ರಾಗಿಗುಡ್ಡದಲ್ಲಿ ನಡೆದ ಘಟನೆಗೆ ಕಾರಣವೇನು? FIR ನಲ್ಲಿ ಹೊರಬಿದ್ದ ಸತ್ಯವೇನು? ಇಷ್ಟಕ್ಕೂ ಏನಾಯ್ತು?

Here is the detail of what is in the FIRs related to the incident in Ragiguddaರಾಗಿಗುಡ್ಡದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತ ಎಫ್​ಐಆರ್​ಗಳಲ್ಲಿ ಏನಿದೆ ಎಂಬುದರ ವಿವರ ಇಲ್ಲಿದೆ

ರಾಗಿಗುಡ್ಡದಲ್ಲಿ ನಡೆದ ಘಟನೆಗೆ ಕಾರಣವೇನು? FIR  ನಲ್ಲಿ ಹೊರಬಿದ್ದ ಸತ್ಯವೇನು? ಇಷ್ಟಕ್ಕೂ ಏನಾಯ್ತು?

KARNATAKA NEWS/ ONLINE / Malenadu today/ Oct 4, 2023 SHIVAMOGGA NEWS

ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಕಾರಣವೇನು? ಹೀಗೊಂದು ಪ್ರಶ್ನೆ ಇದುವರೆಗೂ ಕಾಡುತ್ತಿದ್ದು, ಯಾರೊಬ್ಬರು ಇದಕ್ಕೆ ಸ್ಪಷ್ಟ ಉತ್ತರ ನೀಡಿಲ್ಲ. ಗಲಾಟೆ ಹೇಗಾಯ್ತು? ಗಲಾಟೆಗೆ ಕಾರಣವಾಗಿದ್ದು ಯಾರು? ಮೊದಲು ಪ್ರಚೋದಿಸಿದವರು ಯಾರು? ಈ ಪ್ರಶ್ನೆಗಳಿಗೆ ಮೌನವೇ ಉತ್ತರವಾಗುತ್ತಿದೆ. 

ಇದೀಗ ಈ ಗಲಾಟೆ ಸಂಬಂಧ ದಾಖಲಾದ ಎಫ್​ಐಆರ್​ಗಳು ಗಲಾಟೆಗೆ ಕಾರಣವಾದ ವಿವಿಧ ಅಂಶಗಳನ್ನು ಹೇಳುತ್ತಿದ್ದು, ಒಟ್ಟು 24 FIR  ಪೈಕಿ ಕೆಲವು ಎಫ್​ಐಆರ್​ಗಳು ಕೌಂಟರ್​ ಕೇಸ್​ಗಳಂತಿವೆ. ಕೆಲವು ಸುಮುಟೋ ಪ್ರಕರಣಗಳು ಪೊಲೀಸರ ಮೇಲೆ ನಡೆದ ದೌರ್ಜನ್ಯದ ವಿರುದ್ದವಾಗಿ ದಾಖಲಾಗಿವೆ.. 

ಮತ್ತೆ ಕೆಲವು ಎಫ್​ಐಆರ್​ ಘಟನೆಯ ಕಥೆಗಳನ್ನು ಸೂಕ್ಷ್ಮವಾಗಿ ಹೇಳುತ್ತಿದೆ. ಮುಖ್ಯವಾಗಿ ರಾಗಿಗುಡ್ಡದ ಗಲಾಟೆಯಲ್ಲಿ  ಮುಖ್ಯವಾಗಿ ಕೇಳಿಬರುವ ಹೆಸರು ರೋಹನ್..ಇಡೀ ಘಟನೆಯಲ್ಲಿ ಈತ ಗಾಯಾಳು, ಹಲ್ಲೆಗೊಳಗಾದವ ಮತ್ತು ಈತ ಆರೋಪಿ ಕೂಡ! ಈತನ ಹಿನ್ನೆಲೆಯನ್ನು ಪೊಲೀಸರು ಇದೀಗ ವಿಚಾರಿಸುತ್ತಿದ್ದಾರೆ. 

ಇದರ ನಡುವೆ  ರೋಹನ್​ ಮೇಲಾದ ಹಲ್ಲೆಯ ಸಂಬಂದ ಎಫ್​ಐಆರ್ ದಾಖಲಾಗಿದ್ದು, ಮನೆ ಮುಂದೆ ಸ್ನೇಹಿತರೊಂದಿಗೆ ನಿಂತಿದ್ದ ರೋಹನ್ ರಾವ್ ಮೇಲೆ ಇರ್ಫಾನ್, ನಭಿ, ರಫಿಕ್, ಇಮ್ರಾನ್ ಎಸ್ ಎಸ್, ಮಾಸಿನ್, ಕಲೀಮ್, ಸೂಫಿ, ಹಿದಾಯತ್ ಯಾನೆ ಪಾಷ ಮತ್ತು ಇತರರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. 

