ಲೋಕಾಯುಕ್ತ ರೇಡ್ ಎಫೆಕ್ಟ್ / ಶಿವಮೊಗ್ಗ ತಹಶೀಲ್ದಾರ್ ನಾಗರಾಜ್ ಅಮಾನತು!

Lokayukta raid effect / Shimoga Tehsildar Nagaraj suspended!ಲೋಕಾಯುಕ್ತ ರೇಡ್ ಎಫೆಕ್ಟ್ / ಶಿವಮೊಗ್ಗ ತಹಶೀಲ್ದಾರ್ ನಾಗರಾಜ್ ಅಮಾನತು!

ಲೋಕಾಯುಕ್ತ ರೇಡ್ ಎಫೆಕ್ಟ್ / ಶಿವಮೊಗ್ಗ ತಹಶೀಲ್ದಾರ್  ನಾಗರಾಜ್ ಅಮಾನತು!

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS

ಶಿವಮೊಗ್ಗದದಲ್ಲಿ ತಹಶೀಲ್ದಾರ್​ ಆಗಿರುವ ಎನ್​ಜೆ ನಾಗರಾಜ್​ರನ್ನ ಅಮಾನತ್ತುಗೊಳಿಸಲಾಗಿದೆ. ಅವರು ಹೊಳಲ್ಕೆರೆ ತಾಲ್ಲೂಕು ತಹಶೀಲ್ದಾರ್ ಆಗಿದ್ದ ಸಂದರ್ಭದಲ್ಲಿ ಅವರ ಮೇಲೆ ಲೋಕಾಯುಕ್ತ ರೇಡ್ ಆಗಿತ್ತು. ಆನಂತರ ಲೋಕಾಯುಕ್ತ ಪೊಲೀಸ್ ಮಹಾನಿರ್ದೇಶಕರು, ಪ್ರಕರಣಾ ತನಿಖಾ ವರದಿ ಆಧರಿಸಿ, ನಾಗರಾಜ್​ರವರನ್ನು ಅಮಾನತ್ತುಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಪತ್ರದ ಉಲ್ಲೇಖದಂತೆ ಕರ್ನಾಟಕ ಸರ್ಕಾರ ತನ್ನ ನಡಾವಳಿಯಲ್ಲಿ ನಾಗರಾಜ್​ರವರನ್ನು ಅಮಾನತ್ತುಗೊಳಿಸಿ ಇಂದು ಆದೇಶಿಸಿದೆ. 

ಸರ್ಕಾರದ ಆದೇಶದಲ್ಲಿ ಏನಿದೆ 

ಸರ್ಕಾರದ ಆದೇಶ ಸಂಖ್ಯೆ:ಕಂಇ 45 ಎಎಸ್‌ಡಿ 2023, ಬೆಂಗಳೂರು ದಿನಾಂಕ:12.09.2023.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರವು ಶ್ರೀ ಎನ್‌.ಜೆ. ನಾಗರಾಜ, ಹಿಂದಿನ ತಹಶೀಲ್ದಾರ್ ಗ್ರೇಡ್-1 ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ (ಹಾಲಿ ತಹಶೀಲ್ದಾರ್ ಗ್ರೇಡ್-1, ಶಿವಮೊಗ್ಗ ತಾಲ್ಲೂಕು ರವರ ವಿರುದ್ಧ ದಾಖಲಾದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988 (ತಿದ್ದುಪಡಿ ಕಾಯ್ದೆ 2018)ರ ಕಲಂ 13(1)(29) & 13(2) ರನ್ವಯ ದಾಖಲಾದ ಕ್ರಿಮಿನಲ್ ಮೊಕದ್ದಮ ಸಂಖ್ಯೆ:11/2023ರಲ್ಲಿನ ಆರೋಪದ ಸಂಬಂಧ ಅವರ ವಿರುದ್ಧ ಇಲಾಖಾ ವಿಚಾರಣೆ/ತನಿಖೆಯನ್ನು ಬಾಕಿಯಿರಿಸಿ ಕರ್ನಾಟಕ ನಾಗರಿಕ ಸೇವಾ (ವ.ನಿ.&ಮೇ) ನಿಯಮಗಳು-1957ರ ನಿಯಮ-10(1)(ಎಎ) ರನ್ವಯ ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದೆ/ 

