ಬಿಜೆಪಿ ಮತ್ತೊಂದು ಶಾಕ್‌ ಕೊಟ್ಟ ಕೆಎಸ್‌ ಈಶ್ವರಪ್ಪ | ರಾಷ್ಟ್ರ ಭಕ್ತ ಬಳಗಕ್ಕೆ ಮತ್ತೊಬ್ಬ ನಾಯಕನ ಸೇರ್ಪಡೆ

KS Eshwarappa gives another jolt to BJP | Another leader joins ratra bhakta balaga group KS Eshwarappa, K Ragapathi Bhat, Madan Gowda, Thirthahalli Politics, Shanthaveri Gopala Gowda

ಬಿಜೆಪಿ ಮತ್ತೊಂದು ಶಾಕ್‌ ಕೊಟ್ಟ ಕೆಎಸ್‌ ಈಶ್ವರಪ್ಪ | ರಾಷ್ಟ್ರ ಭಕ್ತ ಬಳಗಕ್ಕೆ ಮತ್ತೊಬ್ಬ ನಾಯಕನ ಸೇರ್ಪಡೆ
KS Eshwarappa, K Ragapathi Bhat, Madan Gowda, Thirthahalli Politics, Shanthaveri Gopala Gowda

SHIVAMOGGA | MALENADUTODAY NEWS | May 21, 2024  ಮಲೆನಾಡು ಟುಡೆ

ರಾಷ್ಟ್ರ ಭಕ್ತ ಬಳಗದಿಂದ ಶಿವಮೊಗ್ಗ ಬಿಜೆಪಿಗೆ ಮತ್ತೊಂದು ಶಾಕ್‌ ಎದುರಾಗಿದೆ. ಕೆಎಸ್‌ ಈಶ್ವರಪ್ಪ ಹಾಗೂ ರಘುಪತಿ ಭಟ್‌ ಬಳಿಕ ಇದೀಗ ತೀರ್ಥಹಳ್ಳಿ ಮದನ್‌ ಗೌಡರು ಬಿಜೆಪಿಯಿಂದ ವಿಮುಖರಾಗಿದ್ದಾರೆ. ಬಿಜೆಪಿಯಿಂದ ಎರಡು ಕಾಲು ಹೊರಗಿಟ್ಟ ತೀರ್ಥಹಳ್ಳಿಯ ಮದನ್..ರಘುಪತಿ ಭಟ್ ಬೆಂಬಲಿಸುವ ಮೂಲಕ ಅವರು ಬಂಡಾಯ ಸಾರಿದ್ದಷ್ಟೆ ಅಲ್ಲದೆ ಕೆಎಸ್‌ ಈಶ್ವರಪ್ಪನವರ ಬಣ ಸೇರಿದ್ದಾರೆ. 

ತೀರ್ಥಹಳ್ಳಿ ರಾಜಕೀಯದಲ್ಲಿ ರಾಜಕೀಯ ಸಂಚಲನ

ಪ್ರಜ್ಞಾವಂತ ಮತದಾರರಿರುವ ಕ್ಷೇತ್ರ ಎಂಬ ಹೆಗ್ಗಳಿಕೆ ಪಡೆದಿರುವ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಲೋಹಿಯ ಸಮಾಜವಾದಿ ಚಿಂತನೆಯ ಶಾಂತವೇರಿ ಗೋಪಾಲಗೌಡರಿಗೆ ಅಗ್ರಸ್ಥಾನವಿದೆ . ಯಾವುದೇ ಚುನಾವಣೆ ಬಂದಾಗಲೂ ಗೋಪಾಲಗೌಡರ ವಿಚಾರಧಾರೆಗಳನ್ನು ಹೇಳಿಯೇ ಅಭ್ಯರ್ಥಿಗಳು ಮತ ಕೇಳುವುದು ಪ್ರತೀತಿ . ಅಂತವರ ಮೊಮ್ಮಗ ಮದನ್ ಗೌಡ ಈಗ ತೀರ್ಥಹಳ್ಳಿಯ ಬಿಜೆಪಿ ರಾಜಕಾರಣದ ಪಲ್ಲಟಗಳಿಂದ ಬೇಸತ್ತು  ಈಗ ಕೆಎಸ್ ಈಶ್ವರಪ್ಪರ ನಾಯಕತ್ವದಲ್ಲಿ ರಾಷ್ಟ್ರಭಕ್ತರ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ರಘುಪತಿ ಭಟ್ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಸದ್ಯ ಅವರಿಗೆ ಕೆ.ಎಸ್ ಈಶ್ವರಪ್ಪ ಸಾಥ್ ನೀಡಿದ್ದು, ಈಶ್ವರಪ್ಪನವರ ಪರವಾಗಿ ಮದನ್‌ ಗೌಡರು ಬೆಂಬಲಕ್ಕೆ ನಿಂತಿದ್ದಾರೆ.  

ಇದಕ್ಕೆ ಸಾಕ್ಷಿ ಎಂಬಂತೆ ಇವತ್ತು  ಕೆ.ಎಸ್ ಈಶ್ವರಪ್ಪನವರ ನಿವಾಸದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮದನ್ ಗೌಡ್ರು ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು. ನಮ್ಮ ಬೆಂಬಲ ಕೆ.ಎಸ್ ಈಶ್ವರಪ್ಪನವರಿಗೆ ರಾಷ್ಚ್ರಬಳಗಕ್ಕೆ ಹಾಗು ರಘುಪತಿ ಭಟ್ ಗೆ ಎಂದು ಹೇಳುವ ಮೂಲಕ ಬಿಜೆಪಿಯಿಂದ ವಿಮುಖರಾಗಿರುವ ಸೂಚನೆ ಕೊಟ್ರು. 2019 ರಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಮದನ್ ಪಕ್ಷದಲ್ಲಿ ತಮ್ಮನ್ನು ನಡೆಸಿಕೊಂಡ ರೀತಿಗೆ ಸಾಕಷ್ಟು ಬೇಸರ ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ನನ್ನನ್ನು ವ್ಯವಸ್ಥಿತವಾಗಿ ಬದಿಗೆ ಸರಿಸಲಾಯಿತು. ಇದರಿಂದ ಬೇಸತ್ತು ಬಿಜೆಪಿ ತೊರೆಯುತ್ತಿರುವ ಬಗ್ಗೆ ಮದನ್ ಮಲೆನಾಡು ಟುಡೆಗೆ ಮಾಹಿತಿ ನೀಡಿದ್ದಾರೆ. 