ಮನೆಯೊಂದನ್ನ ಟಾರ್ಗೆಟ್ ಮಾಡಿ ಹಲ್ಲೆ ನಡೆಸಿದ ಆರೋಪಕ್ಕೆ ಪೂರಕವಾಗಿ  ವಿಡಿಯೋವೊಂದು ನಿನ್ನೆಯಷ್ಟೆ ವೈರಲ್​ ಆಗಿತ್ತು, ಆ ವಿಡಿಯೋಗೆ ಸಂಬಂಧಿಸಿದ ಎಫ್ಐಆರ್ ಇದಾಗಿದೆ ಎಂದು ಹೇಳಲಾಗುತ್ತಿದೆ. 

ಇನ್ನೂ ಮೆರವಣಿಗೆಯಲ್ಲಿ ನಡೆದಿದ್ದೇನು? ಎಂಬುದಕ್ಕೆ  ಕೆಲವು ಎಫ್ಐಆರ್ ಪರೋಕ್ಷವಾಗಿ ಉತ್ತರ ನೀಡುತ್ತಿದೆ, ಈದ್ ಮೆರವಣಿಗೆ ಸಾಗುತ್ತಿದ್ದಾಗ, ಕೆಲವರು ಅದನ್ನು ನೋಡಿಕೊಂಡು ರಸ್ತೆ ಬದಿ ನಿಂತಿದ್ದರು. ಈ ವೇಳೆ ಸುಮಾರು 50 ಕ್ಕೂ ಹೆಚ್ಚು ಯುವಕರು,  ಶನೀಶ್ವರ ದೇವಸ್ಥಾನದ ಬಳಿ  ನಮ್ಮ ಮೆರವಣಿಗೆ ನೋಡಲು ಬಂದಿದ್ದಾರೆ ಎಂದು ಗಲಾಟೆಗೆ ಮುಂದಾಗಿದ್ದಾರೆ ಎಂದು ಒಂದು ಎಫ್​​ಐಆರ್​ನಲ್ಲಿ ಆರೋಪಿಸಲಾಗಿದೆ. 

ಇದಕ್ಕೆ  ವ್ತತಿರಿಕ್ತವಾಗಿ ಇನ್ನೊಂದು ಎಫ್ಐಆರ್ ದಾಖಲಾಗಿದ್ದು, 10-15 ಜನ ಒಂದು ಕಟ್ಟಡದ ಮೇಲೆ ನಿಂತಿದ್ದು, ಮೆರವಣಿಗೆಯಲ್ಲಿ ಸಾಗುತ್ತಿದ್ದವರನ್ನ ನೋಡಿ ಬೈದು ಕಲ್ಲು ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಒಟ್ಟು 24 ಎಫ್ಐಆರ್ ದಾಖಲಾಗಿದೆ. ಆ ಪೈಕಿ 7 ಮನೆ ಜಖಂ ಪ್ರಕರಣ, 8 ಸುಮೋಟೋ ಕೇಸ್ ಇದೆ.  

ಮಹಿಳಾ ಪೇದೆಗಳ ನಿಂದನೆ ಹಲ್ಲೆ ಯತ್ನ ಆರೋಪ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಹಲ್ಲೆ ಯತ್ನ, ಪೊಲೀಸರ ಮೇಲೆ ಕಲ್ಲು ತೂರಾಟ , ಹೀಗೆ ಪೊಲೀಸರ ವಿರುದ್ಧ ನಡೆದ ಕೃತ್ಯದ ಆರೋಪಗಳ ಬಗ್ಗೆ ಸುಮುಟೋ ಕೇಸ್​ ದಾಖಲಾಗಿದೆ.  


ಇನ್ನಷ್ಟು ಸುದ್ದಿಗಳು 

  1.  ರಾಗಿಗುಡ್ಡದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ತೆರಳಿದ್ದ ಎಸ್​ಪಿ ಮತ್ತು ಪೊಲೀಸರ ಮೇಲೆ ಕಲ್ಲು ! ಸ್ಥಳದಲ್ಲಿ 144 ಸೆಕ್ಷನ್​ ಜಾರಿ! ಲಾಠಿ ಪ್ರಹಾರ

  2. ನಮಗೆ ಬೆಲೆ ಇರುತ್ತಲ್ಲ ಎಂದು ಪ್ರಶ್ನಿಸಿದ ಬಾಲಕಿ! ಶಿಕ್ಷಕರ ಹಾಗೆ ವಿದ್ಯಾರ್ಥಿನಿಗೆ ಅರ್ಥ ಮಾಡಿಸಿದ ಸಚಿವ! ವೈರಲ್​ ಆಯ್ತು ವಿಡಿಯೋ!