ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ | ಡಾ. ಧನಂಜಯ್‌ ಸರ್ಜಿ ಬೆಂಬಲಕ್ಕೆ ನಿಂತ ಎಂಪಿ ರೇಣುಕಾಚಾರ್ಯ

South West Graduate Constituency Election | Dr. MP Renukacharya supported Dhananjay Sarji

ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ | ಡಾ. ಧನಂಜಯ್‌ ಸರ್ಜಿ  ಬೆಂಬಲಕ್ಕೆ ನಿಂತ ಎಂಪಿ ರೇಣುಕಾಚಾರ್ಯ
Dr. MP Renukacharya ,Dhananjay Sarji,South West Graduate Constituency Election

SHIVAMOGGA | MALENADUTODAY NEWS | May 21, 2024  ಮಲೆನಾಡು ಟುಡೆ

ನೈರುತ್ಯ ಪದವೀದರ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಎಲ್ಲಾ ಅಭ್ಯರ್ಥಿಗಳು ತಮ್ಮ ತಮ್ಮ ಮತದಾರರನ್ನ ಸಂಪರ್ಕಿಸುವತ್ತ ಗಮನಹರಿಸಿದ್ದು, ವಿವಿಧ ಕಡೆಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಆಯಾ ಊರುಗಳಿಗೆ ಹೋಗಿ ಮತದಾರರ ಮನೆಗೆ ಕದ ತಟ್ಟುತ್ತಿದ್ದಾರೆ. ಎಸ್‌ಪಿ ದಿನೇಶ್‌ ಉಡುಪಿ ಭಾಗದಲ್ಲಿ ಪ್ರಚಾರ ನಡೆಸ್ತಿದ್ದಾರೆ. ಇತ್ತು  ನೈರುತ್ಯ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿರುವ ಡಾ.ಧನಂಜಯ ಸರ್ಜಿ ಹೊನ್ನಾಳಿ ಪ್ರಚಾರ ನಡೆಸಿದ್ದಾರೆ. ಅವರಿಗೆ ಎಂಪಿ ರೇಣುಕಾಚಾರ್ಯ ಸಾತ್‌ ಕೊಟ್ಟಿದ್ದಾರೆ. 

ಈ ವೇಳೆ ಮಾತನಾಡಿದ ಎಂಪಿ ರೇಣುಕಾಚಾರ್ಯ ಧನಂಜಯ್‌ ಸರ್ಜಿಯವರನ್ನು ಅತ್ಯಧಿಕ ಮತಗಳ  ಅಂತರದಿಂದ ಗೆಲ್ಲಿಸಿ ವಿಧಾನ ಪರಿನ ಪರಿಷತ್ ಗೆ ಕಳಿಸಿಕೊಡಬೇಕಿದೆ, ಈ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದಿದ್ದಾರೆ. ಹೊನ್ನಾಳಿ - ನ್ಯಾಮತಿ ಅವಳಿ ತಾಲೂಕುಗಳ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದ ಅವರು, ಆಡಳಿತದಲ್ಲಿ ಸರಕಾರ ಸಾಧನೆ ಶೂನ್ಯ. ಸರಕಾರದ ವೈಫಲ್ಯಗಳನ್ನು ಎತ್ತಿ ಹಿಡಿದು ಸಮಸ್ಯೆಗಳ ಪರಿಹಾರ ದೊರಕಿಸುವ ಸಾಮರ್ಥ್ಯ ಡಾ.ಸರ್ಜಿ ಅವರಿಗಿದೆ. ಈ ನಿಟ್ಟಿನಲ್ಲಿ ವೈದ್ಯ ಡಾ.ಧನಂಜಯ ಸರ್ಜಿ ಅವರನ್ನು ಪಕ್ಷವು ಸ್ಪರ್ಧೆಗಿಳಿಸಿದ್ದು,ನೂರಕ್ಕೆ ನೂರರಷ್ಟು ಗೆಲುವು ಖಚಿತ ಎಂದು ಭರವಸೆ ವ್ಯ ಕ್ತಪಡಿಸಿದರು. 

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಕುಬೇಂದ್ರಪ್ಪ ಮಾತನಾಡಿ, ಮಾನ್ಯ ನರೇಂದ್ರ ಮೋದಿ ಜೀ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ಮಹದಾಸೆಯೊಂದಿಗೆ  ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ನೀಡಿದ್ದಾರೆ, ಅದೇ ರೀತಿ ಪದವೀಧರರ ಪ್ರತಿನಿಧಿಯಾಗಿ ಡಾ.ಧನಂಜಯ ಸರ್ಜಿ ಅವರು ನಿಂತಿದ್ದಾರೆ, ಅವರಿಗೆ ಪ್ರಜ್ಞಾವಂತರೆಲ್ಲರೂ ಮತಗಳನ್ನು ನೀಡುವ ಮೂಲಕ  ಜಯಶೀಲರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು. 

ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್ ಮಾತನಾಡಿ, ನೈರುತ್ಯ ಪದವೀಧರರ ಕ್ಷೇತ್ರವು ಆರಂಭಗೊಂಡಾಗಿನಿಂದ ಆರು ಚುನಾವಣೆಗಳು ನಡೆದಿವೆ, ಆರೂ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ವಿಧಾನ ಪರಿಷತ್ ನಲ್ಲಿ ಧ್ವನಿ ಎತ್ತಿ ಪದವೀಧರರ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲರು ಎಂಬ ನಂಬಿಕೆಯಿಂದ ಪಕ್ಷ ತೀರ್ಮಾನ ಮಾಡಿ ಡಾ.ಧನಂಜಯ ಸರ್ಜಿ ಅವರಿಗೆ ಟಿಕೆಟ್ ನೀಡಿದೆ, ಹಾಗಾಗಿ ಸಮರ್ಥರಾಗಿರುವ ಇವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. 

ಉಳಿದಂತೆ  ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮಾತನಾಡಿ, ವೈದ್ಯನಾಗಿ ಸೇವೆಲ್ಲಿಸುತ್ತಿರುವ ನನಗೆ ಪದವೀಧರರ ಸಮಸ್ಯೆಗಳ ಸಂಪೂರ್ಣ ಅರಿವಿದೆ, ವಿಧಾನ ಪರಿಷತ್ ಗೆ ನನ್ನನ್ನು ಆಯ್ಕೆ ಮಾಡಿ ಕಳಿಸಿದರೆ ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲೆ, ಪ್ರತಿ ಮತದಾರರನ್ನು ವೈಯಕ್ತಿಕವಾಗಿ ಕಷ್ಟದ ಕೆಲಸ, ಹಾಗಾಗಿ ಕಾರ್ಯಕರ್ತರು ಪ್ರತಿ ತಲುಪಲು ಸಾಧ್ಯ,  ಈ ನಿಟ್ಟಿನಲ್ಲಿ ಗೆಲುವಿಗೆ ಕಾರಣರಾಗಬೇಕು ಎಂದು ವಿನಂತಿಸಿದರು.