ಮುಂದುವರೆದು, ಶ್ರೀ ಎನ್.ಜೆ. ನಾಗರಾಜ, ತಹಶೀಲ್ದಾರ್ ಗ್ರೇಡ್-1 ಇವರಿಗೆ ಅಮಾನತ್ತಿನ ಅವಧಿಯಲ್ಲಿ ಕ.ಸಿ.ಎಸ್.ಆರ್ ನಿಯಮ-98(1)(ಎ) ರನ್ವಯ ನಿಯಮಾನುಸಾರ ಜೀವನಾಧಾರ ಭತ್ಯೆ ಪಡೆಯುತ್ತಾರೆ .ಸದರಿಯವರು ಸಕ್ಷಮ ಪ್ರಾಧಿಕಾರದ ಪೂರ್ವನುಮತಿಯಿಲ್ಲದ ಕೇಂದ್ರ ಸ್ನಾನವನ್ನು ಬಿಡತಕ್ಕದ್ದಲ್ಲ. ಸದರಿಯವರ ಲೀನ್ ಅನ್ನು ಯಾದಗಿರಿ ಜಿಲ್ಲಾಧಿಕಾರಿಗಳ ಕಛೇರಿಗೆ ವರ್ಗಾಯಿಸಿದೆ. 

ಏನಿದು ಪ್ರಕರಣ

ಸರ್ಕಾರ ನಾಗರಾಜ್​ರವರ ವಿರುದ್ಧ ದಾಖಲಾದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988 (ತಿದ್ದುಪಡಿ ಕಾಯ್ದೆ 2018)ರ ಕಲಂ 13(1)(ಬಿ) & 13(2) ರನ್ನಯ ದಾಖಲಾದ ಕ್ರಿಮಿನಲ್ ಮೊಕದ್ದಮೆ ಸಂಖ್ಯೆ:11/2023ರಲ್ಲಿನ ಆರೋಪದ ಸಂಬಂಧ ಅವರ ವಿರುದ್ಧ ಇಲಾಖಾ ವಿಚಾರಣೆ/ ತನಿಖೆಯನ್ನು ಕಾಯ್ದಿರಿಸಿ, ಸದರಿಯವರನ್ನು ಸೇವೆಯಿಂದ ಅಮಾನತ್ತಿನಲ್ಲಿಡಲು ತೀರ್ಮಾನಿಸಿದೆ. 

ಕಳೆದ ಏಪ್ರಿಲ್​ ತಿಂಗಳಿನಲ್ಲಿ ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆ ಲೋಕಾಯುಕ್ತ ಪೊಲೀಸರು ಕೋರ್ಟ್ ಅನುಮತಿ ಪಡೆದು ವಿವಿದೆಡೆ ರೇಡ್ ನಡೆಸಿದ್ದರು. ನಾಗರಾಜ್​ರವರ ವಿರುದ್ಧವೂ ರೇಡ್ ನಡೆದಿತ್ತು. ಈ ವೇಳೆ  ಶಿಕಾರಿಪುರ ಟೌನ್, ಶಿವಮೊಗ್ಗ , ಹೊಳಲ್ಕೆರೆ ಮತ್ತು ವಿವಿದೆಡೆ ದಾಳಿ ನಡೆದಿತ್ತು. ಈ ವೇಳೆ ಆದಾಯಕ್ಕೂ ಮೀರಿದ ಆಸ್ತಿ ಗಳಿಸಿದ ಬಗ್ಗೆ ಆರೋಪಿಸಲಾಗಿತ್ತು.  

ಇನ್ನಷ್ಟು ಸುದ್ದಿಗಳು