ಶಿವಮೊಗ್ಗ | ತಮ್ಮ ವಿರುದ್ಧದ ಆರೋಪಕ್ಕೆ ಉತ್ತರ ಕೊಟ್ಟ ಢಾ.ಧನಂಜಯ್‌ ಸರ್ಜಿ ! ಏನದು?

Dr. Dhananjay Sarji, BJP candidate for the South-West Graduates constituency, denied allegations against him in Shivamogga.

ಶಿವಮೊಗ್ಗ | ತಮ್ಮ ವಿರುದ್ಧದ ಆರೋಪಕ್ಕೆ ಉತ್ತರ ಕೊಟ್ಟ ಢಾ.ಧನಂಜಯ್‌ ಸರ್ಜಿ ! ಏನದು?
Dr. Dhananjay Sarji, BJP candidate, South-West Graduates constituency,

SHIVAMOGGA | MALENADUTODAY NEWS | Jun 1, 2024  ಮಲೆನಾಡು ಟುಡೆ

ಶಿವಮೊಗ್ಗದಲ್ಲಿ ತಮ್ಮ ವಿರುದ್ಧ ಮಾಡಿರುವ ಆರೋಪವನ್ನು ಅಲ್ಲಗಳೆದ ಡಾ.ಧನಂಜಯ್‌ ಸರ್ಜಿ ಕೈಲಾಗದವರ ಕೊನೆಯ ಅಸ್ತ್ರ ಎಂದರೆ ಅದು ಅಪಪ್ರಚಾರ ಎಂದು ಹೇಳಿದ್ದಾರೆ. ಈ ಸಂಬಂಧ ಹೊಳೆಹೊನ್ನೂರಿನಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಮತ ಪ್ರಚಾರದಲ್ಲಿ ತೊಡಗಿದ್ದ ವೇಳೆ ಮಾತನಾಡಿದ  ಬಿಜೆಪಿ ಅಭ್ಯರ್ಥಿ ಡಾ.ದನಂಜಯ ಸರ್ಜಿ ನನ್ನ ಗೆಲವುವು ಸಹಿಸಿದ  ವಿರೋಧಿಗಳು ನನ್ನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಪ್ರಾರಂಭಿಸಿದ್ದಾರೆ. ತಾವು ಗೆಲ್ಲುವುದಿಲ್ಲ ಎಂದು ಅವರಿಗೆ ಮನದಟ್ಟಾಗಿದೆ. ಆದ್ದರಿಂದ ಇಂತಹ ಕೃತ್ಯಕ್ಕೆ ಕೈಹಾಕಿದ್ದಾರೆ ಎಂದು ದೂರಿದ್ದಾರೆ. 

ಹೊಳೆಹೊನ್ನೂರು ಸಮೀಪದ ಮಾರಶೆಟ್ಟಿಹಳ್ಳಿ ಗ್ರಾಮದ ಮರಾಠ ಸಮುದಾಯ ಭವನದಲ್ಲಿ ಸರ್ಜಿ ಮತದಾರರೊಂದಿಗೆ ಸಂವಾಧ ನಡೆಸಿದರು. ಈ ವೇಳೆ  ಬಿಜೆಪಿ ರಾಜ್ಯ ಸಂಚಾಲಕ ದತ್ತಾತ್ರಿ, ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ಮುಖಂಡರಾದ ಷಡಾಕ್ಷರಪ್ಪ, ರಾಜೇಶ್ ಪಟೇಲ್, ಚಂದ್ರಕುಮಾರ್, ಕಲ್ಲಜ್ಜನಾಳ್ ಮಂಜುನಾಥ, ಸುಬ್ರಮಣಿ, ಎ.ಕೆ.ಮಹಾದೇವಪ್ಪ, ಶಾಂತಮ್ಮ, ಸಿದ್ದಪ್ಪ, ಸಾಗರ್ ಅರಕೆರೆ, ಯಡೇಹಳ್ಳಿ ಕಿರಣ್ ಕುಮಾರ್, ಬಸವರಾಜ್, ರಾಧಕೃಷ್ಣ ಸೇರಿ ಇನ್ನಿತರರು ಹಾಜರಿದ್ದರು.

Dr. Dhananjay Sarji, BJP candidate for the South-West Graduates constituency, denied allegations against him in Shivamogga.