ಟ ಆಗಿರುವ ಬಗ್ಗೆ ಅಂದಾಜು ಮಾಡಲಾಗಿದೆ. ಶೇ.57ರಷ್ಟು ಭತ್ತ, ಶೇ.85ರಷ್ಟು ಮೆಕ್ಕೆಜೋಳದ ಬೆಳೆ ನಷ್ಟವಾಗಿದ್ದು, ಒಟ್ಟು ಶೇ.68ರಷ್ಟು ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ 

ಪೂರ್ಣಿಮಾರವರು ಹೇಳುತ್ತಾರೆ.


ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?