ತಮಿಳುನಾಡು ಈರೋಡ್‌ ಚೆಕ್‌ಪೋಸ್ಟ್‌ ನಲ್ಲಿ ಶಿವಮೊಗ್ಗ ದಂಪತಿ ಖರೀದಿಸಿದ ಸೀರೆ, ದುಡ್ಡು ಜಪ್ತಿ! ಕಾರಣವೇನು? ನಡೆದಿದ್ದೇನು?

Shivamogga Mar 19, 2024 ನೀತಿ ಸಂಹಿತೆ ಜಾರಿಯಾಗುತ್ತಲೇ ಎಲ್ಲಾ ಕಡೆಗಳಲ್ಲಿಯು ಚೆಕ್‌ಪೋಸ್ಟ್‌ ನಿರ್ಮಾಣ ಮಾಡಲಾಗಿದ್ದು, ಪರಿಶೀಲನೆಗಳು ಕಟ್ಟುಬಸ್ತ್‌ ಆಗಿ ನಡೆಯುತ್ತಿದೆ. ಇದರ ನಡುವೆ ದೂರದ ತಮಿಳುನಾಡು ರಾಜ್ಯದಲ್ಲಿ ಶಿವಮೊಗ್ಗದ ದಂಪತಿಯೊಬ್ಬರು ನೀತಿ ಸಂಹಿತೆಯಿಂದ ಪೇಚಿಗೆ ಸಿಲುಕಿದ ಘಟನೆ ಬಗ್ಗೆ ವರದಿಯಾಗಿದೆ. 

ಶಿವಮೊಗ್ಗದ ಅ.ನಾ. ವಿಜಯೇಂದ್ರ ಎಂಬವರು ಎಲ್ಲರಿಗೂ ಪರಿಚತರೇ! ಇವರು ಮಗನ ಮದುವೆ ಸಿದ್ದತೆಯಲ್ಲಿದ್ದಾರೆ. ಇದೇ ವಿಚಾರದಲ್ಲಿ ಜವಳಿ ಖರೀದಿಗೆ ಅಂತಾ ತಮಿಳುನಾಡು ರಾಜ್ಯದ ಸೇಲಂಗೆ ಹೋಗಿದ್ದರು. ಅಲ್ಲಿ ಸುಮಾರು ನಲವತ್ತು ಸಾವಿರ ರೂಪಾಯಿ ಮೌಲ್ಯದ ಸೀರೆ ಖರೀದಿ ಮಾಡಿದ್ದಾರೆ. ಅಷ್ಟೊತ್ತಿಗೆ ಚುನಾವಣಾ ಆಯೋಗದ ಸುದ್ದಿಗೋಷ್ಟಿ ನಡೆಯುತ್ತಿತ್ತು. ಬೆನ್ನಲ್ಲೆ ನೀತಿ ಸಂಹಿತೆಯು ಜಾರಿಯಾಯ್ತು. 

ಅನಾ ವಿಜಯೇಂದ್ರ ದಂಪತಿ ಜವಳಿ ಖರೀದಿ ಮುಗಿಸಿ ಶಿವಮೊಗ್ಗಕ್ಕೆ ವಾಪಸ್‌ ಆಗಬೇಕು ಎನ್ನುಷ್ಟರಲ್ಲಿ ಈರೋಡ್‌ ಚೆಕ್‌ಪೋಸ್ಟ್‌ನಲ್ಲಿ ನೀತಿ ಸಂಹಿತೆಯ ಸಂಬಂಧ ಪರಿಶೀಲನೆ ಆರಂಭವಾಗಿತ್ತು. ಅಲ್ಲಿ ಇವರ ವಾಹವನ್ನು ಅಡ್ಡಗಟ್ಟಿದ ಅಧಿಕಾರಿ ಸಿಬ್ಬಂದಿ ದಾಖಲೆ ಇಲ್ಲ ಎಂದು ದಂಪತಿಯ ಬಳಿಯಿದ್ದ ನಲವತ್ತು ಸಾವಿರ ಕ್ಯಾಶ್‌ ಹಾಗೂ ಸೀರೆಗಳನ್ನು ವಶಕ್ಕೆ ಪಡೆದಿದ್ದರು. ಇದರಿಂದ ಅನಾ ದಂಪತಿ ಪರದಾಟ ಪಡಬೇಕಾಗಿ ಬಂದಿತ್ತು. 

ಇನ್ನೂ ಈ ವಿಚಾರದಲ್ಲಿ ಹೋರಾಟ ಬಿಡದ ಅನಾ ವಿಜಯೇಂದ್ರ ಶಿವಮೊಗ್ಗದಿಂದ ಅಗತ್ಯವಿರುವ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಅಲ್ಲಿನ ಡಿಸಿ ಎಸಿಯವರನ್ನ ಭೇಟಿಯಾಗಿದ್ದಾರೆ. ಪಾಸ್‌ ಬುಕ್‌ ಸೇರಿದಂತೆ ಜವಳಿ ಖರೀದಿಯ ದಾಖಲೆಯನ್ನು ನೀಡಿದ ಬಳಿಕ ತಮಿಳುನಾಡಿನ ಅಧಿಕಾರಿಗಳು ದಂಪತಿಗೆ ಸೇರಿದ 89 ಸೀರೆ ಹಾಗೂ ನಲವತ್ತು ಸಾವಿರ ಹಣವನ್ನು ವಾಪಸ್‌ ನೀಡಿದ್ದಾರೆ. 

Leave a Comment