ಸಿಗಂದೂರಿನಿಂದ ವಾಪಸ್ ಬರುವಾಗ ತಿರುವಿನಲ್ಲಿ ಬಿದ್ದ ಬೈಕ್ | ರಿಸ್ಕ್ ತೆಗೆದುಕೊಂಡ ಶಾಸಕ ಗೋಪಾಲಕೃಷ್ಣ ಬೇಳೂರು
sagara MLA Gopala Krishna Belur helped two people who were injured in a bike accident near Hosagunda on the Sagara National Highway.
SHIVAMOGGA | MALENADUTODAY NEWS | Jun 1, 2024 ಮಲೆನಾಡು ಟುಡೆ
ಮಲೆನಾಡು ಮಾನವೀಯತೆ ಮಡಿಲು ಅನ್ನುವುದನ್ನ ಶಿವಮೊಗ್ಗ ಜಿಲ್ಲೆ ಶಾಸಕರುಗಳು ಆಗಾಗ ಸಾಬೀತುಪಡಿಸುತ್ತಿರುತ್ತಾರೆ. ಇದಕ್ಕೀಗ ಮತ್ತೊಂದು ಘಟನೆ ಸೇರ್ಪಡೆಗೊಂಡಿದೆ. ಶಿವಮೊಗ್ಗದ ಸಾಗರ ತಾಲ್ಲೂಕು ಆನಂದಪುರ ಸಮೀಪದ ಹೊಸಗುಂದ ತಿರುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಅಪಘಾತವಾಗಿ ಇಬ್ಬರಿಗೆ ಸಣ್ಣ ಪುಟ್ಟ ಗಾಯಾಗಳಾಗಿತ್ತು. ಅವರು ಶಿವಮೊಗ್ಗದವರಾಗಿದ್ದು, ಸಿಗಂದೂರು ದೇವಸ್ಥಾನದಲ್ಲಿ ಪೂಜೆ ಮುಗಿಸಿ ಶಿವಮೊಗ್ಗದ ಕಡೆ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಹೊಸಗುಂದದ ತಿರುವಿನಲ್ಲಿ ಬೈಕ್ ಅಪಘಾತವಾಗಿ ಬಿದ್ದಿತ್ತು.
ಇನ್ನೂ ಇದೇ ವೇಳೆ ಸಾಗರದಿಂದ ವಿಧಾನ ಪರಿಷತ್ ಚುನಾವಣಾ ಪ್ರಚಾರಕ್ಕಾಗಿ ತೆರಳುತ್ತಿದ್ದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಬೈಕ್ ಅಪಘಾತವಾಗಿರುವುದನ್ನು ಗಮನಿಸಿದರು. ತಕ್ಷಣವೇ ತಮ್ಮ ವಾಹನವನ್ನು ನಿಲ್ಲಿಸಿ ಕೆಳಕ್ಕಿಳಿದು ಎಂತಾ ಆಯ್ತಾ..ಏ ನೋಡ್ರಾ ನೋಡ್ರಾ..ಬೇಗ..ಬೇಗ ಆಸ್ಪತ್ರೆಗೆ ಶಿಫ್ಟ್ ಮಾಡಿ, ಆಂಬುಲೆನ್ಸ್ ಬರದು ಲೇಟ್ ಆಗುತ್ತೆ, ತಮ್ಮ ಗಾಡಿಯಲ್ಲಿಯೇ ಶಿಫ್ಟ್ ಮಾಡಿಸಿ ಎಂದು ತಮ್ಮ ವಾಹನದಲ್ಲೇ ಸಾಗರದ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಜೊತೆಯಲ್ಲಿ ವೈದ್ಯರಿಗೆ ಕರೆ ಮಾಡಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದರು.
Shivamogga MLA Gopala Krishna Belur helped two people who were injured in a bike accident near Hosagunda on the Sagara National Highway.