ನನಗೂ ಸೆಟ್ಲ್ ಮೆಂಟ್ ಮಾಡಲು ಬರುತ್ತದೆ ಎಂದ ಕೆ.ಎಸ್​.ಈಶ್ವರಪ್ಪ! ಡಿಕೆಶಿ ವಿರುದ್ಧ ಸಿಟ್ಟಾಗಿದ್ದೇಕೆ ಮಾಜಿ ಡಿಸಿಎಂ ! ನಾಲ್ಕು ಮಾತು!

Former DCM KS Eshwarappa lashed out at DK Shivakumar in Shimogaಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆಎಸ್​ ಈಶ್ವರಪ್ಪ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು

ನನಗೂ ಸೆಟ್ಲ್ ಮೆಂಟ್ ಮಾಡಲು ಬರುತ್ತದೆ ಎಂದ ಕೆ.ಎಸ್​.ಈಶ್ವರಪ್ಪ! ಡಿಕೆಶಿ ವಿರುದ್ಧ ಸಿಟ್ಟಾಗಿದ್ದೇಕೆ ಮಾಜಿ ಡಿಸಿಎಂ ! ನಾಲ್ಕು ಮಾತು!

KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’

ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆಎಸ್​ ಈಶ್ವರಪ್ಪ ಸುದ್ದಿಗೋಷ್ಟಿ ನಡೆಸಿ ಕಾವೇರಿ ವಿಚಾರ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.  ರಾಜ್ಯದಲ್ಲಿ ಕಾವೇರಿ ನೀರಿನ ಸಮಸ್ಯೆ ಇಷ್ಟರ ಮಟ್ಟಿಗೆ ಉಲ್ಬಣವಾಗಲು ಡಿಸಿಎಂ ಡಿ.ಕೆ.ಶಿವಕುಮಾರ್ ಕಾರಣ ಎಂದು ಆರೋಪಿಸಿರುವ ಅವರು,  ಇಂಡಿಯಾ ಗ್ರೂಪ್ ನ ಸ್ಟಾಲಿನ್ ಹಾಗೂ ಸೋನಿಯಾ ಗಾಂಧಿಯನ್ನು ತೃಪ್ತಿಪಡಿಸಲು ಯಾರಿಗೂ ಕೇಳದೆ ಕದ್ದುಮುಚ್ಚಿ ನೀರು ಬಿಟ್ಟಿದ್ದಾರೆ ಎಂದು ದೂರಿದ್ದಾರೆ 

ನೀರು ಬಿಡುವ ಹಾಗೂ ನಂತರ ಏನು ಮಾಡಿದ್ದಾರೆ ಎಂಬುದು ಮುಖ್ಯವಾಗುತ್ತದೆ ಎಂದ ಅವರು,  ಸರ್ವಪಕ್ಷ ಸಭೆ ಕರೆಯದೆ, ನೀರಾವರಿ ತಜ್ಞರ ಸಭೆ ಕರೆಯದೆ ನೀರು ಬಿಟ್ಟಿರುವುದನ್ನ ಟೀಕಿಸಿದರು, ಬಂಗಾರಪ್ಪ ಸಿಎಂ ಆಗಿದ್ದಾಗ ಇಂತಹುದೇ ಪರಿಸ್ಥಿತಿ ಇತ್ತು ,ಆಗ ಅವರು ಎಲ್ಲಾ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡರು, ಅವರಿಗೆ ಇಡೀ ರಾಜ್ಯದ ಜನತೆ ಬೆಂಬಲವಾಗಿ ನಿಂತಿದ್ದಾರೆ, ಆದರೆ  ಡಿಕೆ ಶಿವಕುಮಾರ್ ಕೇವಲ ಸ್ಟಾಲಿನ್ ರನ್ನು ತೃಪ್ತಿಪಡಿಸಲು ನೀರು ಬಿಟ್ಟಿದ್ದಾರೆ, ಇದಾದ ನಂತರ ವಿವಿಧ ಪಕ್ಷದ ಪ್ರಮುಖರ ನೆರವು ಕೇಳುತ್ತಿದ್ದಾರೆ ಎಂದು ಆರೋಪಿಸಿದರು. 

ಕಾವೇರಿ ಡಿಕೆ  ಶಿವಕುಮಾರ್ ಸ್ವತ್ತಲ್ಲ, ಇದು ರಾಜ್ಯದ ಜನತೆಯ ಸೊತ್ತು. ಕದ್ದು ಮುಚ್ಚಿ ನೀರು ಬಿಟ್ಟ ಕಾರಣ ಶಿವಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ರು.  ತಾವು ಮಾಡಿದ ತಪ್ಪು ಮುಚ್ಚಿಕೊಳ್ಳಲು ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ ಎಂದ ಈಶ್ವರಪ್ಪನವರು, ರಾಜ್ಯದ ಎಲ್ಲಾ ಡ್ಯಾಂಗಳಿಗೆ ನೀರು ಬಿಟ್ಟು ಸಿಎಂ ಪರಿಸ್ಥಿತಿಯನ್ನು ಅವಲೋಕನ ಮಾಡಬೇಕು ಎಂದು ಒತ್ತಾಯಸಿದ್ರು.  

