ಪಾಲಿಕೆಯಲ್ಲಿ ಶಿವಮೊಗ್ಗ ಈದ್ಗಾ ಮೈದಾನದ ಬಗ್ಗೆ ಚರ್ಚೆ! ಕಾರಣವೇನು?

There is a discussion on Shivamogga Idgah maidan in the corporation! What is the reason?

ಪಾಲಿಕೆಯಲ್ಲಿ ಶಿವಮೊಗ್ಗ ಈದ್ಗಾ ಮೈದಾನದ ಬಗ್ಗೆ ಚರ್ಚೆ! ಕಾರಣವೇನು?
ಪಾಲಿಕೆಯಲ್ಲಿ ಶಿವಮೊಗ್ಗ ಈದ್ಗಾ ಮೈದಾನದ ಬಗ್ಗೆ ಚರ್ಚೆ! ಕಾರಣವೇನು?

MALENADUTODAY.COM  |SHIVAMOGGA| #KANNADANEWSWEB

SHIVAMOGGA/  ಶಿವಮೊಗ್ಗ ನಗರಪಾಲಿಕೆಯ ಸಾಮಾನ್ಯ ಸಭೆ ನಿನ್ನೆ ನಡೆಯಿತು. ಈ ವೇಳೆ ಕುಡಿಯುವ ನೀರಿನ ವಿಚಾರಕ್ಕೆ ಖಾಲಿ ಕೊಡಗಳನ್ನು ಪ್ರದರ್ಶಿಸಲಾಯಿತು. ಅದರ ಬೆನ್ನಲ್ಲೆ ಶಿವಮೊಗ್ಗ ನಗರದ ಈದ್ಯಾ ಮೈದಾನದ ವಿಚಾರವೂ ಚರ್ಚೆಗೆ ಬಂದಿದೆ. 

ಬಾಪೂಜಿ ನಗರದ ಮಾರಿಕಾಂಬ ದೇವಸ್ಥಾನದ ಜಾಗ ಅಳತೆ ಮಾಡಿ ಖಾತೆ ಮಾಡಿಕೊಡಲು ಪಾಲಿಕೆ ವಿಳಂಬ ಮಾಡುತ್ತಿದೆ, ಆದರೆ ಪಾಲಿಕೆ ಜಾಗವನ್ನು ವಕ್ಸ್‌ಬೋರ್ಡ್‌ಗೆ ಖಾತೆ ಮಾಡಲಾಗುತ್ತಿದೆ. ಈದ್ಗಾ  ಮೈದಾನ  ಪಾಲಿಕೆ ಜಾಗ, ಇದನ್ನು ವಕ್ಸ್‌ಬೋರ್ಡ್‌ಗೆ ಖಾತೆ ಮಾಡಲು ಬಿಡುವುದಿಲ್ಲ ಎಂಬ ಮಾತುಗಳು ಆಡಳಿತರೂಢ ಸದಸ್ಯರಿಂದಲೇ ಕೇಳಿಬಂದವು. 

ಮಣಿಪುರದಲ್ಲಿ ರಿಪ್ಪನ್​ಪೇಟೆ ಯೋಧ ಗುಂಡಿಗೆ ಬಲಿ! ಸಾವಿನ ಬಗ್ಗೆ ಮೂಡಿತು ಅನುಮಾನ?

ಸದಸ್ಯೆ ಸುರೇಖಾ ಮುರಳಿಧ‌ರ್​ರವರು ಬಾಪೂಜಿ ನಗರದಲ್ಲಿ ಹರಿಜನರ ಮಾರಿಕಾಂಬ ದೇವಸ್ಥಾನ ಹಾಗೂ ಸಮುದಾಯಭವನವಿದೆ. ಆದರೆ ಈ ಜಾಗದ ಅಳತೆಮಾಡಿಕೊಡಲು ಪಾಲಿಕೆಗೆ ಮನವಿ ಮಾಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಈ ವಿಚಾರದಲ್ಲಿ ಕೇವಲ ದೇವಾಲಯದ ಅಳತೆ ಮಾಡಲು ಪಾಲಿಕೆ ಮುಂದಾಗಿದ್ದು, ಸಮುದಾಯ ಭವನ ಹಾಗೂ 2 ಮಳಿಗೆಗಳ ಅಳತೆ ಮಾಡಿಕೊಡುತ್ತಿಲ್ಲ ಎಂದು ಆಕ್ಷೇಪಿಸಿದ್ರು. ಈ ವೇಳೇ ಅಧಿಕಾರಿಗಳು ಪಾಲಿಕೆ ದಾಖಲೆ ಪ್ರಕಾರ ದೇವಳದ ವಿಸ್ತೀರ್ಣ ನಮೂದಾಗಿಲ್ಲ. ಈಗ ಅಳತೆ ಮಾಡಬೇಕು, ನಾವು ಪಾಲಿಕ ಜಾಗದಲ್ಲಿ ಕಟ್ಟಿರುವ ದೇವಸ್ಥಾನದ ಅಳತೆ ಮಾಡಬಹುದು, ಮಳಿಗೆ ಸೇರಿಸಲು ಬರುವುದಿಲ್ಲ ಎಂದರು.

ಇದಕ್ಕೆ ಆಕ್ಷೇಪವೆತ್ತಿದ ಸದಸ್ಯ ಚೆನ್ನಬಸಪ್ಪ ಪಾಲಿಕೆ ಜಾಗವನ್ನು ವಕ್ಸ್‌ಗೆ ಮಾಡಿಕೊಡಲು ವಿಳಂಬ ಮಾಡುವುದಿಲ್ಲ, ಹಿಂದೂ ದೇವಾಲಯವಾದರೆ ಕಾನೂನು ಸಮಸ್ಯೆ ಎದುರಾಗುತ್ತದೆ. ನಾವು ಈದ್ಯಾ ಮೈದಾನವನ್ನು ವಕ್ಸ್ ಬೋರ್ಡ್‌ಗೆ ಖಾತೆ ಮಾಡಲು ಬಿಡುವುದಿಲ್ಲ ಎಂದರು. ಈ ವೇಳೆ  ಈ ನಡುವೆ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ನಡುವೆ ಮಾತಿನ ಚರ್ಚೆ ಜೋರಾಗಿ ನಡೆಯಿತು. ಅಂತಿಮವಾಗಿ ಹೆಚ್.ಸಿ. ಯೋಗೇಶ್‌ ಮತ್ತು ರಮೇಶ್ ಹೆಗ್ಡೆಯವರು ಈದ್ಗಾ ಮೈದಾನ ಜಾಗ ಪಾಲಿಕೆಯದಲ್ಲ ಎಂದರು. 

READ / ಸಿಟಿಯಲ್ಲಿಯೇ ದರೋಡೆ! ಸುಲಿಗೆ/ ಒಬ್ಬನನ್ನೆ ಮೂರು ಸಲ ರಾಬರಿ ಮಾಡಿದ ದುಷ್ಕರ್ಮಿಗಳು!/ 24 ಗಂಟೆಯ ಆಪರೇಷನ್

 ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNewsSoldier Shimoga Idgaha Maidan, Shivamogga Municipal Corporation, Channabasappa, Surekha Muralidhar, Bapuji Nagar, Idgah Maidan Controversy, Idgah Maidan Account, Idgah Maidan Reportಶಿವಮೊಗ್ಗ ಈದ್ಗಾ ಮೈದಾನ, ಶಿವಮೊಗ್ಗ ನಗರಪಾಲಿಕೆ, ಚನ್ನಬಸಪ್ಪ, ಸುರೇಖಾ ಮುರುಳಿಧರ್, ಭಾಪೂಜಿ ನಗರ, ಈದ್ಗಾ ಮೈದಾನ ಕಾಂಟ್ರೋವರ್ಸಿ, ಈದ್ಗಾ ಮೈದಾನ ಖಾತೆ, ಈದ್ಗಾ ಮೈದಾನ ವರದಿ