ಶಿವಮೊಗ್ಗದ ಈ ರಸ್ತೆಗಳಲ್ಲಿ ಓಡಾಡುವಾಗ ಹುಷಾರ್​! ಹೊಡೆಯುತ್ತೆ ಕರೆಂಟ್ ಶಾಕ್!?

Malenadu Today

KARNATAKA NEWS / ONLINE / Malenadu today/ Nov 20, 2023 SHIVAMOGGA NEWS

Thirthahalli  |  Malnenadutoday.com |  ಬೆಂಗಳೂರಲ್ಲಿ ಶಿವಮೊಗ್ಗದಲ್ಲಿ ಮೃತ್ಯುಕೂಪವಾಗಿವೆ ಫುಟ್ ಪಾತ್ ಗಳು ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಕಾಮಗಾರಿಗಳು ಜನರನ್ನು ಬಲಿಪಡೆಯಲು ಸಜ್ಜಾಗಿ ನಿಂತಿವೆ..ಅದರ ಬಗ್ಗೆ ಎಚ್ಚರಿಸುವ ವರದಿಯನ್ನ ಇಲ್ಲಿ ನೀಡುತ್ತಿದ್ದೇವೆ.. 

ರಾಜ್ಯ ರಾಜಧಾನಿಯ ಹೋಫ್​ ಫಾರ್ಮ್​ ಬಳಿ ಪುಟ್​ಪಾತ್​ನಲ್ಲಿ ನಡೆದು ಹೋಗುತ್ತಿದ್ದ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಮೆಟ್ಟಿ, ಪುಟ್ಟ ಮಗುವಿನೊಂದಿಗೆ ತಾಯಿಯೊಬ್ಬಳು ಸಾವನ್ನಪ್ಪಿದ ಘಟನೆ ನಡೆದಿತ್ತು. ಇಂತಹುದ್ದೇ ಘಟನೆ ಶಿವಮೊಗ್ಗದಲ್ಲಿ ಯಾವಾಗ ಬೇಕಾದರೂ ಸಂಭವಿಸುವ ಅಪಾಯವಿದೆ. ಏಕೆಂದರೆ ಸ್ಮಾರ್ಟ್​ ಸಿಟಿ (smart city shivamogga ) ದಲ್ಲಿ ಮೆಸ್ಕಾಂನ ವಯರ್​ಗಳು ಎಲ್ಲಂದರಲ್ಲಿ ಹಾಗೆ ಬಿದ್ದಿವೆ…

Malenadu Today

ಶಿವಮೊಗ್ಗದಲ್ಲಿ ಅವೈಜ್ಞಾನಿಕ ಸ್ಮಾರ್ಟ್ ಸಿಟಿ ಕಾಮಗಾರಿಗಳು ಅಪಾಯದ ಮುನ್ಸೂಚನೆಯನ್ನು ನಿತ್ಯವೂ ನೀಡುತ್ತಿವೆ. ಅದೃಷ್ಟಕ್ಕೆ ಇದುವರೆಗೂ ಯಾರಿಗೂ ಅಪಾಯವಾಗಿಲ್ಲವಷ್ಟೆ.  ಫುಟ್ ಪಾತ್ ಗಳು ಮಾತ್ರ ಕೆಲವಡೆ ಸಾವನ್ನು ಕೈಬೀಸಿ ಕರೆಯುವಂತಿದೆ. ಭೂಗರ್ಭ ವಿದ್ಯುತ್ ಲೈನ್ ಗಳು ಫುಟ್ ಪಾತ್ ಗಳಲ್ಲಿ ಅಲ್ಲಲ್ಲಿ ಸ್ಕಿನ್ ಔಟ್ ಆಗಿದೆ. ಶಿವಮೊಗ್ಗದ ಜನರಿಗೆ ಫುಟ್ ಪಾತ್ ನಲ್ಲಿ ನಡೆಯುವುದೇ ಕಷ್ಟವಾಗಿದೆ. 

ಒಂದೆಡೆ ಬೀದಿ ಬದಿ ವ್ಯಾಪಾರಿಗಳಿಂದ ಫುಟ್ ಪಾತ್ ಗಳು ಕಿಷ್ಕಿಂದೆ ಯಾದ್ರೆ ಮತ್ತೊಂದೆಡೆ ವೆಹಿಕಲ್ ಪಾರ್ಕ್ ನಿಂದಾಗಿ ಪಾದಚಾರಿಗಳಿಗೆ ಫುಟ್ ಪಾತ್ ನಲ್ಲಿ ನಡೆದು ಹೋಗುವುದು ದುಸ್ತರವಾಗಿದೆ. ಹೀಗಾಗಿ ಅಂತಹ ಅಹಿತಕರ ಘಟನೆಗಳು ನಡೆದಿಲ್ಲ.

Malenadu Today

ಶಿವಮೊಗ್ಗದ ಕುವೆಂಪು ರಸ್ತೆಯ ಒಂದು ಚಿತ್ರಣವನ್ನು ಅವಲೋಕಿಸಿದರೆ, ಸಮಗ್ರ ಶಿವಮೊಗ್ಗದ ಚಿತ್ರಣ ಏನೆಂಬುದು ಅರಿವಾಗುತ್ತದೆ. ವಿದ್ಯುತ್ ಜಂಕ್ಷನ್ ಬಾಕ್ಸ್ ಬಳಿ ಕೇಬಲ್ ಗಳನ್ನು ಹಾಗೆಯೇ ಬಿಡಲಾಗಿದೆ. ಇದು ನಿರ್ಜೀವವಾಗಿದೆಯೋ ಅಥವಾ ವಿದ್ಯುತ್ ಹರಿಯುತ್ತಿದೆಯೋ? ಎಂಬುದು ಪಾದಚಾರಿಗಳಿಗೆ ತಕ್ಷಣಕ್ಕೆ ಅರಿವಿಗೆ ಬರುವುದಿಲ್ಲ. 

READ : ಬಸ್​ನ ಪುಟ್​ಬೋರ್ಡ್​ನಲ್ಲಿ ನಿಂತಿದ್ದ ಯುವಕ! ತೀರ್ಥಹಳ್ಳಿಯಲ್ಲಿ ನಡೀತು ಶಾಕಿಂಗ್ ಘಟನೆ !

ಇಂತಹ ಕೇಬಲ್ ಗಳನ್ನು ಪುಟ್ ಪಾತ್ ಗಳಿಂದ ತೆರವು ಗೊಳಿಸಬೇಕಾದ ಜವಬ್ದಾರಿ ಯಾರದ್ದು ಎಂಬುದನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೇ ಅರ್ಥ ಮಾಡಿಕೊಳ್ಳಬೇಕು. ಎಲ್ಲಲ್ಲಿ ವಿದ್ಯುತ್ ಜಂಕ್ಷನ್ ಅಂಡರ್​  ಗ್ರೌಂಡ್ ಕೇಬಲ್ ಅಳವಡಿಸಲಾಗಿದೆಯೋ ಅಲ್ಲಿ ಭೂಮಿಯಿಂದ ಹೊರಬಿದ್ದ  ಕೇಬಲ್ ಗಳ ಸ್ಥಿತಿಗತಿಯನ್ನು ಮೆಸ್ಕಾಂ ಹಾಗು ಜಿಲ್ಲಾಡಳಿತ ಪರೀಕ್ಷೆಗೊಳಪಡಿಸಬೇಕಿದೆ. 

Malenadu Today

ಅಲ್ಲದೆ ಅನಗತ್ಯವಾಗಿ ಪುಟ್ ಪಾತ್ ಗಳ ಮೇಲಿರುವ ಕೇಬಲ್ ಗಳನ್ನು ತಕ್ಷಣ ತೆರವುಗೊಳಿಸಬೇಕಿದೆ. ಈಗಾಗಲೇ ಅಂಡರ್ ಗ್ರೌಂಡ್ ಕೇಬಲ್ ಗಳು ಸುಟ್ಟು ಹೋದ  ಘಟನೆಗಳು ನಡೆದಿರುವುದು ನಮ್ಮ ಕಣ್ಣ ಮುಂದಿರುವಾಗ, ಮುಂದೆ ದೊಡ್ಡ ಪ್ರಮಾದ ಆಗುವುದನ್ನು ತಪ್ಪಿಸುವ ಬಹು ದೊಡ್ಡ ಹೊಣೆಗಾರಿಕೆ ಜಿಲ್ಲಾಡಳಿತದ ಮೇಲಿದೆ.


Share This Article