ಡಾಕ್ಟರ್ ಪರವಾಗಿ ಇಬ್ಬರು ಮಾಜಿ ಸಚಿವರು, ಹಾಲಿ ಶಾಸಕರ ಮತಬೇಟೆ | ಉಡುಪಿಯಲ್ಲಿ ಹೇಗಿತ್ತು ಪ್ರಚಾರ ಇಲ್ಲಿದೆ ವಿವರ
Dr. Dhananjay Sarji, the BJP candidate for the Southwest Graduate constituency, is busy campaigning in Udupi. Pramod Madhwaraj, Kota Srinivas Poojary, and Yash Pal Suvarna are also campaigning for him.

SHIVAMOGGA | MALENADUTODAY NEWS | May 26, 2024 ಮಲೆನಾಡು ಟುಡೆ
ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಡಾ.ಧನಂಜಯ್ ಸರ್ಜಿ ಉಡುಪಿಯ ಮತದಾರರ ಮನವೊಲಿಕೆಯಲ್ಲಿ ನಿರತರಾಗಿದ್ದಾರೆ. ಇನ್ನೊಂದೆಡೆ ಅವರ ಪರವಾಗಿ ಪ್ರಮೋದ್ ಮದ್ವರಾಜ್ , ಕೋಟ ಶ್ರೀನಿವಾಸ್ ಪೂಜಾರಿ, ಯಶ್ ಪಾಲ್ ಸುವರ್ಣ ಮತಬೇಟೆ ನಡೆಸ್ತಿದ್ದಾರೆ.
ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮವರ ತಾಲೂಕಿನ ಇಂಡೆವೊರ್ ಸಾಫ್ಟ್ -ಟೆಕ್ ಸಂಸ್ಥೆಗೆ ಭೇಟಿ ನೀಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ ಅಲ್ಲಿನ ಆಡಳಿತ ವರ್ಗ , ಸಿಬ್ಬಂದಿ ವರ್ಗದವರಲ್ಲಿ ಪರಿಷತ್ ಚುನಾವಣೆಯಲ್ಲಿ ಬೆಂಬಲಿಸಿ ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಮತಯಾಚನೆ ಮಾಡಿದರು.
ಈ ವೇಳೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಕೋಟ ಶ್ರೀನಿವಾಸ್ ಪೂಜಾರಿ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು