ಸಾಗರ ತಾಲ್ಲೂಕಿನಲ್ಲಿ ಪಶ್ಚಿಮ ಬಂಗಾಳದ ಹದೀದ್ ಎಂಬಾತ ಅರೆಸ್ಟ್ ! ಕಾರಣವೇನು ಗೊತ್ತಾ?

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Sep 17, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್ ಪೊಲೀಸರು ಪ್ರಕರಣವೊಂದರಲ್ಲಿ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯೊಬ್ಬನನ್ನ ಬಂಧಿಸಿದ್ದಾರೆ.  

ಏನಿದು ಘಟನೆ

ಸಾಗರ ತಾಲ್ಲೂಕಿನ ಅಂಬಾರಗೋಡ್ಲು ಗ್ರಾಮದಲ್ಲಿ ಒಂಟಿ ಮನೆಯೊಂದರ ಮಹಿಳೆಯ ಮೇಲೆ ನಡೆದಿದ್ದ ಮಾರಣಾಂತಿಕ ಹಲ್ಲೆ ಪ್ರಕರಣ , ಕಳೆದ ಕೆಲವು ತಿಂಗಳಿಂದ ಈ ಭಾಗದಲ್ಲಿ ಆತಂಕ ಮೂಡಿಸಿತ್ತು. ಈ ಪ್ರಕರಣವನ್ನು ಇದೀಗ ಪೊಲೀಸರು ಬೇದಿಸಿದ್ದಾರೆ.  

ಅಂಬಾರಗೋಡ್ಲು ಗ್ರಾಮದ ನಿವಾಸಿ ಸುಜಾತಾ ಎಂಬವರ ಮೇಲೆ ನಡೆದಿದ್ದ ಮಾರಣಾಂತಿಕ ಹಲ್ಲೆ ಸಂಬಂಧ ವರ್ಷದ ಆರಂಭದಲ್ಲಿಯೇ ಕೇಸ್ ದಾಖಲಾಗಿತ್ತು. ಆನಂತರ ಕಳೆದ 10 ನೇ ತಾರೀಖು ಸಂತ್ರಸ್ತೆಯ ಮನೆಯ ಸಿಸಿ ಕ್ಯಾಮರಾಗಳ  ವಯರ್ ಕಟ್​ ಮಾಡಿ ಭಯ ಸೃಷ್ಟಿಸುವ ಪ್ರಯತ್ನ ನಡೆಸಿದ್ದ ಆರೋಪ ಸಂಬಂಧ ಕೇಸ್​ ದಾಖಲಾಗಿತ್ತು. ಈ ಪ್ರಕರಣವನ್ನು ಭೇದಿಸಿದ ಪೊಲೀಸರು ಡಿಬಿಎಲ್​ ಶೆಡ್​ನಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಹದೀದ್ ಎಂಬವವನನ್ನು ಬಂಧಿಸಿದ್ದಾರೆ. 

ಈ ವೇಳೆ ಆತನಿಂದ ಕಬ್ಬಿಣದ ರಾಡ್ ಹಾಗೂ ಕತ್ತರಿ ಮತ್ತು ಕೃತ್ಯಕ್ಕೆ ಬಳಸಿದ ಇತರೇ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಯ ಕೃತ್ಯದ ಉದ್ದೇಶ  ಹಾಗೂ ಆತನ ಹಿನ್ನೆಲೆ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.   


ಇನ್ನಷ್ಟು ಸುದ್ದಿಗಳು 

 


 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor