ಕೆರೆಯಲ್ಲಿ ಈಜಲು ಹೋದ ಬಾಲಕರಿಬ್ಬರು ನೀರುಪಾಲು! ದುರಂತ ಘಟನೆ!

Two boys who went swimming in the lake drowned! A tragic event!ಕೆರೆಯಲ್ಲಿ ಈಜಲು ಹೋದ ಬಾಲಕರಿಬ್ಬರು ನೀರುಪಾಲು! ದುರಂತ ಘಟನೆ!

ಕೆರೆಯಲ್ಲಿ ಈಜಲು ಹೋದ ಬಾಲಕರಿಬ್ಬರು ನೀರುಪಾಲು! ದುರಂತ ಘಟನೆ!

KARNATAKA NEWS/ ONLINE / Malenadu today/ Sep 17, 2023 SHIVAMOGGA NEWS

ಹಬ್ಬಗಳ ಸಮೀಪದಲ್ಲಿಯೇ ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪ ದುರಂತವೊಂದು ಸಂಭವಿಸಿದೆ. ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲಗಿದ್ದಾರೆ. ಕೆಸುವಿನ ಕಟ್ಟೆಯಲ್ಲಿರುವ ಕೆರೆಗೆ ನಿನ್ನೆ ಈಜಲು ತೆರಳಿದ್ದ 13 ವರ್ಷದ ಇಬ್ಬರು ಬಾಲಕರು ನೀರು ಪಾಲಾಗಿದ್ದಾರೆ.  

ನಿನ್ನೆ ಮಧ್ಯಾಹ್ನ  ಮನೆಗೆ ತುಂಬಾ ಹೊತ್ತಾದರೂ ಮಕ್ಕಳು ಬರದ ಹಿನ್ನೆಲೆಯಲ್ಲಿ ಪೋಷಕರು ಅವರಿಗಾಗಿ ಹುಡುಕಾಟ ನಡೆಸಿದ್ದರು. ಈ ವೇಳೆ ಕೆರೆಯ ಬಳಿಗೆ ಹೋದಾಗ, ಅಲ್ಲಿ ಮಕ್ಕಳ ಬಟ್ಟೆ ಹಾಗೂ ಚಪ್ಪಲಿ ಕಾಣಿಸಿದೆ. ತಕ್ಷಣ ಕೆರೆಯಲ್ಲಿ ಹುಡುಕಾಡಿದ್ದಾರೆ. ನೀರು ಪಾಲಾಗಿದ್ದ ಮಕ್ಕಳ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. 

ಫೈಸಲ್ ಹಾಗೂ ಶೋಯೆಬ್​ ಮೃತ ಬಾಲಕರಾಗಿದ್ದು, ಪೋಷಕರ ಆಕ್ರಂಧನ ಮುಗಿಲು ಬಿಟ್ಟಿದೆ. ಕುಂಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು  ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಒಪ್ಪಿಸಿದ್ದಾರೆ.  

ಇನ್ನಷ್ಟು ಸುದ್ದಿಗಳು