ಕುಮಾರ್ ಬಂಗಾರಪ್ಪ ಬಿಜೆಪಿ ತೊರೆದು ಕಾಂಗ್ರೆಸ್​ ಸೇರುತ್ತಾರಾ? ಬೇಳೂರು ಗೋಪಾಲಕೃಷ್ಣ, ಸಂಸದ ರಾಘವೇಂದ್ರರವರು ಹೇಳಿದ್ದೇನು?

Will Kumar Bangarappa leave THE BJP and join the Congress? What did Belur Gopalakrishna and MP Raghavendra say?

ಕುಮಾರ್ ಬಂಗಾರಪ್ಪ ಬಿಜೆಪಿ ತೊರೆದು ಕಾಂಗ್ರೆಸ್​ ಸೇರುತ್ತಾರಾ? ಬೇಳೂರು ಗೋಪಾಲಕೃಷ್ಣ, ಸಂಸದ ರಾಘವೇಂದ್ರರವರು ಹೇಳಿದ್ದೇನು?

KARNATAKA NEWS/ ONLINE / Malenadu today/ Jun 29, 2023 SHIVAMOGGA NEW

ಸದ್ಯ ಶಿವಮೊಗ್ಗ ಜಿಲ್ಲೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವ ವಿಚಾರದಲ್ಲಿ ಸಾಕಷ್ಟು ಹೆಸರುಗಳು ಕೇಳಿಬರುತ್ತಿದೆ. ಈ ಪೈಕಿ ಸೊರಬ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕುಮಾರ್ ಬಂಗಾರಪ್ಪರವರ ಹೆಸರು ಕೂಡ ಕೇಳಿಬರುತ್ತಿದೆ..ಇದರ ಬೆನ್ನಲ್ಲೆ ರಾಜಕೀಯಮುಖಂಡರ ಅಭಿಪ್ರಾಯಗಳು ಭಿನ್ನವಾಗಿ ಕೇಳಿಬರುತ್ತಿದೆ. 

 

ಮೂಲಗಳ ಪ್ರಕಾರ ಕಾಂಗ್ರೆಸ್​ ಪಕ್ಷದ ಮುಖಂಡರು, ಬಿಜೆಪಿಯ ಹಾಲಿ ಸಂಸದ ಬಿ.ವೈ.ರಾಘವೇಂದ್ರ ರವರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ವಿಚಾರವನ್ನ ಸಾಕಷ್ಟು ಅಳೆದು ತೂಗಿ ನೋಡುತ್ತಿದೆ. ಅದರಲ್ಲಿಯು ಮುಖ್ಯವಾಗಿ ಕೆಪಿಸಿಸಿಯ ಕಣ್ಣು  ಕುಮಾರ್ ಬಂಗಾರಪ್ಪರವರ ಮೇಲಿದೆ ಎನ್ನಲಾಗುತ್ತಿದೆ. ಆದರೆ ಇದಕ್ಕೆ ವಿರೋಧವೂ ವ್ಯಕ್ತವಾಗುತ್ತಿದೆ. 

 

ಮೊನ್ನೆಯಷ್ಟೆ ಶಿವಮೊಗ್ಗಕ್ಕೆ ಬಂದಿದ್ದ ಉಸ್ತುವಾರಿ ಮಧು ಬಂಗಾರಪ್ಪರವರು, ಈ ಬಗ್ಗೆ ಕೇಳಿಬಂದ ಪ್ರಶ್ನೆಗೆ ಉತ್ತರಿಸುತ್ತಾ, ಆ ಬಗ್ಗೆ ನಾನು ಮಾತನಾಡೋದಿಲ್ಲ ಎಂದಿದ್ದರು.

 

ಇದರ ಬೆನ್ನಲ್ಲೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರವರು ಸಹ ಮಾತನಾಡಿದ್ದು,ಕುಮಾರ್​ ಬಂಗಾರಪ್ಪನವರನ್ನ ಕಾಂಗ್ರೆಸ್​ಗೆ ಸೇರಿಸಿಕೊಳ್ಳಳಾಗುತ್ತಿದೆ ಎಂದು ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ. ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಮೇಯವೇ ಇಲ್ಲ ಎಂದಿದ್ದಾರೆ. 

 

ಮತ್ತೊಂದೆಡೆ ಇದೇ ವಿಚಾರವಾಗಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ರವರು ಕುಮಾರ್ ಬಂಗಾರಪ್ಪ ಕಾಂಗ್ರೆಸ್ ನಮ್ಮ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ ಆದರೆ ಫೊನ್ ನಲ್ಲಿ ಸಂಪರ್ಕವಿದ್ದರು.ಆದರೆ ಅವರು ಕಾಂಗ್ರೆಸ್ ಸೇರುವ ಬಗ್ಗೆ ಯಾವ ಪ್ರಸ್ತಾಪ ನಮ್ಮ ಮುಂದಿಲ್ಲವೆಂದಿದ್ದಾರೆ. 

