ಬಾನುಮತಿ ಬಾಲ ಕಡಿದವರು ಯಾರು!? ಅಮಾಯಕರಿಗೆ ಶಿಕ್ಷೆ ಆಗ್ತಿದ್ಯಾ? ಸಕ್ರೆಬೈಲ್ ಬಿಡಾರದ ಅಂದರ್ ಕೀ ಬಾತ್!

The question arises as to whether innocent people will be punished in the case of cutting off the tail of elephant Banumathi elephant of Sakrebail elephant camp

ಬಾನುಮತಿ ಬಾಲ ಕಡಿದವರು ಯಾರು!? ಅಮಾಯಕರಿಗೆ ಶಿಕ್ಷೆ ಆಗ್ತಿದ್ಯಾ? ಸಕ್ರೆಬೈಲ್ ಬಿಡಾರದ ಅಂದರ್ ಕೀ ಬಾತ್!

KARNATAKA NEWS / ONLINE / Malenadu today/ Nov 18, 2023 SHIVAMOGGA NEWS

Shivamogga |  Malnenadutoday.com |   ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರಬಾನುಮತಿ ಆನೆ ಬಾಲ ಕಟ್​ ಮಾಡಿದ ಪ್ರಕರಣ ತೀವ್ರ ಕುತೂಹಲ ಮೂಡಿಸುತ್ತಿದೆ. ಪ್ರಕರಣದ ಸಂಬಂಧ ವರದಿ ಬಿತ್ತರಿಸಿದ ಬೆನ್ನಲ್ಲೆ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು ಸರಿಯಷ್ಟೆ! ಆದರೆ ಪ್ರಕರಣದ ತನಿಖೆಯನ್ನ ಸರಿಯಾದ ದಿಕ್ಕಿನಡಿಯಲ್ಲಿ ಮಾಡಿಲ್ಲ ಎನ್ನುವ ಆಕ್ರೋಶ ಸ್ಥಳೀಯವಾಗಿ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಮಲೆನಾಡು ಟುಡೆ ಸರಣಿ ತನಿಖಾ ಲೇಖನಗಳನ್ನು ಪ್ರಕಟಿಸಲಿದೆ.. ಅದರ ಮೊದಲ ಭಾಗ ಇದಾಗಿದ್ದು, ಇಡೀ ಪ್ರಕರಣದಲ್ಲಿ ಸಸ್ಪೆಂಡ್ ಆದ ಮಾವುತ ಮೊಹಮ್ಮದ್​ ತನ್ನದಲ್ಲದ ತಪ್ಪಿಗೆ ಅಮಾನತ್ತಾದನೇ ಎಂಬುದು ಸದ್ಯ ಎದ್ದಿರುವ ಗಂಭೀರ ಪ್ರಶ್ನೆ!

READ : BREAKING | ಬಾನುಮತಿ ಬಾಲ ಕಟ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್! ಏನದು!?

ಈ ಪ್ರಶ್ನೆ ಉದ್ಬವಿಸಲು ಕಾರಣವಿದೆ. ಸಕ್ರೆಬೈಲ್ ಕ್ಯಾಂಪ್​ನಲ್ಲಿ ಒಂದು ಆನೆ ಮಾವುತ ಹಾಗೂ ಕಾವಾಡಿಯ ಕುಟುಂಬಕ್ಕೆ ಅನ್ನದ ದಾರಿಯಾಗಿರುತ್ತದೆ. ಆನೆಯ ದೇಖಾರೇಖಿ ನೋಡಿಕೊಳ್ಳುವ ಕುಟುಂಬವೂ ಆನೆಯೊಂದಿಗೆ ಬದುಕು ಸಾಗಿಸುತ್ತಾ ಬರುತ್ತದೆ. ಹೀಗೆ ಬಾನುಮತಿಯ ಅತ್ಯಾಪ್ತ ಮಾವುತನಾಗಿ ದುಡಿಯುತ್ತಿರುವ ವ್ಯಕ್ತಿ ಮೊಹಮ್ಮದ್​.. ತನ್ನ ಪ್ರೀತಿಯ ಆನೆಯ ಬಾಲವನ್ನು ಕಟ್ ಮಾಡುವಂತಹ ವ್ಯಕ್ತಿ ಆತ ಖಂಡಿತ ಅಲ್ಲ ಎಂದು ಸಹೋದ್ಯೋಗಿಗಳೇ ಹೇಳುತ್ತಿದ್ದಾರೆ. ನಿರ್ಲಕ್ಷ್ಯತನದ ಆರೋಪದಡಿ ಆತನನ್ನು ಅಮಾನತ್ತು ಮಾಡಿದ್ದರೇ, ಆತ ತೋರಿದ ನಿರ್ಲಕ್ಷ್ಯಕ್ಕೆ ಸಾಕ್ಷ್ಯಗಳೇ ಇಲ್ಲ ಎನ್ನಲಾಗುತ್ತಿದೆ. 

