ಜಸ್ಟ್ ಒಂದು ಎಸ್​ಎಂಎಸ್​ ನಿಮ್ಮ ಅಕೌಂಟ್ ಖಾಲಿ ಮಾಡಿಸುತ್ತೆ/ ಶಿವಮೊಗ್ಗದಲ್ಲಿ ನಡೆದ ಪ್ರಕರಣ ಇಲ್ಲಿದೆ ಓದಿ

ತಾವು ಮೋಸಕ್ಕೆ ಒಳಗಾಗಿರುವುದು ಗೊತ್ತಾಗುತ್ತಿದ್ದಂತೆ, ಮಹಿಳೆಯು ಪೊಲೀಸ್ ಕಂಪ್ಲೆಂಟ್ ದಾಖಲಿಸಿದ್ದಾರೆ. ಯಾವುದೇ ಅಧಿಕೃತ ಬ್ಯಾಂಕ್ ಅಥವಾ ಫೈನಾನ್ಶಿಯಲ್ ಕಂಪನಿಗಳು ಗ್ರಾಹಕರಿಂದ ಒಟಿಪಿ ಕೇಳುವುದಿಲ್ಲ. ಹಾಗೊಂದು ವೇಳೆ ಒಟಿಪಿ ಬ್ಯಾಂಕ್​ನಿಂದ ಬಂದರೂ ಅದರ ಜೊತೆಯಲ್ಲಿ ಈ ಒಟಿಪಿಯನ್ನು ಯಾರೊಂದಿಗು ಹಂಚಿಕೊಳ್ಳಬೇಡಿ

ಜಸ್ಟ್ ಒಂದು ಎಸ್​ಎಂಎಸ್​ ನಿಮ್ಮ ಅಕೌಂಟ್ ಖಾಲಿ ಮಾಡಿಸುತ್ತೆ/ ಶಿವಮೊಗ್ಗದಲ್ಲಿ ನಡೆದ ಪ್ರಕರಣ ಇಲ್ಲಿದೆ ಓದಿ

ಸೈಬರ್​ ಕ್ರೈಂ ಬಗ್ಗೆ ಪೊಲೀಸ್ ಇಲಾಖೆ ಎಚ್ಚರಿಕೆಯ ಸಂದೇಶಗಳನ್ನು ರವಾನಿಸುತ್ತಲೇ ಇದೆ. ಅಲ್ಲದೆ ಶಿವಮೊಗ್ಗ ಮಾಧ್ಯಮಗಳು ಸಹ ನಿರಂತರ ಈ ಬಗ್ಗೆ ಸುದ್ದಿ ಮಾಡುತ್ತಿವೆ. ಆದಾಗ್ಯು ಇಂತಹ ಮೋಸಗಳಿಗೆ ಜನರು ತುತ್ತಾಗುತ್ತಿದ್ದಾರೆ.ಇದಕ್ಕೆ ಪೂರಕವಾಗಿ ಸಾಗರ ತಾಲ್ಲೂಕಿನಲ್ಲೊಂದು ಘಟನೆ ನಡೆದಿದೆ. ಇಲ್ಲಿನ ಸಾಗರ ನಗರ ಪೊಲೀಸ್​ ಠಾಣೆಯಲ್ಲಿ ಕೇಸ್​ವೊಂದು ದಾಖಲಾಗಿದೆ. ಕೆಲದಿನಗಳ ಹಿಂದೆ ಇಲ್ಲಿನ ನಿವಾಸಿಯೊಬ್ಬರು ಬಂದ ಮೆಸೇಜ್​ವೊಂದನ್ನು ತಮ್ಮ ಬ್ಯಾಂಕ್ ಖಾತೆ ಇರುವ ಎಸ್​ಬಿಐ ನಿಂದ ಬಂದಿದೆ ಎಂದು ನಂಬಿ ಒಂದುವರೆ ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಇದನ್ನು ಸಹ ಓದಿ : ಸರ್ಕಾರಿ ಅಧಿಕಾರಿಗಳೇ ಹುಷಾರ್ |  ರಹಸ್ಯ ಕ್ಯಾರ್ಯಾಚರಣೆ ​ ಹೆಸರಿನಲ್ಲಿ ಹೆದರಿಸುವವರಿದ್ದಾರೆ? 

