ಹಿಂದೂ ಹರ್ಷ ಹತ್ಯೆಗೆ ಎರಡು ವರ್ಷ! ಹಿಂದೂ ಸಂಘಟನೆಗಳಿಂದ ಪಂಜಿನ ಮೆರವಣಿಗೆ

Two years after Hindu Harsha's murder Hindu organisations take out a procession

ಹಿಂದೂ ಹರ್ಷ ಹತ್ಯೆಗೆ ಎರಡು ವರ್ಷ! ಹಿಂದೂ ಸಂಘಟನೆಗಳಿಂದ ಪಂಜಿನ ಮೆರವಣಿಗೆ
Two years after Hindu Harsha's murder

Shivamogga Feb 21, 2024 Two years after Hindu Harsha's murder   ನಿನ್ನೆಗೆ ಹಿಂದೂ ಹರ್ಷನ ಹತ್ಯೆಯಾಗಿ ಎರಡು ವರ್ಷ. ಈ ಹಿನ್ನೆಲೆಯುಲ್ಲಿ ನಿನ್ನೆ ಭಜರಂಗದಳ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದ್ದರು. ಘಟನೆ ನಡೆದು ಎರಡು ವರ್ಷವಾದ ಹಿನ್ನೆಲೆಯಲ್ಲಿ ಹಳೆಯ ಶಿವಮೊಗ್ಗದಲ್ಲಿ ಸಿವಿಲ್ ಡ್ರೆಸ್​ ನಲ್ಲಿ ಹೆಚ್ಚಿನ ಪೊಲೀಸರು ರೌಂಡ್ಸ್ ಹಾಕುತ್ತಿದ್ದರು. ಆಯಕಟ್ಟಿನ ಸ್ಥಳದಲ್ಲಿ ನಡೆಯುತ್ತಿದ್ದ ಯಾವುದೇ ಚಟುವಟಿಕೆಗಳನ್ನ ಗಂಭೀರವಾಗಿ ಗಮನಿಸುತ್ತಿದ್ದರು. 

 ಇನ್ನೂ ನಿನ್ನೆ ಸಂಜೆ  ಹರ್ಷ ಹತ್ಯೆಯಾಗಿ ಎರಡು ವರ್ಷ ಹಿನ್ನೆಲೆ ಬಜರಂಗದಳ ಕಾರ್ಯಕರ್ತರಿಂದ ಪಂಜಿನ ಮೆರವಣಿಗೆ  ನಡೆಸಿದರು. ವಿಶ್ವ ಹಿಂದೂ ಪರಿಷತ್ ಹಾಗು ಬಜರಂಗದಳ ಕಾರ್ಯಕರ್ತರು,  ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಶಿವಪ್ಪನಾಯಕ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಿದರು. ಈ ವೇಳೆ  ಅಮರ್ ರಹೇ, ಅಮರ್ ರಹೇ ಹರ್ಷ ಅಮರ್ ರಹೇ ಘೋಷಣೆ ಕೂಗಿದರು.