ಹಾಗಿದ್ದರೂ ಆತನನ್ನೇ ಏಕೆ ಅಮಾನತ್ತು ಮಾಡಲಾಯ್ತು ಎಂಬುದಕ್ಕೆ ಅನುಮಾನದ ಸಂಗತಿಯೊಂದು ಪೂರಕ ಸಾಕ್ಷಿ ನೀಡುತ್ತಿದೆ. ಸದ್ಯದಲ್ಲಿಯೇ ಮೊಹಮ್ಮದ್ ಗೆ ಭಡ್ತಿ ಸಿಗುವ ಸಾಧ್ಯತೆ ಇತ್ತು. ಅದನ್ನ ತಪ್ಪಿಸಲು ಆತನನ್ನ ಶಿಕ್ಷೆಗೆ ಗುರಿಪಡಿಸಲಾಯ್ತೆ ಎಂಬುದೇ ಆ ಅನುಮಾನ.. 

ಇನ್ನೂ ಬಾನುಮತಿ ತನ್ನ ಮರಿಗಳಿಗೆ ಹಾಲು ಕೊಟ್ಟು ಬದುಕಿಸಿದ ಉದಾಹರಣೆಗಳು ಈ ಹಿಂದೆ ಇರಲಿಲ್ಲ. ಇದೇ ಕಾರಣಕ್ಕೆ ಮೊಹಮ್ಮದ್ ಬಾನುಮತಿ ತನ್ನ ಮರಿಗೆ ಹಾಲು ಕೊಟ್ಟು ಕರುಣಿಸಲಿ , ಅದರ ನಾಲ್ಕನೆ ಮರಿಯಾದರೂ ಉಳಿಯಲಿ ಎಂದು ಹಿಂದೂ ಹಾಗೂ ಮುಸಲ್ಮಾನ ರೀತಿಯಲ್ಲಿ ಹರಕೆ ಕಟ್ಟಿದ್ದ ವ್ಯಕ್ತಿ.. ಹಿಂದೂ ದೇವರುಗಳಿಗೆ ಹಾಗೂ ದರ್ಗಾಗಳಿಗೆ  ಹರಕೆ ಕಟ್ಟಿದ್ದ ಮೊಹಮ್ಮದ್​ ಹಾಗೂ ಆತನ ಕುಟುಂಬ ಇದೀಗ ಹರಕೆಯನ್ನು ತೀರಿಸಬೇಕಿತ್ತು ಅಷ್ಟರಲ್ಲಿ ಆತನನ್ನ ಹರಕೆಯ ಕುರಿಯಾಗಿಸಿದರಾ? ಗೊತ್ತಿಲ್ಲ

READ :ಚಿಕ್ಕಮಗಳೂರು ಆನೆ ಸಕ್ರೆಬೈಲ್ ಆನೆ ಬಿಡಾರಕ್ಕೆ ಬಂದಾಗ ನಡೀತು ಮನಕಲಕುವ ಈ ಘಟನೆ!

ಬಾನುಮತಿಯೇ ತನ್ನ ಮನೆ ದೇವರು ಎಂದುಕೊಂಡಿದ್ದ ಮೊಹಮ್ಮದ್ ಇದೀಗ ಝರ್ಜರಿತನಾಗಿದ್ದಾನೆ. ಸಂಪೂರ್ಣವಾಗಿ ಕುಸಿದಿರುವ ಆತ, ತನ್ನ ತಾಯಿಯಂತೆ ನೊಡಿಕೊಳ್ತಿದ್ದ ಆನೆಗೆ ನಾನ್ಯಾಕೆ ಹಿಂಸೆ ನೀಡಲಿ ಎಂದು ಕಣ್ಣೀರು ಹಾಕುತ್ತಾನೆ. ತನ್ನ ತಂದೆಯಿಂದ ಕಲಿತ ವೃತ್ತಿಯಲ್ಲಿ ,ತನ್ನ ತಂದೆ ಹೇಳಿಕೊಟ್ಟಿರುವ ನಿಯತ್ತು ಒಂದನ್ನೆ ಪಾಲಿಸಿಕೊಂಡು ಬಂದಿದ್ದೇನೆ ಎನ್ನುವ ಮೊಹಮ್ಮದ್ ಆನೆ ಎಂದರೇ ದೇವರು ಅದಕ್ಕೆ ಎಳ್ಳಷ್ಟು ನೋವುಕೊಟ್ಟರೂ ನಮ್ಮ ಮನೆಗೆ ನಾವೇ ಮಾಡಿದ ದ್ರೋಹವಾಗುತ್ತದೆ ಎನ್ನುತ್ತಾನೆ. 

ಪ್ರೀತಿಯಿಂದಷ್ಟೆ ಮೂಖ ಪ್ರಾಣಿಯ ಮನಸ್ಸನ್ನ ಗೆಲ್ಲಬಹುದು ಎನ್ನುವ ಮೊಹಮ್ಮದ್​ ಅಂತಹದ್ದೊಂದು ಕೃತ್ಯ ಎಸಗಲು ಸಾಧ್ಯವಾ? ಅಥವಾ ಆತನ ನಿರ್ಲಕ್ಷ್ಯ ಕೃತ್ಯಕ್ಕೆ ಕಾರಣವಾಯಿತೆ ? ಪ್ರಶ್ನೆಗೆ ಉತ್ತರ ಛೇ.. ಇಲ್ಲಾ ಕಣ್ರಿ… ಎನ್ನುತ್ತದೆ ಸಕ್ರೆಬೈಲ್ ಬಿಡಾರ.. 

READ :18 ಅಕೌಂಟ್​ನಲ್ಲಿ 80 ಲಕ್ಷ ನಕಲಿ ಚಿನ್ನದ ಸಾಲ! ಒಂದುವರೆ ಕೋಟಿ ಲೋನ್ ಕೇಳಿದಾಗ ಸಿಕ್ಕಿಬಿದ್ದಿದ್ದೇಗೆ ಗೊತ್ತಾ?

ಹಾಗಿದ್ರೂ ಮೊಹಮ್ಮದ್ ರ ಅಮಾನತ್ತು ಆಗಿದ್ದೇಕೆ? ಈ ಮೊದಲೇ ಹೇಳಿದಂತೆ ಇದರ ಹಿಂದೇ ಷಡ್ಯಂತ್ರವೊಂದು ಕೆಲಸ ಮಾಡಿದ ಹಾಗಿದೆ.. ಅದರ ಬಗ್ಗೆಯೇ ಮುಂದಿನ ಸರಣಿಯಲ್ಲಿ ಹೇಳುತ್ತೇವೆ.. ಅದರ ಬಗೆಗಿನ ಒಂದು ಕ್ಲೂ ರೂಪದ ಪ್ರಶ್ನೆ ಇಲ್ಲಿ ನೀಡುತ್ತಿದ್ದೇವೆ… ಎಂದಿಗೂ ಪರಸ್ಪರ ಒಟ್ಟಿಗೆ ಸೇರದ ನೇತ್ರಾ ಹಾಗೂ ಬಾನು ಘಟನೆ ದಿನ ಒಟ್ಟಿಗೆ ಏಕೆ ಇದ್ದವು !?