ನಡೆದಿದ್ದು ಏನು? 

ಮಹಿಳೆಯೊಬ್ಬರ ಮೊಬೈಲ್​ಗೆ ಸಾಲದ ವಿಚಾರವಾಗಿ ಎಸ್​ಎಂಎಸ್​ ಒಂದು ಬಂದಿದೆ. ಅದನ್ನು ನಂಬಿದ ಮಹಿಳೆ ಅದರ ಮೇಲೆ ಕ್ಲಿಕ್ ಮಾಡಿದ್ದಾರೆ. ಆಗ ಅವರಿಗೆ ಕ್ರಮವಾಗಿ ಪಾನ್ ಹಾಗು ಆಧಾರ್​ ನಂಬರ್​ ಕೇಳಿ ಪಡೆಯಲಾಗಿದೆ. ಆನಂತರ ಒಂದು ಒಟಿಪಿ ಬಂದಿದ್ದು ಅದನ್ನು ಸೆಂಡ್ ಮಾಡುವಂತೆ ತಿಳಿಸಿದ್ದಾರೆ. ತಮ್ಮ ಮೊಬೈಲ್​ಗೆ ಬಂದಿದ್ದ ಒಟಿಪಿಯನ್ನು ಮಹಿಳೆಯು ಕಳಿಸಿದ್ದಾರೆ. ಆ ತಕ್ಷಣವೇ ಅವರ ಅಕೌಂಟ್​ನಿಂದ 9300 ರೂಪಾಯಿ ಕಟ್ ಆಗಿದೆ. ಅದಾಗಿ ಎಂಟು ನಿಮಿಷದಲ್ಲಿ ಅವರ ಖಾತೆಯಿಂದ 1,47,600 ರೂಪಾಯಿ ಕಟ್ ಆಗಿದೆ.

ಇದನ್ನು ಸಹ ಓದಿ  : ಪಿಕಪ್​ಗೆ ಹೊರಟಿದ್ದ ಟೂರಿಸ್ಟ್ ಗಾಡಿ ಆಕ್ಸಿಡೆಂಟ್​, ಪಲ್ಟಿಯಾಗಿ ಮೋರಿಗೆ ಬಿದ್ದ ಬಸ್​

ತಾವು ಮೋಸಕ್ಕೆ ಒಳಗಾಗಿರುವುದು ಗೊತ್ತಾಗುತ್ತಿದ್ದಂತೆ, ಮಹಿಳೆಯು ಪೊಲೀಸ್ ಕಂಪ್ಲೆಂಟ್ ದಾಖಲಿಸಿದ್ದಾರೆ. ಯಾವುದೇ ಅಧಿಕೃತ ಬ್ಯಾಂಕ್ ಅಥವಾ ಫೈನಾನ್ಶಿಯಲ್ ಕಂಪನಿಗಳು ಗ್ರಾಹಕರಿಂದ ಒಟಿಪಿ ಕೇಳುವುದಿಲ್ಲ. ಹಾಗೊಂದು ವೇಳೆ ಒಟಿಪಿ ಬ್ಯಾಂಕ್​ನಿಂದ ಬಂದರೂ ಅದರ ಜೊತೆಯಲ್ಲಿ ಈ ಒಟಿಪಿಯನ್ನು ಯಾರೊಂದಿಗು ಹಂಚಿಕೊಳ್ಳಬೇಡಿ ಎಂದು ಸ್ಪಷ್ಟವಾಗಿ ನಮೂದಿಸಿರಲಾಗಿರುತ್ತದೆ. ಒಟಿಪಿಯನ್ನು ಕೇವಲ ಗ್ರಾಹಕರು ಖುದ್ದಾಗಿ ಬಳಸಲಷ್ಟೆ ಒದಗಿಸಲಾಗುತ್ತದೆ ಹೊರತು, ಅದನ್ನು ಇನ್ನೊಬ್ಬರಿಗೆ ನೀಡುವುದರಿಂದ ಬ್ಯಾಂಕ್ ಅಕೌಂಟ್ ಆಗುವ ಅಪಾಯ ಇರುತ್ತದೆ

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link