ಶಿವಮೊಗ್ಗ ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ನಲ್ಲಿರುವ ಗೊಂದಲದಂತೆ , ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಟಿಕೆಟ್ ಯಾರಿಗೆ ಎಂಬ ಗೊಂದಲ ಮುಂದುವರಿದಿತ್ತು. ಇವತ್ತು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಲ್ಲಿ ತೀರ್ಥಹಳ್ಳಿ ಕಾಂಗ್ರೆಸ್ ಮುಖಂಡರು, ಆಕಾಂಕ್ಷಿಗಳ ಬೆಂಬಲಿಗರ ಜೊತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಭೆ ನಡೆಸಿದ್ದಾರೆ.
ಬೆಂಗಳೂರಲ್ಲಿ ತೀರ್ಥಹಳ್ಳಿ ಸಭೆ
ಬೆಳಗ್ಗೆಯಿಂದ ನಡೆದ ಸಭೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಅವರ ಬೆಂಬಲಿಗರು ಮತ್ತು ಆರ್ಎಂ ಮಂಜುನಾಥ್ ಗೌಡರು ಹಾಗೂ ಅವರ ಬೆಂಬಲಿಗರ ಜೊತೆ ಕೆಪಿಸಿಸಿ ಅಧ್ಯಕ್ಷರು ಪ್ರತ್ಯೇಕ ಸಭೆ ನಡೆಸಿದ್ದಾರೆ. ಆನಂತರ ಇಬ್ಬರು ಮುಖಂಡರನ್ನು ಎದುರು ಕೂರಿಸಿಕೊಂಡು ಡಿ.ಕೆ.ಶಿವಕುಮಾರ್ ಸಮಾಲೋಚನೆ ನಡೆಸಿದ್ದಾರೆ.
ಸುದೀರ್ಘವಾಗಿ ಚರ್ಚಿಸಿದ ಅಧ್ಯಕ್ಷರು ಅಂತಿಮವಾಗಿ ತೀರ್ಥಹಳ್ಳಿಯಲ್ಲಿ ಈ ಮೊದಲು ಬಹಿರಂಗ ಸಭೆಯಲ್ಲಿ ಹೇಳಿದಂತೆ ಒಬ್ಬರು ಎಂಎಲ್ಎ ಸ್ಥಾನಕ್ಕೆ ಮತ್ತೊಬ್ಬರು ಎಂಎಲ್ಸಿ ಸ್ಥಾನಕ್ಕೆ ಎಂದು ಸಂಧಾನ ಮೂಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಏಕೆಂದರೆ, ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನೂ ಸಹ ಹೊರಬಿದ್ದಿಲ್ಲ.
ಟಾರ್ಗೆಟ್ ಆರಗ ಜ್ಞಾನೇಂದ್ರ
ಈ ಹಿಂದೆ ಕಾಂಗ್ರೆಸ್ನಲ್ಲಿದ್ದ ಆರ್ಎಂ ಮಂಜುನಾಥ್ ಗೌಡರಿಗೆ ಟಿಕೆಟ್ ನೀಡಲು ಆಗಲಿಲ್ಲ, ಅವರ ಬದಲಿಗೆ ಕಿಮ್ಮನೆ ರತ್ನಾಕರ್ರವರಿಗೆ ನೀಡಲಾಗಿತ್ತು. ಆನಂತರ ಅವರು ಎರಡು ಸಲ ಗೆದ್ದು ಒಂದು ಸಲ ಸಚಿವರಾಗಿದ್ದರು. ಇದೇ ವಿಚಾರವೂ ಸಂಧಾನ ಸಭೆಯಲ್ಲಿಯು ಪ್ರಸ್ತಾಪವಾಗಿದೆ. ಅಲ್ಲದೆ ಆರಗ ಜ್ಞಾನೇಂದ್ರರವರನ್ನು ಸೋಲಿಸಲು ಆರ್ಎಂ ಮಂಜುನಾಥ್ ಗೌಡ ಮತ್ತು ಕಿಮ್ಮನೆ ರತ್ನಾಕರ್ ರವರ ನಡುವಿನ ಒಗ್ಗಟ್ಟು ಮುಖ್ಯ ಎಂಬುದನ್ನು ಒತ್ತುಕೊಟ್ಟು ಅರ್ಥೈಸಿಲಾಗಿದೆ. ಈ ಹಿನ್ನೆಲೆಯಲ್ಲಿ ಸಂಧಾನ ಮೂಡಿದ್ದು ಬಹುತೇಕ ಕಿಮ್ಮನೆ ರತ್ನಾಕರ್ರವರಿಗೆ ಟಿಕೆಟ್ ಫೈನಲ್ ಆಗಲಿದೆ ಎಂಬ ಮೂಡ್, ಕಾಂಗ್ರೆಸ್ ವಲಯದಲ್ಲಿ ಕಂಡು ಬರುತ್ತಿದೆ. ಈ ಬಗ್ಗೆ ಅಧಿಕೃತ ಘೋಷಣೆ ಹೊರಬಿದ್ದಾಗಲಷ್ಟೆ ಗೊಂದಲ ತಿಳಿಯಲಾಗಲಿದೆ.
congress ticket,congress,congress candidates list,ticket cost for congress party in karnataka,karnataka congress,congress ticket list,congress high command,congress ticket aspirants,ticket fight in karnataka congress,dissidence in congress over ticket,congress mla tickets,congress ticket announcement,congress election ticket,karnataka congress candidates list,congress 100 candidates list,congress 2nd list of candidates,congress 124 candidates,Kimmane Ratnakar, RM Manjunath Gowda, Congress ticket, Thirthahalli Assembly constituency, Thirthahalli Congress candidate, Thirthahalli Congress ticket, KPCC, former minister Kimmane Ratnakar, Araga Jnanendra, Congress leader RMM. ಕಿಮ್ಮನೆ ರತ್ನಾಕರ್, ಆರ್ಎಂ ಮಂಜುನಾಥ್ ಗೌಡ, ಕಾಂಗ್ರೆಸ್ ಟಿಕೆಟ್, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ, ತೀರ್ಥಹಳ್ಳಿ ಕಾಂಗ್ರೆಸ್ ಅಭ್ಯರ್ಥಿ, ತೀರ್ಥಹಳ್ಳಿ ಕಾಂಗ್ರೆಸ್ ಟಿಕೆಟ್, ಕೆಪಿಸಿಸಿ , ಮಾಜಿ ಸಚಿವ ಕಿಮ್ಮನೆರತ್ನಾಕರ್, ಆರಗ ಜ್ಞಾನೇಂದ್ರ, ಕಾಂಗ್ರೆಸ್ ಮುಖಂಡ ಆರ್ಎಂಎಂ,

.jpeg)
