ಕತ್ತೆಗಾಗಿ 10 ಲಕ್ಷ ಕಳೆದುಕೊಂಡ ಗ್ರಾಹಕ/ 100 ಅಡಿ ಆಳಕ್ಕೆ ಬಿದ್ದ ಲಾರಿ, ಇಬ್ಬರ ಜೀವ ಉಳಿಸಿದ ಮರ/ಹಾವಿಗೆ ಡೀಸೆಲ್​ ಎರಚಿದವನಿಗೆ ಶುರುವಾಯ್ತು ಮೈ ಉರಿ

Here are the details of the news reported in different districts of the stateರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವರದಿಯಾದ ಸುದ್ದಿಗಳ ವಿವರ ಇಲ್ಲಿದೆ

ಕತ್ತೆಗಾಗಿ 10 ಲಕ್ಷ ಕಳೆದುಕೊಂಡ ಗ್ರಾಹಕ/  100 ಅಡಿ ಆಳಕ್ಕೆ ಬಿದ್ದ ಲಾರಿ, ಇಬ್ಬರ ಜೀವ ಉಳಿಸಿದ ಮರ/ಹಾವಿಗೆ ಡೀಸೆಲ್​ ಎರಚಿದವನಿಗೆ ಶುರುವಾಯ್ತು ಮೈ  ಉರಿ

KARNATAKA NEWS/ ONLINE / Malenadu today/ Sep 17, 2023 SHIVAMOGGA NEWSಕತ್ತೆ ಖರೀದಿಯಲ್ಲಿ 9.45 ದೋಖಾ

ಕತ್ತೆ ಖರೀದಿಯಲ್ಲಿ ಚಿಕ್ಕಬಳ್ಳಾಪುರ ಮೂಲದ ವ್ಯಕ್ತಿಯೊಬ್ಬರು ಸರಿಸುಮಾರು 10 ಲಕ್ಷ ಕಳೆದುಕೊಂಡಿದ್ದಾರೆ. ಇವರಿಗೆ  ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ಮೂಲದ ಶ್ರೀನಿವಾಸಗೌಡ ಎಂಬುವವರು  ₹9.45 ಲಕ್ಷ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬಾಗೇಪಲ್ಲಿ ತಾಲೂಕು ರಾಮಾನುಪಾಡಿ ಗ್ರಾಮದ ಗೋದಾವರಿ ಫಾರಂ ಹೌಸ್ ಮಾಲೀಕ ಪಿ.ವಿ.ರವೀಂದ್ರ ದೂರಿದ್ದಾರೆ. ರಾಜಸ್ಥಾನದ ತಳಿ ಹಲಾರಿ ಕತ್ತೆಗಳನ್ನು ಕೊಡಿಸುತ್ತೇನೆ ಒಂದು ಕತ್ತೆಗೆ ಒಂದು ಲಕ್ಷದಂತೆ, 9.45 ಲಕ್ಷ ರೂಪಾಯಿ ಹಣವನ್ನು 11 ಕತ್ತೆಗೆ ಅಡ್ವಾನ್ಸ್​ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.  

ಪ್ರಪಾತಕ್ಕೆ ಬಿದ್ದ ಲಾರಿ ಜೀವ ಉಳಿಸಿದ ಮರ 

ಚಿಕ್ಕಮಗಳೂರ ಜಿಲ್ಲೆ ಚಾರ್ಮಾಡಿ ಘಾಟಿನಲ್ಲಿ ಮಂಜು ಕವಿವಿದ್ದರಿಂದ ಚಾಲಕನಿಗೆ ದಾರಿ ಕಾಣದೇ ಲಾರಿಯಿಂದ ನೂರು ಅಡಿ ಆಳಕ್ಕೆ ಬಿದ್ದಿದೆ. ಅದೃಷ್ಟಕ್ಕೆ ಲಾರಿ ಪ್ರಪಾತದಲ್ಲಿ  ಉರುಳಿ ಮರವೊಂದಕ್ಕೆ ತಾಗಿ ನಿಂತಿದೆ. ಹೀಗಾಗಿ ಲಾರಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ತಕ್ಷಣವೇ ಅಲ್ಲಿದ್ದವರು ಕೆಳಕ್ಕೆ ಹಗ್ಗಕಟ್ಟಿಕೊಂಡು ಇಳಿದು ಇಬ್ಬರನ್ನು ರಕ್ಷಿಸಿದ್ದಾರೆ. ಲಾರಿಯು ಲಾರಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ಚಿತ್ರದುರ್ಗಕ್ಕೆ ಹೋಗುತ್ತಿತ್ತು ಹಾವಿಗೆ ಡೀಸೆಲ್ ಎರಚಿದವನಿಗೆ ಶುರುವಾಯ್ತು ಮೈ ಉರಿ

ಕಳೆದ ವಾರ ಕಿನ್ನಿಗೋಳಿ ಸಮೀಪದ ಕಟ್ಟಡವೊಂದರಲ್ಲಿ ನಾಗರ ಹಾವೊಂದು ಕಾಣಸಿತ್ತು. ಈ ವೇಳೆ ಕಟ್ಟಡದ ಕಾವಲುಗಾರ ಹಾವಿನ ಮೇಲೆ ಡೀಸೆಲ್ ಎರಚಿ ಅಲ್ಲಿಂದ ಓಡಿಸಿದ್ದ. ಹಾವು ಡೀಸೆಲ್​ ನಿಂದ ಉರಿಯಾಗಿ ಒದ್ದಾಡುತ್ತಿತ್ತು. ಬಳಿಕ ಸ್ಥಳೀಯರು ವಿಷಯ ತಿಳಿದು ಸ್ಥಳಕ್ಕೆ ಬಂದು ಹಾವಿನ ಬಗ್ಗೆ ತಿಳಿದುಕೊಂಡಿರುವ ಯತೀಶ್​ರನ್ನ ಕರೆಸಿದ್ದಾರೆ. ಅವರು ಹಾವನ್ನ ಹಿಡಿದು ಅದರ ಮೈಯನ್ನ ಶಾಂಪುವಿನಿಂದ ತೊಳೆದು ಕಾಡಿಗೆ ಬಿಟ್ಟಿದ್ದಾರೆ. ಈ ಮಧ್ಯೆ ಘಟನೆ ನಡೆದು ವಾರ ಕಳೆಯುವಷ್ಟರಲ್ಲಿ ಡೀಸೆಲ್ ಎರಚಿದ ಕಾವಲುಗಾರನಿಗೆ ಮೈಯಲ್ಲಿ ಉರಿ ಆರಂಭವಾಗಿದೆ. ಸದ್ಯ ಆತ ತನ್ನ ಸಂಬಂಧಿಕರ ಜೊತೆ ಊರಿಗೆ ತೆರಳಿದ್ದು, ಅಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.  

 


ಇನ್ನಷ್ಟು ಸುದ್ದಿಗಳು