ಜೆಡಿಎಸ್‌ನಿಂದ ಬಿಜೆಪಿವರೆಗೂ

ಈ ಹಿಂದೆ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ 22 ಸಾವಿರ ಮತಗಳನ್ನು ಪಡೆದಿದ್ದರು.2018ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಬೇಕೆಂಬ ಕಾರಣಕ್ಕೆ ಡಿಸಿಸಿ ಬ್ಯಾಂಕ್ ಅದ್ಯಕ್ಷರಾಗಿದ್ದ, ಆರ್.ಎಂ ಮಂಜುನಾಥ್ ಗೌಡರನ್ನು ಪಕ್ಷಕ್ಕೆ ತರೆತಂದು ಅಭ್ಯರ್ಥಿಯನ್ನು ಕಣಕ್ಕಿಳಿಸಿ ಪ್ರಚಾರ ನಡೆಸಿದ್ದರು.ಆದರೆ ನಂತರದ ದಿನಗಳಲ್ಲಿ  ಇವರಿಬ್ಬರ ಸ್ನೇಹ ಬಹುಕಾಲ ಉಳಿಯಲಿಲ್ಲ.ಆರ್.ಎಂ ಮಂಜುನಾಥ್ ಗೌಡ ಜೆಡಿಎಸ್ ಜಿಲ್ಲಾಧ್ಯಕ್ಷರಾದ ನಂತರ ತೀರ್ಥಹಳ್ಳಿಯ ಕ್ಷೇತ್ರವ್ಯಾಪ್ತಿಗೆ ಸಂಬಂಧಿಸಿದಂತೆ ಇಬ್ಬರಲ್ಲೂ ನಡೆದ ಜಟಾಪಟಿಯಿಂದ ಮುನಿಸು ಪ್ರಾರಂಭವಾಯಿತು. ಜೆಡಿಎಸ್ ಪಕ್ಷದ ಎಲ್ಲಾ ಕಾರ್ಯಕ್ರಮಗಳಿಂದಲೂ ಮದನ್ ರವರನ್ನು ದೂರವಿಡಲಾಯ್ತು. ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ಕಡೆಗಣಿಸಿದರು ಎಂಬ ಕಾರಣಕ್ಕೆ ಬೇಸೆತ್ತು ಮಧನ್ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ್ದರು.ಈ ಸಂದರ್ಭದಲ್ಲಿ ಜೆಡಿಎಸ್‌ ತೊರೆದು ಕಿಮ್ಮನೆ ರತ್ನಾಕರ್ ನೇತ್ರತ್ವದಲ್ಲಿ ಕಾಂಗ್ರೇಸ್ ಸೇರುತ್ತಾರೆಂದು ಹೇಳಲಾಗಿತ್ತು. ಆದರೆ ಅದನ್ನು ನಂಬಿದ್ದವರಿಗೆ ಮದನ್ ಬಿಜೆಪಿ ಸೇರುವ ಮೂಲಕ ಬಿಗ್ ಶಾಕ್ ನೀಡಿದ್ದರು. ಇದಕ್ಕೆ ಕಾರಣವೂ ಇತ್ತು. ಎಸ್.ಎಂ ಕೃಷ್ಣರಿಗೆ ಸಂಬಂಧಿಯಾಗಿರುವ ಮದನ್‌ ಗೌಡರು ಹಾಗು ಎಸ್‌ಎಂಕೆ ಪುತ್ರ ಸಿದ್ದಾರ್ಥ ರವರೊಂದಿಗೆ ಈ ಹಿಂದೆ ವ್ಯವಹಾರ ಹೊಂದಿದ್ದರು. ಈ ಬಾಂಧವ್ಯದ ಮೂಲಕ ಎಸ್.ಎಂ ಕೃಷ್ಣರ ಅಣತಿ ಮೇರೆಗೆ ಅವರು ಬಿಜೆಪಿ ಸೇರಿದ್ದು ಗುಟ್ಟಾಗಿ ಉಳಿದಿರಲಿಲ್ಲ.ತೀರ್ಥಹಳ್ಳಿಯಲ್ಲಿ ಆರಗ ಜ್ಞಾನೇಂದ್ರ ಹೊರತು ಪಡಿಸಿದರೆ,ಒಕ್ಕಲಿಗ ಸಮುದಾಯದ ಎರಡನೇ ಹಂತದ ನಾಯಕರಿರಲಿಲ್ಲ. ಈ ಕೊರತೆಯನ್ನು ಹೋಗಲಾಡಿಸಲು ಮದನ್ ಬಿಜೆಪಿ ಸೇರಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ ಬಿಜೆಪಿಯಲ್ಲಿ ಮದನ್ ರಾಜಕೀಯ ಭವಿಷ್ಯ ಕಮರಿತು ಬಿಟ್ಟರೆ ಬೆಳೆಯಲು ಸಾಧ್ಯವಾಗಲಿಲ್ಲ. ಸಮಾಜವಾದಿ ಚಿಂತನೆಯ ಕುಟುಂಬದ ಮೂಸೆಯಿಂದ ಬಂದ ಮದನ್ ಈಗ ರಾಷ್ಟ್ರಭಕ್ತರ ಬಳಗ ಸೇರಿಕೊಳ್ಳುವ ಮೂಲಕ ಈಶ್ವರಪ್ರರಿಗೆ ಶಕ್ತಿಯಾಗಿ ನಿಂತಿದ್ದಾರೆ.