ಕಾಂಗ್ರೆಸ್ ಆಡಳಿತ ಕೇವಲ ಗ್ಯಾರಂಟಿ ಯೋಜನೆಗಷ್ಟೆ ಸೀಮೀತವಾಗಿದೆ,  ಹಿಂದಿನ ಬಿಜೆಪಿ ಸರ್ಕಾರದಲ್ಲಿದ್ದ ಪರಿಸ್ಥಿತಿಯೇ ಕಾಂಗ್ರೆಸ್‌ ಸರ್ಕಾರದಲ್ಲಿದೆ , ಇಡೀ ಕರ್ನಾಟಕ ಒಂದಾಗುವ ರೀತಿಯಲ್ಲಿ ಹೋರಾಟದ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟ ಈಶ್ವರಪ್ಪನವರು, ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಾಗಲೇ ಸರ್ಕಾರ ಮೇಲ್ಮನವಿ ಸಲ್ಲಿಸಬೇಕಿತ್ತು, ನಮ್ಮಲ್ಲೇ ನೀರಿಲ್ಲ, ಬೆಳೆಗಳು ಒಣಗುತ್ತಿವೆ. ಹೀಗಿರುವಾಗ ನೀರು ಬಿಡುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ್ದಾರೆ. 

ಈಶ್ವರಪ್ಪನವರ ಸೆಟ್ಲಮೆಂಟ್ ಆಗಿದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಉತ್ತರಿಸಿದ ಈಶ್ವರಪ್ಪ, ಅದು ಶಿವಕುಮಾರ್ ಅಲ್ಲ. ಅವರ ವಂಶಸ್ಥರಿಂದಲೂ ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದು, ಅವರು ಜೈಲಿನಲ್ಲಿದ್ದಾಗ ನಾನು ಏನಾಗಿದ್ದೆ ಎಂಬುದು ಶಿವಕುಮಾರ್ ಗೆ ಗೊತ್ತಿಲ್ಲವೇ ಎಂದು ವ್ಯಂಗ್ಯವಾಡಿದ್ರು. ಈಗವರು ಬೇಲ್ ನಲ್ಲಿದ್ದಾರೆ, ನಾನು ಹಾಗಿಲ್ಲ. ಯಾವಾಗ ಮತ್ತೆ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ, ಗೂಂಡಾಗಿರಿ ಮಾಡುವವರು ಆ ಪದ ಬಳಸುತ್ತಾರೆ ಎಂದಿದ್ದಾರೆ.  ರಾಜಕಾರಣದಲ್ಲಿ ಚಕ್ರ ತಿರುಗುತ್ತಿರುತ್ತದೆ. ಜೈಲಿನಿಂದ ಬಂದಾಗ ಯುದ್ದ ಗೆದ್ದು ಬಂದ ರೀತಿಯಲ್ಲಿ ಮೆರವಣಿಗೆ ಮಾಡಿಕೊಂಡು ಬಂದರಲ್ಲ ನಿಮಗೆ ನಾಚಿಕೆಯಾಗಲಿಲ್ಲವೇ

ಬಿಜೆಪಿ ಕೋಟ್ಯಾಂತರ ಜನ ಕಾರ್ಯಕರ್ತರಿದ್ದಾರೆ, ಅವರೆಲ್ಲರ ಸೆಟ್ಲ್ ಮೆಂಟ್ ಮಾಡುತ್ತೀರಾ.ನನಗೂ ಸೆಟ್ಲ್ ಮೆಂಟ್ ಮಾಡಲು ಬರುತ್ತದೆ, ಆದರೆ ನಾನು ಹಾಗೆ ಮಾತನಾಡಲಾರೆ. ಅವರ ಮಾತನ್ನು ಜನತೆ ಗಮನಿಸುತ್ತಾರೆ ಎಂದ ಈಶ್ವರಪ್ಪ ಜೆಡಿಎಸ್​ ಬಿಜೆಪಿ ಮೈತ್ರಿ  ಮೈತ್ರಿ ವಿಷಯದಲ್ಲಿ ದಿಲ್ಲಿಯಲ್ಲಿ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. 


ಇನ್ನಷ್ಟು ಸುದ್ದಿಗಳು