ರಾಗಿಗುಡ್ಡದಲ್ಲಿ ಅರೆಸ್ಟ್ ಆದವರ ಪೈಕಿ ಮೂರು ಸಮುದಾಯದವರಿದ್ದಾರೆ! ವೈರಲ್​ ವಿಡಿಯೋಗಳ ಬಗ್ಗೆ ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು?

Among those arrested in Ragigudda, there are three members of the community! What did SP Mithun Kumar say about viral videos?ರಾಗಿಗುಡ್ಡದಲ್ಲಿ ಅರೆಸ್ಟ್ ಆದವರ ಪೈಕಿ ಮೂರು ಸಮುದಾಯದವರಿದ್ದಾರೆ! ವೈರಲ್​ ವಿಡಿಯೋಗಳ ಬಗ್ಗೆ ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು?

ರಾಗಿಗುಡ್ಡದಲ್ಲಿ ಅರೆಸ್ಟ್ ಆದವರ ಪೈಕಿ ಮೂರು ಸಮುದಾಯದವರಿದ್ದಾರೆ! ವೈರಲ್​ ವಿಡಿಯೋಗಳ ಬಗ್ಗೆ ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು?

KARNATAKA NEWS/ ONLINE / Malenadu today/ Oct 3, 2023 SHIVAMOGGA NEWS

ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಾಟೆ ಸಂಬಂಧ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ರವರು ಸುದ್ದಿಗೋಷ್ಟಿ ನಡೆಸಿದ್ದಾರೆ. ನಡೆದ ಘಟನೆಗೆ ಸಂಬಂಧಿಸಿದಂತೆ ಏರಿಯಾಗಳಲ್ಲಿ ಹಾಕಲಾಗಿದ್ದ ಕ್ಯಾಮರಾಗಳ ಪೂಟೇಜ್​ಗಳನ್ನು ಜಪ್ತು ಮಾಡಲಾಗಿದೆ. 

ಈ ಘಟನೆ ಸಂಬಂಧ 24 ಎಫ್ಐಆರ್ ದಾಖಲಾಗಿದ್ದು, 60 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಮೂರು ಸಮುದಾಯದವರು ಗಾಯಾಳುಗಳಾಗಿದ್ದಾರೆ, ಅದೇ ರೀತಿಯಲ್ಲಿ ಆರೋಪಿಗಳ ಪೈಕಿ ಮೂರು ಸಮುದಾಯದವರಿದ್ದಾರೆ ಎಂದು ಎಸ್​ ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ. 

ಮೇಲಾಗಿ ಅಲ್ಲಿಯ ಘಟನೆಯ ಪರಿಣಾಮ ಶಿವಮೊಗ್ಗ ನಗರದ ಮೇಲೆ ಆಗಿಲ್ಲ. ಆದಾಗ್ಯು ಮುನ್ನೆಚ್ಚರಿಕೆ ಕ್ರಮವಾಗಿ 144 ಸೆಕ್ಷನನ್ನು ಕೆಲವೆಡೆ ವಿಸ್ತರಿಸಲಾಗಿದೆ ಎಂದಿದ್ದಾರೆ. ಜೊತೆಯಲ್ಲಿ ಅದೇ ದಿನ ಮಧ್ಯಾಹ್ನದಿಂದ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. 

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ರಾಗಿಗುಡ್ಡದಲ್ಲಿ ಒಬ್ಬ ವ್ಯಕ್ತಿಯ ಎನ್​ಕೌಂಟರ್ ಆಗುತ್ತಿದೆ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ. ಈ ಸಂಬಂಧ ಎಫ್​ಐಆರ್ ಕೂಡ ದಾಖಲಾಗಿದ್ದು, ಅದಕ್ಕೆ ಪೂರಕವಾಗಿ ತನಿಖಾ ತಂಡ, ಸುಳ್ಳು ಸುದ್ದಿ ಹರಡಿಸ್ತಿರುವ ವ್ಯಕ್ತಿಯ ಪತ್ತೆಮಾಡುತ್ತಿದೆ ಎಂದು ತಿಳಿಸಿದ ಎಸ್​ ಪಿ ಮಿಥುನ್ ಕುಮಾರ್​, ಸುಳ್ಳು ಸುದ್ದಿಯ ಮೆಸೇಜ್​ಗಳನ್ನು ಡಿಲೀಟ್ ಮಾಡಿಸಲಾಗಿದೆ ಎಂದು ತಿಳಿಸಿದ್ದಾರೆ. 

