ಬಸ್ನ ಪುಟ್ಬೋರ್ಡ್ನಲ್ಲಿ ನಿಂತಿದ್ದ ಯುವಕ! ತೀರ್ಥಹಳ್ಳಿಯಲ್ಲಿ ನಡೀತು ಶಾಕಿಂಗ್ ಘಟನೆ !
A youth, who was standing on the footboard of a bus, was seriously injured when a barricade hit him near Balebail in Thirthahalli. Thirthahalli Taluk News, Karnataka News Live,

KARNATAKA NEWS / ONLINE / Malenadu today/ Nov 20, 2023 SHIVAMOGGA NEWS
Thirthahalli | Malnenadutoday.com | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಬಾಳೆಬೈಲ್ನ ಸಮೀಪ ಮತ್ತೊಂದು ಅಪಘಾತ ಸಂಭವಿಸಿದೆ. ಇತ್ತೀಚೆಗಷ್ಟೆ ಬಾಳೆಬೈಲ್ ನಲ್ಲಿ ಬುಲೆಟ್ -ಕಾರು ಡಿಕ್ಕಿ! ಅರಣ್ಯ ಇಲಾಖೆ ಸಿಬ್ಬಂದಿ ಸಾವನ್ನಪ್ಪಿದ್ದ ಘಟನೆ ನಡೆದಿತ್ತು.
ಇದೇ ಸ್ಥಳದಲ್ಲಿ ಇವತ್ತು ಬೆಳಗ್ಗೆ ಮತ್ತೊಂದು ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಯುವಕನಿಗೆ ಹೆಡ್ ಇಂಜುರಿಯಾಗಿದ್ದು, ಆತನನ್ನ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
READ : ಬಾನುಮತಿ ಬಾಲ ಕಡಿದವರು ಯಾರು!? ಅಮಾಯಕರಿಗೆ ಶಿಕ್ಷೆ ಆಗ್ತಿದ್ಯಾ? ಸಕ್ರೆಬೈಲ್ ಬಿಡಾರದ ಅಂದರ್ ಕೀ ಬಾತ್!
ಯಾರು ಈ ತಪ್ಪು ಮಾಡಬೇಡಿ
ಬಾಳೆಬೈಲ್ ಬಳಿ ಸಿಗುವ ರಾಕ್ ವೀವ್ಹ್ ಹೋಟೆಲ್ ಬಳಿಯಲ್ಲಿ ಘಟನೆ ನಡೆದಿದೆ. ಮೂಕಾಂಬಿಕಾ ಬಸ್ನ ಡೋರ್ನಿಂದ ಕೆಳಕ್ಕೆ ಯುವಕ ಬಿದ್ದು ಘಟನೆ ಸಂಭವಿಸಿದೆ. ಕಮ್ಮರಡಿಯಿಂದ ತೀರ್ಥಹಳ್ಳಿಗೆ ಬರುತ್ತಿದ್ದ ಬಸ್ನಲ್ಲಿ ಕಲ್ಮನೆ ಸಮೀಪದ ನಿವಾಸಿಯೊಬ್ಬ ಪುಟ್ಬೊರ್ಡ್ನಲ್ಲಿಯೇ ನಿಂತಿದ್ದ.
ಆತನಿಗೆ ಬಸ್ ಕಂಡಕ್ಟರ್ ಪುಟ್ಬೋರ್ಡ್ ಮೇಲೆ ನಿಲ್ಲಬೇಡಿ ಎಂದು ಹೇಳಿದ್ದಾರೆ. ಆದರೆ ಯುವಕ ಕಂಡಕ್ಟರ್ ಮಾತನ್ನ ಕಿವಿಗೆ ಹಾಕಿಕೊಳ್ಳಲಿಲ್ಲ. ಒಮ್ಮೆ ಹೇಳಿದ ನಂತರವೂ ಮತ್ತೆ ಪುಟ್ ಬೋರ್ಡ್ನಲ್ಲಿ ನೇತಾಡುತ್ತ ಬಸ್ನಲ್ಲಿ ಬಂದಿದ್ದಾನೆ. ಈ ಮಧ್ಯೆ ಹೆದ್ದಾರಿಯಲ್ಲಿ ಹಾಕಿದ್ದ ಬ್ಯಾರಿಕೇಡ್ ಯುವಕನಿಗೆ ಬಡಿದಿದೆ. ಪರಿಣಾಮ ಕೆಳಕ್ಕೆ ಬಿದ್ದ ಯುವಕ ಗಂಭೀರವಾಗಿ ಗಾಯಗೊಂಡಿದ್ದು. ಆತನನ್ನ ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದೆ..