ತೀರ್ಥಹಳ್ಳಿ | ವರಾಹಿ ಹಿನ್ನೀರಿಗೆ ಹಾರಿ ಅಡಕೆ ಬೆಳೆಗಾರನ ದುರಂತ ಅಂತ್ಯ | ಸಾವಿಗೆ ಕಾರಣ ?

Thirthahalli | A arecanut grower died after jumping into the Varahi backwaters. What is the cause of death?. Leaf spot disease, Thirthahalli Taluk Report

ತೀರ್ಥಹಳ್ಳಿ | ವರಾಹಿ ಹಿನ್ನೀರಿಗೆ ಹಾರಿ ಅಡಕೆ ಬೆಳೆಗಾರನ ದುರಂತ ಅಂತ್ಯ | ಸಾವಿಗೆ ಕಾರಣ ?
Leaf spot disease, Thirthahalli Taluk Report, Thirthahalli |

SHIVAMOGGA | MALENADUTODAY NEWS | May 21, 2024  ಮಲೆನಾಡು ಟುಡೆ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹೊಸಹಳ್ಳಿ ಗ್ರಾಮ ಪಂಚಾಯಿತಿ ಉಂಟುರು ಕಟ್ಟೆ ಕೈಮರ ಗ್ರಾಮದ ಸಮೀಪ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರಾಹಿ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಇವತ್ತು ವರದಿಯಾಗಿದೆ. ಮೃತರನ್ನು ಉಮೇಶ್‌ ಎಂದು ಗುರುತಿಸಲಾಗಿದೆ. 

ಅತ್ತಿಗಾರ ಬೈಲು ಗ್ರಾಮದ 55 ವರ್ಷ ಉಮೇಶ್‌ ಅಡಕೆ ತೋಟ ಹೊಂದಿದ್ದರು. ಅಡಿಕೆ ಕೃಷಿಯಲ್ಲಿ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ವಿಧಿಯಾಟ, ಇವರ ತೋಟಕ್ಕೆ ಎಲೆಚುಕ್ಕಿ ರೋಗದಿಂದ ಬಳಲುತ್ತಿತ್ತು. ಏನೇ ಮಾಡಿದರೂ ರೋಗ ಪರಿಹಾರ ಕಾಣದೇ ತೋಟ ಕೈ ಬಿಟ್ಟುಹೋಗುವುದರಲ್ಲಿತ್ತು. ತೋಟ ಹಾಗೂ ಜೀವನಕ್ಕಾಗಿ ಸೊಸೈಟಿ ಸೇರಿದಂತೆ ವಿವಿಧೆಡೆ ಸಾಲ ಮಾಡಿಕೊಂಡಿದ್ದ ಉಮೇಶ್‌ ಅದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಆರು ತಿಂಗಳ ಹಿಂದೆ ಕೂಡ ಎಲೆಚುಕ್ಕಿ ರೋಗದಿಂದ ತೋಟ ಕಳೇದುಕೊಂಡ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು.