BREAKING NEWS : ಚುನಾವಣಾ ಕಣದಿಂದ ಹಿಂದೇ ಸರಿದರಾ ಡಾ.ಧನಂಜಯ್​ ಸರ್ಜಿ/ ಸದ್ಯದಲ್ಲಿಯೇ ಬಿಜೆಪಿಗೆ

ತಮ್ಮ ಹುಟ್ಟುಹಬ್ಬದ ದಿನದಂದು ಚುನಾವಣಾ ಕಣಕ್ಕೆ ಇಳಿಯುವ ಅಧಿಕೃತ ಸೂಚನೆ ಕೊಟ್ಟಿದ್ದ ಡಾ.ಧನಂಜಯ್ ಸರ್ಜಿಯವರು, ಆನಂತರ ಪಕ್ಷ ಯಾವುದು ಎಂಬ ತೀರ್ಮಾನದ ಬಗ್ಗೆ ಸಮಾಲೋಚನೆ ನಡೆಸ್ತಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸೂಚನೆಯು ಸಹ ಅವರ ಥಿಂಕ್ ಥ್ಯಾಂಕ್ ಟೀಮ್ ನಲ್ಲಿತ್ತು.

BREAKING NEWS :  ಚುನಾವಣಾ ಕಣದಿಂದ ಹಿಂದೇ ಸರಿದರಾ ಡಾ.ಧನಂಜಯ್​ ಸರ್ಜಿ/ ಸದ್ಯದಲ್ಲಿಯೇ ಬಿಜೆಪಿಗೆ
Dr. Dhananjay Sirji/ BJP soon

ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಕಳೆದ ಆರು ತಿಂಗಳಿನಿಂದ ಎಲ್ಲಾ ಪಕ್ಷಗಳಲ್ಲಿಯು ಸಂಚಲನ ಮೂಡಿಸಿದ್ದ ಡಾ. ಧನಂಜಯ್ ಸರ್ಜಿಯವರು ಚುನಾವಣಾ ಕಣದಿಂದ ಹಿಂದೆ ಸರಿದರಾ? ಹೀಗೊಂದು ಸುದ್ದಿ ಹಲವು ಮೂಲಗಳಲ್ಲಿ ಸ್ಪಷ್ಟಗೊಳ್ಳುತ್ತಿದೆ. 

ತಮ್ಮ ಹುಟ್ಟುಹಬ್ಬದ ದಿನದಂದು ಚುನಾವಣಾ ಕಣಕ್ಕೆ ಇಳಿಯುವ ಅಧಿಕೃತ ಸೂಚನೆ ಕೊಟ್ಟಿದ್ದ ಡಾ.ಧನಂಜಯ್ ಸರ್ಜಿಯವರು, ಆನಂತರ ಪಕ್ಷ ಯಾವುದು ಎಂಬ ತೀರ್ಮಾನದ ಬಗ್ಗೆ ಸಮಾಲೋಚನೆ ನಡೆಸ್ತಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸೂಚನೆಯು ಸಹ ಅವರ ಥಿಂಕ್ ಥ್ಯಾಂಕ್ ಟೀಮ್ ನಲ್ಲಿತ್ತು. 

ಆದರೆ ಇದೀಗ ಕಳೆದ ಮೂರು ನಾಲ್ಕು ದಿನಗಳಿಂದ ಧನಂಜಯ್ ಸರ್ಜಿತಯವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ಧಾರೆ ಎಂಬ ಮಾಹಿತಿಗಳು ಲಭ್ಯವಾಗುತ್ತಿದೆ. ಚುನಾವಣೆಗೆ ಅವರು ಸ್ಪರ್ಧಿಸುವುದಿಲ್ಲ, ಬದಲಾಗಿ ಬಿಜೆಪಿ ಸೇರುತ್ತಾರೆ ಎಂಬಂತಹ ಮಾತುಗಳು ವ್ಯಕ್ತವಾಗುತ್ತಿದೆ

ಏನಿದು ನಿರ್ಣಯ ಕಾರಣವೇನು?

ಸಿಕ್ಕಿರುವ ಮಾಹಿತಿಯ ಪ್ರಕಾರ, ಡಾ.ಧನಂಜಯ್ ಸರ್ಜಿಯವರು ಆಪ್ತರು ಹಾಗು ಕುಟುಂಬಸ್ಥರು ಈ ಬಗ್ಗೆ ಹಲವು ಸಲ ಸಮಾಲೋಚನೆ ನಡೆಸಿದ್ದು, ಅಲ್ಲಿ ಬಿಜೆಪಿ ಪರವಾದ ಅಭಿಪ್ರಾಯಗಳು ವ್ಯಕ್ತವಾಗಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಧನಂಜಯ್ ಸರ್ಜಿಯವರು ಬಿಜೆಪಿ ಸೇರಲಿದ್ದಾರೆ ಎಂಬ ವಿಚಾರ ಹೊರಕ್ಕೆ ಬಿದ್ದಿದೆ. 

ಡಾ.ಧನಂಜಯ್ ಸರ್ಜಿಯವರ ಆಪ್ತರು ಹಾಗೂ ಕುಟುಂಬಸ್ಥರು ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಧನಂಜಯ್ ಸರ್ಜಿಯವರು ಬಿಜೆಪಿಯ ಜೊತೆಗೆ ಗುರುತಿಸಿಕೊಳ್ಳಬೇಕು ಎಂಬ ನಿಲುವು ವ್ಯಕ್ತಪಡಿಸಿದ್ಧಾರೆ ಎನ್ನಲಾಗಿದೆ. 

ಮತ್ತೊಂದೆಡೆ ಹಾಲಿ ಶಾಸಕ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪನವರ ಪಾಳಯದಿಂದಲೂ ಡಾ.ಧನಂಜಯ್ ಸರ್ಜಿಯವರ ಮನವೊಲಿಸುವ ಪ್ರಯತ್ನಗಳು ನಡೆದಿವೆ ಎಂಬ ಮಾಹಿತಿಯಿದೆ. ಭವಿಷ್ಯದಲ್ಲಿ ಪರಿಷತ್ ಸ್ಥಾನ ಸಿಗುವ ವಿಶ್ವಾಸ ಭರವಸೆಗಳನ್ನ ತುಂಬಿದ್ಧಾರೆ ಎನ್ನಲಾಗುತ್ತಿದೆ.

 ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link