ಮಳೆ ಬೆನ್ನಲ್ಲೆ ಹೊತ್ತಿಉರಿದ ಸ್ಮಾರ್ಟ್​ ಸಿಟಿ ಕರೆಂಟ್ ಬಾಕ್ಸ್! ಏಲ್ಲಿದು? ಹೇಗಿದು?

Smart city electricity box on fire after rain! Where is it? How is it?

ಮಳೆ ಬೆನ್ನಲ್ಲೆ ಹೊತ್ತಿಉರಿದ ಸ್ಮಾರ್ಟ್​ ಸಿಟಿ ಕರೆಂಟ್ ಬಾಕ್ಸ್! ಏಲ್ಲಿದು? ಹೇಗಿದು?

KARNATAKA NEWS/ ONLINE / Malenadu today/ Jun 29, 2023 SHIVAMOGGA NEW

ಶಿವಮೊಗ್ಗ/ ನಗರದಲ್ಲಿ ಮಳೆಯಾಗುತ್ತಲೇ ಸ್ಮಾರ್ಟ್​ ಸಿಟಿ ವ್ಯವಸ್ಥೆಯು ಶಾಕ್​ ಕೊಡಲು ಆರಂಭಿಸಿವೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ನಗರದ ಗಾಂಧಿನಗರ ಬಡಾವಣೆಯಲ್ಲಿ ಸ್ಮಾರ್ಟ್​ ಸಿಟಿ ಬಾಕ್ಸ್​ನಲ್ಲಿ ವಿದ್ಯುತ್​ ಶಾರ್ಟ್​ ಸರ್ಕಿಟ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಅಷ್ಟೆಅಲ್ಲದೆ ಕೆಲಕಾಲ ಇಡೀ ಬಾಕ್ಸ್​​ ಪಟಾಕಿಯಂತೆ ಸಿಡಿದಿದೆ .ಗಾಂಧಿನಗರದ 1ನೇ ಪ್ಯಾರಲಲ್​ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನೂ ಘಟನೆ ಬೆನ್ನಲ್ಲೆ ಸ್ಥಳೀಯರು ಆತಂಕಕ್ಕೀಡಾಗಿದ್ದು, ಸ್ಥಳೀಯರು ಮೆಸ್ಕಾಂಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ರಿಪೇರಿ ಕಾರ್ಯ ನಡೆಸ್ತಿದ್ದಾರೆ.ಭೂಗತ ಕೇಬಲ್​ಗಳ ಮೂಲಕ ಕಲ್ಪಿಸಿರುವ ವಿದ್ಯುತ್​ ಸಂಪರ್ಕದ ಕೇಬಲ್​ಗಳನ್ನು ನಿರ್ವಹಿಸಲು ಏರಿಯಾಗಳಲ್ಲಿ ಬಾಕ್ಸ್​ಗಳನ್ನು ಅಳವಡಿಸಲಾಗಿದೆ. ಈ ಬಾಕ್ಸ್​ ನಲ್ಲಿಯೇ ಬೆಂಕಿ ಕಾಣಿಸಿಕೊಂಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.  


 ಮಳೆ ಮುಂದುವರಿದರೇ ಓಕೆ! ಇಲ್ಲವಾದರೆ ನಾಲ್ಕು ದಿನಗಳಲ್ಲಿ ಸಿಗಂದೂರು ಲಾಂಚ್​ ಬಂದ್!

ಸಾಗರ / ಈಗಾಗಲೇ ವಾಹನಗಳ ಸಾಗಾಟವನ್ನು ನಿಲ್ಲಿಸಿರುವ ಸಿಗಂದೂರು ಲಾಂಚ್​ ನಲ್ಲಿ ಜನ ಸಾಗಾಟವನ್ನು ನಿಲ್ಲಿಸುವ ಬಗ್ಗೆ ಚರ್ಚೆಯಾಗುತ್ತಿದ್ದು, ನಾಲ್ಕು ದಿನಗಳಲ್ಲಿ ಲಾಂಚ್​ ಸಂಚಾರವೇ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.. ಇವತ್ತು ಶಿವಮೊಗ್ಗದಲ್ಲಿ ಮಳೆಯಾಗುತ್ತಿದೆ. ಇದೇ ರೀತಿ ಮಳೆಯಾದರೆ, ಲಾಂಚ್​ ಸ್ಥಗಿತವಾಗುವ ಸಂದರ್ಭ ಬರುವುದಿಲ್ಲ. ಶರಾವತಿ ಕಣಿವೆಯಯಲ್ಲಿ 20 ಸಾವಿರಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ. ಸಿಗಂದೂರು ಲಾಂಚ್​ನ್ನ ಸ್ಥಗಿತಗೊಳಿಸಿದರೆ,  ಸಿಗಂದೂರನ್ನು ಕ್ರಮಿಸಲು ಜನ 80 ಕಿಮೀ ಸುತ್ತುವರಿದು ಹೋಗಬೇಕಾಗುತ್ತದೆ. ಈ ನಿಟ್ಟಿನಲ್ಲಿ  ಮಾತನಾಡಿರುವ ಶಾಸಕ ಬೇಳೂರು ಗೋಪಾಲಕೃಷ್ಣರವರು ಅವಶ್ಯ ಬಿದ್ದಲ್ಲಿ ವಿಶೇಷ ಬಸ್ಸಿನ ವ್ಯವಸ್ಥೆ, ಮೂಲ ಸೌಕರ್ಯಗಳನ್ನು ಒದಗಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಶರಾವತಿ ವಿದ್ಯುದಾಗಾರದಲ್ಲಿ ಇನ್ನು 12 ದಿನ ವಿದ್ಯುತ್‌ ಉತ್ಪಾದನೆ ಮಾಡುವಷ್ಟು ನೀರಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಎಲ್ಲರೂ ದೇವರ ಮೊರೆ ಹೋಗೋಣ, ಇಂದಿನಿಂದ ಸ್ವಲ್ಪ ಮಳೆಯ ವಾತಾವರಣ ಕಾಣಿಸುತ್ತಿದ್ದು, ಸಮಸ್ಯೆ ಪರಿಹಾರವಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.