ಸರ್ಜಿ ಪರ ಪ್ರಚಾರಕ್ಕಿಳಿದ ಪತ್ನಿ ನಮಿತಾ | ವೈದ್ಯರಿಂದಲೂ ಭರಪೂರ ಕ್ಯಾಂಪೇನ್‌ |

BJP candidate Dr. Dhananjay Sarji's wife Namitha Sarji campaigned for him in the South West Graduates constituency election. 

ಸರ್ಜಿ ಪರ ಪ್ರಚಾರಕ್ಕಿಳಿದ ಪತ್ನಿ ನಮಿತಾ | ವೈದ್ಯರಿಂದಲೂ ಭರಪೂರ ಕ್ಯಾಂಪೇನ್‌ |
BJP candidate Dr. Dhananjay Sarji, Dr. Dhananjay Sarji wife Namitha Sarji,South West Graduates constituency election 

SHIVAMOGGA | MALENADUTODAY NEWS | May 26, 2024  ಮಲೆನಾಡು ಟುಡೆ 

ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ ಪ್ರಚಾರ ರಂಗೇರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ್‌ ಸರ್ಜಿಯವರ ಪರವಾಗಿ ಅವರ ಪತ್ನಿ ನಮಿತಾ ಸರ್ಜಿ ಪ್ರಚಾರ ನಡೆಸಿದ್ದಾರೆ. ಪತಿಗೆ ಸಾಥ್‌ ನೀಡಿದ ಅವರು, ಶಿವಮೊಗ್ಗ ನಗರದ 8ನೇ ವಾರ್ಡಿನಲ್ಲಿ ಪದವೀಧರರನ್ನು ಭೇಟಿ ಮಾಡಿ ಮತಯಾಚನೆ ನಡೆಸಿದರು. 

ತಮ್ಮ ಪತಿಯನ್ನು ಅತಿಹೆಚ್ಚು ಮತಗಳಿಂದ ಗೆಲ್ಲಿಸಿಕೊಡುವಂತೆ ಮತಯಾಚಿಸಿದ ಅವರು, ಮತದಾರರ ಯೋಗಕ್ಷೇಮ ವಿಚಾರಿಸಿದ್ದು ವಿಶೇಷವಾಗಿತ್ತು. ಈ ವೇಳೆ  ಬಿಜೆಪಿ ನಗರ ಕಾರ್ಯದರ್ಶಿ ಪರಮೇಶ್ವರ ನಾಯ್ಕ,ನಗರ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ್ ಸ್ವಾಮಿ, ಮಹಿಳಾ ಪ್ರಮುಖರಾದ ತ್ರಿವೇಣಿ ಶ್ರೀಕಾಂತ್ ಹಾಗೂ ಬೂತ್ ಅಧ್ಯಕ್ಷೆ ಸರಳ, ಕಾರ್ಯದರ್ಶಿ ಮಂಜುಳಾ ಸೇರಿದಂತೆ ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು.ಡಾಕ್ಟರ್‌ಗಳ ಪ್ರಚಾರ

ಇನ್ನೊಂದೆಡೆ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ ಧನಂಜಯ್‌ ಸರ್ಜಿಯವರ ಪರವಾಗಿ ವೈದ್ಯರು ಸಹ ಪ್ರಚಾರ ನಡೆಸ್ತಿದ್ದಾರೆ. ಶಿಕ್ಷಕರನ್ನ, ಉಪನಾಸ್ಯಕರನ್ನು, ವಕೀಲರನ್ನು ಹೀಗೆ ಪದವೀಧರ ಮತದಾರ ಕ್ಷೇತ್ರದಲ್ಲಿ ಮತದಾನ ಹೊಂದಿರುವ ವ್ಯಕ್ತಿಗಳನ್ನು ಭೇಟಿಯಾಗುತ್ತಿರುವ ಸರ್ಜಿ ಬೆಂಬಲಿಗರು ಮತಯಾಚನೆ ನಡೆಸ್ತಿದ್ದಾರೆ. 

ಈ ನಿಟ್ಟಿನಲ್ಲಿ  ಸರ್ಜಿ ಆಸ್ಪತ್ರೆಗಳ ಸಮೂಹದ ನಿರ್ದೇಶಕಿ ನಮಿತಾ ಸರ್ಜಿ, ಬಾಳೆಕಾಯಿ ಮೋಹನ್, ಡಾ.ರಜತ್, ಡಾ.ಪ್ರಾಣೇಶ್, ನಾಗವೇಣಿ ಸರ್ಜಿ, ಪ್ರಸನ್ನ ಹಾಗೂ ಬಿಜೆಪಿ ಕಾರ್ಯಕರ್ತರು ಶಿವಮೊಗ್ಗ ನಗರದ ವಿವಿಧ ವಿದ್ಯಾ ಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲಿನ ಆಡಳಿತ ವರ್ಗ, ಉಪನ್ಯಾಸವರ್ಗ ಮತ್ತು ಸಿಬ್ಬಂದಿ ವರ್ಗದವರಲ್ಲಿ ಮತಯಾಚನೆ ನಡೆಸಿದ್ದಾರೆ.

BJP candidate Dr. Dhananjay Sarji's wife Namitha Sarji campaigned for him in the South West Graduates constituency election.