ಅಲ್ಲದೆ ಹರಿದಾಡ್ತಿರುವ ಫೋಟೋದಲ್ಲಿರುವ ವ್ಯಕ್ತಿಯ ವಿಡಿಯೋವನ್ನು ಮಾಡಿ, ಸೋಶೀಯಲ್ ಮೀಡಿಯಾದ ಅಧಿಕೃತ ಖಾತೆಗಳಲ್ಲಿ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇನ್ನೂ ಈ ರೀತಿಯ ಫೇಕ್​ ವಿಡಿಯೋಗಳನ್ನು ಹರಿಬಿಡುವ ಫಾರವರ್ಡ್ ಮಾಡುವ ಸುದ್ದಿ ಮಾಡುವವರ ವಿರುದ್ದ ಎಫ್ಐಆರ್ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. 

ಇನ್ನೂ ಪೊಲೀಸ್ ಇಲಾಖೆಯ ವೆರಿಪಿಕೇಷನ್​ ಮಾಡಿಕೊಳ್ಳದೇ ವಿಡಿಯೋಗಳನ್ನು ಪ್ರಸಾರ ಮಾಡಿದರೆ, ಅದರ ವಿರುದ್ಧ ಕೋಮು ಸೌಹಾರ್ಧತೆಗೆ ದಕ್ಕೆತಂದ ಆರೋಪದಡಿ ಕೇಸ್ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಸಾರ್ವಜನಿಕರು ವದಂತಿಗೆ ಕಿವಿಗೊಡಬೇಡಿ, ಶಿವಮೊಗ್ಗದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದ ಎಸ್​ಪಿ ಮಿಥುನ್ ಕುಮಾರ್​ ರವರು, ಗಾಯಾಳುಗಳ ಪೈಕಿ ಯಾರಿಗೂ ಪ್ರಾಣಾಪಾಯ ಉಂಟಾಗಿಲ್ಲ ಎಂದು ತಿಳಿಸಿದ್ದಾರೆ. 

ಈ ಸನ್ನಿವೇಶದಲ್ಲಿ ಸಲ್ಲದ ಮಾಹಿತಿ  ಬಗ್ಗೆ ಪೊಲೀಸರ ಗಮನಕ್ಕೆ ತರದೇ ಸುದ್ದಿ ಮಾಡದಂತೆ ಸುದ್ದಿ ಮಾಧ್ಯಮಗಳಲ್ಲಿ  ಮನವಿ ಮಾಡಿದ್ದಾರೆ. ಒಮಿನಿ ವಿಚಾರದ ಬಗ್ಗೆ ಮಾತನಾಡಿದ ಮಿಥುನ್ ಕುಮಾರ್​ ರವರು. ಆ ಒಮಿನಿಯಲ್ಲಿ ಎರಡು ಕಮ್ಯುನಿಟಿಯವರು ಸಹ ಇದ್ದಿದ್ದರು ಎಂದು ತಿಳಿಸಿದ್ದಾರೆ. 

ಪ್ರಕರಣದಲ್ಲಿ ಭಾಗಿಯಾದ ಕ್ರಿಮಿಗಳು ಕೇವಲ ಕ್ರಿಮಿನಲ್​ಗಳಷ್ಟೆ, ಕಾನೂನು ಉಲ್ಲಂಘಿಸಿದ್ದಾರೆ. ಅವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ. ಈ ವೇಳೆ ಅಲ್ಲಿ ಇಲ್ಲ ಹಾಗಾಯ್ತು ಹೀಗಾಯ್ತು ಎಂದು ಎಂಬ ವದಂತಿಗಳಿಗೆ ಕಿವಿಗೊಡಬೇಡಿ ಎಂದು ತಿಳಿಸಿದ್ದಾರೆ. 

ರಾಗಿಗುಡ್ಡದಲ್ಲಿ ನಡೆದ ಘಟನೆಯಲ್ಲಿ ಎಲ್ಲರು ಕಲ್ಲು ತೂರಾಟ ನಡೆಸಿದ್ಧಾರೆ ಎಂದು ಹೇಳಲಾಗುವುದಿಲ್ಲ. ಆದರೆ ಈ ವಿಷಯದಲ್ಲಿ ಕಾನೂನು ಕೈಗೊತ್ತಿಕೊಂಡವರ ವಿರುದ್ಧ ಫೋಟೋ ಹಾಗೂ ವಿಡಿಯೋ ಸಾಕ್ಷಿ ಸಮೇತ ಕೇಸ್​ ದಾಖಲಿಸಲಾಗಿದೆ. ಅಮಾಯಕರ ವಿರುದ್ಧ ಕೇಸ್ ದಾಖಲಿಸಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ. 

ರಾಗಿಗುಡ್ಡದಲ್ಲಿ ಪ್ಲೆಕ್ಸ್​ ವಿಚಾರದಲಲ್ಲಿ ನಡೆದ ಘಟನೆ ಬೇರೆ ಹಾಗೂ ಸಂಜೆ ಮೆರವಣಿಗೆ ವೇಳೆ ನಡೆದ ಘಟನೆ ಎರಡು ಕೂಡ ಬೇರೆ ಬೇರೆಯಾಗಿದೆ ಎಂದು ತಿಳಿಸಿದ್ದಾರೆ. 

ಘಟನೆಯಲ್ಲಿ ಕೆಲವು ಮನೆಗಳಿಗೆ ಹಾನಿಯಾಗಿದೆ. ಹಾನಿಗೊಳಗಾದ ಮನೆಗಳ ಪೈಕಿ ಕ್ರಿಶ್ಚಿಯನ್ ಹಿಂದೂ ಹಾಗೂ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಮನೆಗಳಿವೆ. ಹಾನಿಗೊಳಗಾದ ಮನೆ ಹಾಗೂ ವಾಹನಗಳ ಮಾಲೀಕರಿಗೆ ದೂರು ದಾಖಲಿಸುವಂತೆ ತಿಳಿಸಲಾಗಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಮುಖ್ಯ  ಆರೋಪಿಗಳನ್ನ ಬಂಧಿಸಲಾಗಿದ್ದು, ಕೆಲವರನ್ನು ಬಂಧಿಸುವುದು ಬಾಕಿಯದೆ ಎಂದಿದ್ಧಾರೆ. 


ಇನ್ನಷ್ಟು ಸುದ್ದಿಗಳು 

  1.  ರಾಗಿಗುಡ್ಡದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ತೆರಳಿದ್ದ ಎಸ್​ಪಿ ಮತ್ತು ಪೊಲೀಸರ ಮೇಲೆ ಕಲ್ಲು ! ಸ್ಥಳದಲ್ಲಿ 144 ಸೆಕ್ಷನ್​ ಜಾರಿ! ಲಾಠಿ ಪ್ರಹಾರ

  2. ನಮಗೆ ಬೆಲೆ ಇರುತ್ತಲ್ಲ ಎಂದು ಪ್ರಶ್ನಿಸಿದ ಬಾಲಕಿ! ಶಿಕ್ಷಕರ ಹಾಗೆ ವಿದ್ಯಾರ್ಥಿನಿಗೆ ಅರ್ಥ ಮಾಡಿಸಿದ ಸಚಿವ! ವೈರಲ್​ ಆಯ್ತು ವಿಡಿಯೋ!