ಹೆಲ್ಮೆಟ್​ ಹಾಕದಿದ್ದರೇ ಹುಷಾರ್! ಏರ್​ಪೋರ್ಟ್​ಗೆ ಕುವೆಂಪು ಹೆಸರು ಇಡೋದು ಯಾವಾಗ? ಬೈಕ್​ಗೆ ಅಪರಿಚಿತ ವಾಹನ ಡಿಕ್ಕಿ ! ವಿಷ ಸೇವಿಸಿದ ರೈತ TODAY @NEWS

Be careful if you don't wear a helmet! When will the airport be named after Kuvempu? An unidentified vehicle collides with a bike! Farmer who consumed poison today@NEWS ಹೆಲ್ಮೆಟ್​ ಹಾಕದಿದ್ದರೇ ಹುಷಾರ್! ಏರ್​ಪೋರ್ಟ್​ಗೆ ಕುವೆಂಪು ಹೆಸರು ಇಡೋದು ಯಾವಾಗ? ಬೈಕ್​ಗೆ ಅಪರಿಚಿತ ವಾಹನ ಡಿಕ್ಕಿ ! ವಿಷ ಸೇವಿಸಿದ ರೈತ TODAY @NEWS

ಹೆಲ್ಮೆಟ್​ ಹಾಕದಿದ್ದರೇ  ಹುಷಾರ್! ಏರ್​ಪೋರ್ಟ್​ಗೆ  ಕುವೆಂಪು ಹೆಸರು ಇಡೋದು ಯಾವಾಗ?  ಬೈಕ್​ಗೆ ಅಪರಿಚಿತ ವಾಹನ ಡಿಕ್ಕಿ ! ವಿಷ ಸೇವಿಸಿದ ರೈತ TODAY @NEWS

KARNATAKA NEWS/ ONLINE / Malenadu today/ Jul 22, 2023 SHIVAMOGGA NEWS 

ಕಡ್ಡಾಯವಾಗಿ ಹೆಲ್ಮೆಟ್​ ಧರಿಸಿ

ಶಿವಮೊಗ್ಗ ಪೊಲೀಸರು ರಸ್ತೆ ಸುರಕ್ಷತಾ ಅಭಿಯಾನವನ್ನು ಕೈಗೊಂಡಿದ್ದಾರೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ರವರು ಪೂರ್ವ ಮಹಾವೀರ ಸರ್ಕಲ್ ನಲ್ಲಿ  ಸಂಚಾರ ನಿಯಮಗಳ ಪಾಲನೆ, ಚಾಲನಾ ಪರವಾನಿಗೆ, ಐಎಸ್ಐ ಪ್ರಮಾಣಿತ ಹೆಲ್ಮೆಟ್ ಧರಿಸುವಂತೆ, ವಾಹನದ ಅಗತ್ಯ ದಾಖಲಾತಿಗಳನ್ನು ಹೊಂದಿರುವಂತೆ & ಕಡ್ಡಾಯವಾಗಿ ವಿಮೆಯನ್ನು ಮಾಡಿಸಲು ತಿಳಿಸಿ ಅರಿವು ಮೂಡಿಸಿದ್ದಾರೆ. 

ಬೈಕ್​ಗೆ ಅಪರಿಚಿತ ವಾಹನ ಡಿಕ್ಕಿ

ಶಿವಮೊಗ್ಗದ ಕುಂಸಿ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ ಬೈಕ್​ ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್​ ನುಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಬೈಕ್​ ಸವಾರ ಬಚಾವ್ ಆಗಿದ್ದಾರೆ. ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.  

ಲಾರಿ ಡಿಕ್ಕಿಯಾಗಿ ಅಪಘಾತ

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ  ನ್ಯೂಟೌನ್ ಠಾಣಾ ವ್ಯಾಪ್ತಿಯಲ್ಲಿ  ಎರಡು ವಾಹನಗಳ ನಡುವೆ ಅಪಘಾತವಾಗಿದೆ. ಘಟನೆಯಲ್ಲಿ ವಾಹನದಲ್ಲಿದ್ದವರು ಬಚಾವ್ ಆಗಿದ್ದಾರೆ. ಇನ್ನೂ ಸ್ಥಳಕ್ಕೆ ಬಂದ ಪೊಲೀಸರು ವಾಹನಗಳನ್ನ ತೆರವುಗೊಳಿಸಿ ಟ್ರಾಫಿಕ್​ ಕ್ಲಿಯರ್​ ಮಾಡಿದ್ದಾರೆ.  

ವಿಷ ಸೇವಿಸಿ ರೈತ ಆತ್ಮಹತ್ಯೆ

ಸೊರಬ ತಾಲ್ಲೂಕಿನಲ್ಲಿ ರೈತನೊಬ್ಬ ಸಾಲಬಾಧೆಯಿಂದ  ಕಂಗೆಟ್ಟು ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. 

ಇಂಡಿಹಳ್ಳಿ ಗ್ರಾಮದ ದಿನೇಶ್ (35) ಮೃತ ರೈತ. ಸಾಲಬಾಧೆಯಿಂದಾಗಿ ಮನೆಯ ಹಿಂಭಾಗದಲ್ಲಿ ವಿಷ ಸೇವಿಸಿದ್ದ. ಕೂಡಲೇ ಆತನನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈತ ಸುಮಾರು  15 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.  

ವಿಮಾನ ನಿಲ್ದಾಣಕ್ಕೆ ಕುವೆಂಪುರವರ ಹೆಸರಿಡಿ

ಶಿವಮೊಗ್ಗ  ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರಿಡಲು ಆಗ್ರಹಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆದಿದೆ. ನಮ್ಮ ಟ್ರಸ್ಟ್‌ನಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದ ನಮ್ಮ ಟ್ರಸ್ಟ್​  ಸದಸ್ಯರು ಕುವೆಂಪು ರವರ ಹೆಸರನ್ನ ಆದಷ್ಟು ಬೇಗ ನಾಮಕರಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇನ್ನೊಂದೆಡೆ ಆಗಸ್ಟ್ 11 ರಂದು ವಿಮಾನ ಸಂಚಾರ ಆರಂಭಕ್ಕೆ  ಸಿದ್ದತೆಗಳು ನಡೆಯುತ್ತಿದೆ. 

ನಡುರಸ್ತೆಯಲ್ಲಿ ಮಹಿಳೆಯ ಕೊಲೆ! ಸಾಬೀತಾಯ್ತು ಅಪರಾಧ! ಶಿಕಾರಿಪುರ ಗ್ರಾಮಾಂತರ ಠಾಣೆಯ ಕೇಸ್​ನಲ್ಲಿ ಕೋರ್ಟ್ ತೀರ್ಪು!

ಮಾಜಿ ಸಿಎಂ ಬಿಎಸ್​ವೈ ಇನ್ಮುಂದೆ ಡಾ.ಬಿಎಸ್​ ಯಡಿಯೂರಪ್ಪ! ಅಭಿಮಾನಿಗಳಿಗೂ ಅವಕಾಶ ನೀಡಿದ BYR

ಮಗ ಬೈಕ್​ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?

ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!

 ​