ಸಚಿವ ಮಧು ಬಂಗಾರಪ್ಪರವರ ಬೆನ್ನಿಗೆ ನಿಂತ ಈಡಿಗ ಸಮಾಜ! ಸ್ವಾಮೀಜಿ ಹೇಳಿಕೆ ಬಗ್ಗೆ ಏನಂತಾರೆ ಗೊತ್ತಾ ಮುಖಂಡರು!?

Malenadu Today

KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’

ಪ್ರಣವಾಂನದ ಶ್ರೀಗಳು ಈಡಿಗ ಸಮುದಾಯಕ್ಕೆ ಸೇರಿದವರೇ ಅಲ್ಲ ಎಂದು ಹೇಳಿಕೆ ನೀಡಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪರ ಹೇಳಿಕೆಯ ಪರವಾಗಿ ಶಿವಮೊಗ್ಗದಲ್ಲಿ ಈಡಿಗ ಸಂಘ ಸಚಿವರ ಮಾತನ್ನು ಸಮರ್ಥಿಸಿಕೊಂಡಿದೆ.   ಸೋಷಿಯಲ್ ಮಿಡಿಯಾದಲ್ಲಿ ಮಧು ಬಂಗಾರಪ್ಪ ಹಾಗು ಈಡಿಗ ಸಮುದಾಯದ ವಿರುದ್ಧ ಟ್ರೋಲ್ ಮಾಡಿದವರಿಗೆ ರಾಜ್ಯ ಈಡಿಗ ಸಂಘ ಎಚ್ಚರಿಕೆ ಸಂದೇಶ ರವಾನಿಸಿದೆ.

ಪ್ರಣಾವನಂದ ಶ್ರೀಗಳ ವಿರುದ್ಧ ಈಡಿಗ ಸಂಘ ಆಕ್ರೋಶ

ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಪ್ರಣವಾನಂದ ಶ್ರೀಗಳು ಈಡಿಗ ಸಮುದಾಯವರೆ ಅಲ್ಲ ಎಂದು ರಾಜ್ಯ ಆರ್ಯ ಈಡಿಗ ಸಂಘ ಹೇಳಿದೆ. ಬೆಂಗಳೂರಿನಲ್ಲಿ ಸಂಘದ ರಾಜ್ಯಾಧ್ಯಕ್ಷ ಡಾಕ್ಟರ್ ಎಂ ತಿಮ್ಮೆಗೌಡ ಸ್ವಯಂ ಘೋಷಿತ ಸ್ವಾಮೀಜಿಗಳೆಂದು ಹೇಳಿಕೊಂಡು ತಿರುಗುತ್ತಿರುವ ಪ್ರಣವಾನಂದ ಸ್ವಾಮೀಜಿಗೂ ನಮ್ಮ ಸಮುದಾಯದ ಸಂಘಕ್ಕೂ ಯಾವುದೇ ಸಂಭಂಧವಿಲ್ಲ ಎಂದು ಹೇಳಿದ್ದಾರೆ.

ಮಧು ಬಂಗಾರಪ್ಪ V/s ಪ್ರಣವಾನಂದ ಸ್ವಾಮೀಜಿ! ಅವರ ಆರೋಪಕ್ಕೆ ಸಚಿವರು ನೀಡಿದ ಉತ್ತರವೇನು?

ಇನ್ನೂ ಇದೇ ಮಾತನ್ನು ಈಡಿಗ ಸಮುದಾಯವೇ ಹೆಚ್ಚಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾ ಆರ್ಯ ಈಡಿಗ ಸಂಘ ಪತ್ರಿಕಾಗೋಷ್ಠಿ ನಡೆಸಿ ಹೇಳಿದೆ.  ಪ್ರಣವಾನಂದ ಶ್ರೀಗಳ ವಿರುದ್ಧ ವಾಗ್ದಾಳಿ ನಡೆಸಿದ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಪ್ರಣವಾನಂದ ಸ್ವಾಮೀಜಿ ಸಚಿವ ಮಧು ಬಂಗಾರಪ್ಪ ವಿರುದ್ದ ಅವಹೇಳನಕಾರಿ ಮಾತನಾಡಿದ್ದಾರೆ. ಮಧು ಬಂಗಾರಪ್ಪ ಅವರು‌ ಒಳ್ಳೆಯ ಕೆಲಸ ಮಾಡ್ತಿದ್ದಾರೆ ಎಂದಿದ್ದಾರೆ  

Malenadu Today

ಪ್ರಣವಾನಂದ ಸ್ವಾಮೀಜಿ ವೈಯಕ್ತಿಕವಾಗಿ ‌ನಾನು ಈಡಿಗ ಸ್ವಾಮೀಜಿ ಅನ್ನುತ್ತಿದ್ದಾ ಪ್ರಣವಾನಂದ ಸ್ವಾಮೀಜಿ ಸಮಾಜ ಒಡೆಯುವ ಕೆಲಸ ಮಾಡ್ತಿದ್ದಾರೆ. ಈಡಿಗ ಸಮಾಜಕ್ಕೆ ವಿಖ್ಯಾತನಂದ ಸ್ವಾಮೀಜಿ ಅವರು ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಅವರು ಈಡಿಗ ಸಮಾಜದ ಪೀಠಾಧಿಪತಿಯಲ್ಲ. ರಾಜ್ಯ ಈಡಿಗ ಸಂಘದ ತೀರ್ಮಾನಕ್ಕೆ ಜಿಲ್ಲಾ ಸಂಘ ಬದ್ದರಾಗಿದ್ದೇವೆ. ದಾರಿ ತಪ್ಪಿದಾಗ ಎಚ್ಚರಿಸುವ ಕೆಲಸ ಮಾಡಿದ್ದೇವೆ ಎಂದು ಶ್ರೀಧರ್ ಹುಲ್ತಿಕೊಪ್ಪ ಹೇಳಿದ್ದಾರೆ.


ಇನ್ನಷ್ಟು ಸುದ್ದಿಗಳು 

 


 

Share This Article