ಸಾಗರದಲ್ಲಿ ಪ್ರತ್ಯಕ್ಷವಾದ ಪಲ್ಸರ್ ಗ್ಯಾಂಗ್! ವಿಳಾಸ ಕೇಳಿ ಚಿನ್ನ ಕದ್ದು ಎಸ್ಕೇಪ್​!

The accused who stole gold on the pretext of asking for an address in Sagar Pete have escapedಸಾಗರ ಪೇಟೆಯಲ್ಲಿ ವಿಳಾಸ ಕೇಳುವ ನೆಪದಲ್ಲಿ ಚಿನ್ನ ಕದ್ದು ಆರೋಪಿಗಳು ಪರಾರಿಯಾಗಿದ್ದಾರೆ

ಸಾಗರದಲ್ಲಿ ಪ್ರತ್ಯಕ್ಷವಾದ ಪಲ್ಸರ್ ಗ್ಯಾಂಗ್!  ವಿಳಾಸ ಕೇಳಿ ಚಿನ್ನ ಕದ್ದು ಎಸ್ಕೇಪ್​!

KARNATAKA NEWS/ ONLINE / Malenadu today/ Sep 16, 2023 SHIVAMOGGA NEWS  

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಪಟ್ಟಣ ವ್ಯಾಪ್ತಿಯಲ್ಲಿ ಸರಗಳ್ಳತನ ಬಗ್ಗೆ ವರದಿಯಾಗಿದೆ. ವಿಜಯಮ್ಮ ಎಂಬವರ ಮಾಂಗಲ್ಯ ಸರವನ್ನು ಸರಗಳ್ಳರು ಕದ್ದು ಪರಾರಿಯಾಗಿದ್ದಾರೆ. 

ಶಿವಮೊಗ್ಗ ನಗರದಲ್ಲಿ ಪಲ್ಸರ್ ಬೈಕ್​​​ನಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದವರ ಬಗ್ಗೆ ಈ ಹಿಂದೆ ವರದಿಯಾಗಿತ್ತು. ಇದೀಗ ಸಾಗರ ಪೇಟೆಯಲ್ಲಿ ಈ ಬಗ್ಗೆ ವರದಿಯಾಗಿದೆ 

ನಡೆದಿದ್ದೇನು?

ಪಟ್ಟಣದ ವಿನೋಬ ನಗರದ 65 ವರ್ಷದ ವಿಜಯಮ್ಮ ಎಂಬವರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಅಲ್ಲಿಗೆ ಪಲ್ಸರ್ ಬೈಕ್​ ನಲ್ಲಿ ಇಬ್ಬರು ಬಂದಿದ್ದಾರೆ. ಪಲ್ಸರ್‌ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ವಿಳಾಸ ಕೇಳುವ ನೆಪದಲ್ಲಿ ಮಾಂಗಲ್ಯ ಕೀಳಲು ಪ್ರಯತ್ನ ನಡೆಸಿದ್ದಾರೆ. ಈ ವೇಳೆ ಮಾಂಗಲ್ಯ ಸರ ತುಂಡಾಗಿದೆ. ಕೈಗೆ ಸಿಕ್ಕ 8 ಗ್ರಾಂ ತುಂಡು ಬಂಗಾರವನ್ನು ಕದ್ದು ಆರೋಪಿಗಳು ಪರಾರಿಯಾಗಿದ್ದಾರೆ. 

ಪ್ರಕರಣ ಸಂಬಂಧ ಪೊಲೀಸ್ ಇಲಾಖೆ ಗಂಭೀರವಾಗಿದ್ದು, ಈ ಸಂಬಂಧ ತನಿಖೆಯನ್ನು ಆರಂಭಿಸಿದೆ.  

 

ಮಾಂಸ ಮಾರಾಟ ನಿಷೇಧ 

ಸೆಪ್ಟಂಬರ್ 18 ರಂದು  ಗಣೇಶ ಚತುರ್ಥಿ ಪ್ರಯುಕ್ತ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. 

ಆದ್ದರಿಂದ ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಲು ಕೋರಿದೆ. ಈ ಆದೇಶವನ್ನು ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಆಯುಕ್ತರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ 

ಬೈಕ್​ ರ್ಯಾಲಿಗೆ ನಿಷೇಧ

ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಿನ್ನೆಲೆಯಲ್ಲಿ ಬಂದೋಬಸ್ತ್​ ಸಂಬಂಧ ಜಿಲ್ಲಾಡಳಿತ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದಕ್ಕೆ ಪೂರಕವೆಂಬಂತೆ ಶಿವಮೊಗ್ಗ ಜಿಲ್ಲಾಡಳಿತ ಈ ಅವಧಿಯಲ್ಲಿ ಬೈಕ್ ರ್ಯಾಲಿಯನ್ನು ನಿಷೇಧಿಸಿದೆ. 

ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬಗಳ ಆಚರಣೆ ಹಿನ್ನೆಲೆ ಜಿಲ್ಲಾದ್ಯಂತ ಕಾನೂನು ಸುವ್ಯವಸ್ಥೆ, ಸೌಹಾರ್ದತೆ ಮತ್ತು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸೆ.17ರಿಂದ ಅಕ್ಟೋಬರ್ 1ರವರೆಗೆ ಜಿಲ್ಲಾದ್ಯಂತ ಬೈಕ್‌ ರ್ಯಾಲಿ ನಡೆಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ  ಆರ್ ಆದೇಶಿಸಿದ್ದಾರೆ.

 


ಇನ್ನಷ್ಟು ಸುದ್ದಿಗಳು