 


ಮಳೆ ಬೆನ್ನಲ್ಲೆ ಹೊತ್ತಿಉರಿದ ಸ್ಮಾರ್ಟ್​ ಸಿಟಿ ಕರೆಂಟ್ ಬಾಕ್ಸ್! ಏಲ್ಲಿದು? ಹೇಗಿದು?

 

ಶಿವಮೊಗ್ಗ/ ನಗರದಲ್ಲಿ ಮಳೆಯಾಗುತ್ತಲೇ ಸ್ಮಾರ್ಟ್​ ಸಿಟಿ ವ್ಯವಸ್ಥೆಯು ಶಾಕ್​ ಕೊಡಲು ಆರಂಭಿಸಿವೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ನಗರದ ಗಾಂಧಿನಗರ ಬಡಾವಣೆಯಲ್ಲಿ ಸ್ಮಾರ್ಟ್​ ಸಿಟಿ ಬಾಕ್ಸ್​ನಲ್ಲಿ ವಿದ್ಯುತ್​ ಶಾರ್ಟ್​ ಸರ್ಕಿಟ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಅಷ್ಟೆಅಲ್ಲದೆ ಕೆಲಕಾಲ ಇಡೀ ಬಾಕ್ಸ್​​ ಪಟಾಕಿಯಂತೆ ಸಿಡಿದಿದೆ.. 

ಗಾಂಧಿನಗರದ 1ನೇ ಪ್ಯಾರಲಲ್​ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನೂ ಘಟನೆ ಬೆನ್ನಲ್ಲೆ ಸ್ಥಳೀಯರು ಆತಂಕಕ್ಕೀಡಾಗಿದ್ದು, ಸ್ಥಳೀಯರು ಮೆಸ್ಕಾಂಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ರಿಪೇರಿ ಕಾರ್ಯ ನಡೆಸ್ತಿದ್ದಾರೆ.  

ಭೂಗತ ಕೇಬಲ್​ಗಳ ಮೂಲಕ ಕಲ್ಪಿಸಿರುವ ವಿದ್ಯುತ್​ ಸಂಪರ್ಕದ ಕೇಬಲ್​ಗಳನ್ನು ನಿರ್ವಹಿಸಲು ಏರಿಯಾಗಳಲ್ಲಿ ಬಾಕ್ಸ್​ಗಳನ್ನು ಅಳವಡಿಸಲಾಗಿದೆ. ಈ ಬಾಕ್ಸ್​ ನಲ್ಲಿಯೇ ಬೆಂಕಿ ಕಾಣಿಸಿಕೊಂಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.  

 


 

ಹೊಸನಗರ / ಪೊಲೀಸ್​ ಸ್ಟೇಷನ್​ ವ್ಯಾಪ್ತಿಯಲ್ಲಿ ದನದ ಕೊಟ್ಟಿಗೆಯ ಹಂಚು ಕಿತ್ತುಹಾಕಿದ್ದನ್ನ ಪ್ರಶ್ನಿಸಿದ್ದಕ್ಕೆ ಈ ಮನೆಯಲ್ಲಿ ಎರಡು ಕೊಲೆಯಾಗುತ್ತದೆ ಎಂದು ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ. ಸ್ಟೇಷನ್​ ವ್ಯಾಪ್ತಿಯ ಸಿಗುವ ಗ್ರಾಮದ ನಿವಾಸಿಯೊಬ್ಬರಿಗೆ ಸೇರಿದ ದನದ ಕೊಟ್ಟಿಗೆಯ ಹಂಚನ್ನು ಚಂದ್ರ ಎಂಬವರು ಕಿತ್ತುಹಾಕಿದ್ದರು. ಈ ಹಿನ್ನೆಲೆಯಲ್ಲಿ ಅದನ್ನ ಸಂತ್ರಸ್ತರು ಪ್ರಶ್ನಿಸಿದ್ದಾರೆ. ಈ ವೇಳೇ ಅವರನ್ನು ನಿಂದಿಸಿದ್ದಷ್ಟೆ ಅಲ್ಲದೆ, ಈ ಮನೆಯಲ್ಲಿ ಎರಡು ಕೊಲೆಯಾಗಲಿದೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಸದ್ಯ ಪ್ರಕರಣ ಸಂಬಂಧ IPC 1860 (U/s-448,427,504,506,34) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.